ಶಿಕ್ಷಣ ಇಲಾಖೆ ನೌಕರರಿಗೆ ಗುಡ್ ನ್ಯೂಸ್ : ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ

ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಂತ ನೌಕರರನ್ನು, ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಮುಂಬಡ್ತಿ ನೀಡಿ, ಇದೀಗ ರಾಜ್ಯ ಸರ್ಕಾರ ಆದೇಶಿಸಿದೆ. ಈ ಮೂಲಕ ಶಿಕ್ಷಣ ಇಲಾಖೆಯ SDA ನೌಕರರಿಗೆ ಗುಡ್ ನ್ಯೂಸ್ ನೀಡಿದೆ.

 

ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದಂತ ಡಾ.ರೂಪಶ್ರೀ ಅವರು ಆದೇಶ ಹೊರಡಿಸಿದ್ದು, ಇಲಾಖೆಯ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಸಹಾಯಕ, ಬೆರಳಚ್ಚುಗಾರರುಗಳಿಗೆ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಮುಂಬಡ್ತಿ ಸಂಬಂಧ ಜೇಷ್ಟತಾ ಪಟ್ಟಿಯನ್ನು ಆಧರಿಸಿ, ನೌಕರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ನೌಕರರುಗಳಿಗೆ ಸಂಬಂಧಿಸಿದಂತೆ 2017-18 ರಿಂದ 2021-22ನೇ ಸಾಲಿನವರೆಗಿನ 5 ವರ್ಷಗಳ ಕಾರ್ಯ ನಿರ್ವಹಣಾ ವರದಿಗಳನ್ನು, ಶಿಸ್ತು ಪ್ರಕರಣ ಬಾಕಿ ಇಲ್ಲದೇ ಇರುವ ಬಗ್ಗೆ ಉಪ ನಿರ್ದೇಶಕರಿಂದ ದೃಢೀಕರಿಸಲ್ಪಟ್ಟ ದೃಢೀಕರಣ ಪತ್ರ ಹಾಗೂ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರುವ ಬಗ್ಗೆ ಪ್ರಮಾಣ ಪತ್ರಗಳ ದೃಢೀಕರಣ ಪತ್ರಿಗಳನ್ನು ಸಲ್ಲಿಸಲು ತಿಳಿಸಿದ್ದಾರೆ.

Leave A Reply

Your email address will not be published.