ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯರಿಗೆ ಬಸ್‌ನ ಸಿಬ್ಬಂದಿ ಸಹಿತ ನಾಲ್ವರಿಂದ ಕಿರುಕುಳ | ಆರೋಪಿಗಳು ವಶಕ್ಕೆ

ಉಡುಪಿ : ಕುಂದಾಪುರದ ಕಡೆಗೆ ತೆರಳುವ ಖಾಸಗಿ ಬಸ್ಸಿನಲ್ಲಿ ಮಹಿಳೆಯರಿಗೆ ಬಸ್ಸಿನ ಸಿಬ್ಬಂದಿ ಕಿರುಕುಳ ನೀಡಿದ ಘಟನೆಯೊಂದು ನಡೆದಿದೆ.

 

ಉಡುಪಿಯಿಂದ ಕುಂದಾಪುರದ ಕಡೆ ಹೊರಟ ಎ.ಕೆ.ಎಂ.ಎಸ್.ಎಂಬಾ ಬಸ್ಸಿನಲ್ಲಿ ಯುವತಿಯರು ಬ್ರಹ್ಮಾವರ ಕಡೆಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಬಸ್ಸಿನ ಸಿಬ್ಬಂದಿ ಸಹಿತ ನಾಲ್ವರು ಯುವತಿಯರಿಗೆ ಕಿರುಕುಳ ನೀಡಿದ್ದಾರೆ.

ಇದರಿಂದ ಭಯಗೊಂಡ ಯುವತಿಯರು ಕೂಡಲೇ ಸಂತೆಕಟ್ಟೆಯಲ್ಲಿ ಇಳಿದು ಇನ್ನೊಂದು ಬಸ್ಸು ಹಿಡಿದು ತೆರಳಿದ್ದಾರೆ. ಬಳಿಕ ಇನ್ನೊಂದು ಬಸ್ಸಿನ ಕಂಡಕ್ಟರ್ ಬಳಿ ತಮಗೆ ಆದ ಕಿರುಕುಳದ ಬಗ್ಗೆ ಮಾಹಿತಿ ಹೇಳಿದ್ದು. ನಂತರ ಬಸ್ ಕಂಡಕ್ಟರ್ ಅಲ್ಲಿಂದ ಕುಂದಾಪುರದ ಬಸ್ ಏಜೆಂಟರಿಗೆ ವಿಷಯ ಮುಟ್ಟಿಸಿ ಕುಂದಾಪುರ ಪೊಲೀಸ್ ಠಾಣೆಗೆ ಮಾಹಿತಿ ಸಿಗುವಂತೆ ಮಾಡಿದ್ದಾನೆ.

ಪೊಲೀಸರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.