SHOCKING NEWS | ಒಳ ಉಡುಪು ತೆಗೆದು ಪರೀಕ್ಷೆ ಬರೆಯಲು ವಿದ್ಯಾರ್ಥಿನಿಗೆ ಸೂಚನೆ ನೀಡಿದ ಕಾಲೇಜು!!!
ಇದೆಂಥಾ ಆಘಾತಕಾರಿ ವಿಷಯ. ಪರೀಕ್ಷೆ ವಿದ್ಯಾರ್ಥಿನಿಯೋರ್ವಳಿಗೆ ಒಳ ಉಡುಪು ಕಳಚಲು ಹೇಳಿದ ಆಘಾತಕಾರಿ ಘಟನೆಯೊಂದು ನಡೆದಿದೆ. ಕೇರಳದ ಕೊಲ್ಲಂ ಜಿಲ್ಲೆಯ ಚಡಮಂಗಳದ ಮಾರ್ಥೋಮಾ ಇನ್ಸ್ ಟಿಟ್ಯೂಟ್ ಆಫ್ ಇನ್ಸಾರ್ಮೇಶನ್ ಸೆಂಟರ್ ನ NEET ಪರೀಕ್ಷಾ ಕೇಂದ್ರದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದಾಗಿ ಆರೋಪ ಕೇಳಿಬಂದಿದೆ.
NEET 2022 ಪರೀಕ್ಷೆಯಲ್ಲಿ ಪರೀಕ್ಷೆ ಕೊಠಡಿ ಪ್ರವೇಶಿಸಲು ವಿದ್ಯಾರ್ಥಿನಿಯೋಬ್ಬಳಿಗೆ ಒಳ ಉಡುಪು ಕಳಚುವಂತೆ ಸೂಚಿಸಲಾಗಿದೆ.
ವಿದ್ಯಾರ್ಥಿನಿಯ ಪೋಷಕರು ಈಗಾಗಲೇ ದೂರು ದಾಖಲಿಸಿದ್ದಾರೆ. ಒಳ ಉಡುಪು ಕಳಚಿ ಪರೀಕ್ಷಾ ಕೇಂದ್ರ ಪ್ರವೇಶಿಸಲು ಹೇಳಿದ್ದರಿಂದ ವಿದ್ಯಾರ್ಥಿನಿಯ ಮೇಲೆ ಮಾನಸಿಕ ಆಘಾತ ಬೀರಿದೆ. ಹಾಗಾಗಿ ಉತ್ತಮವಾಗಿ ಪರೀಕ್ಷೆ ಎದುರಿಸಲು ಸಾಧ್ಯವಾಗಿಲ್ಲ ಎಂದು ವಿದ್ಯಾರ್ಥಿನಿಯ ಪೋಷಕರು ಕೊಲ್ಲಂ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಆದರೆ ಈ ಘಟನೆಯ ಕುರಿತು ಸ್ಥಳೀಯ ನೀಟ್ ಪರೀಕ್ಷಾ ಕೇಂದ್ರ ಜವಾಬ್ದಾರಿ ತೆಗೆದುಕೊಳ್ಳಲು ನಿರಾಕರಿಸಿದ್ದು, ಫ್ರಿಸ್ಕಿಂಗ್ ಮತ್ತು ಬಯೋಮೆಟ್ರಿಕ್ ತಪಾಸಣೆಯನ್ನು ಏಜೆನ್ಸಿಗಳಿಗೆ ವಹಿಸಲಾಗಿತ್ತು ಎಂದು ತಿಳಿಸಿದೆ. ಪರೀಕ್ಷೆಯನ್ನು ತೆಗೆದುಕೊಳ್ಳುವ ಮೊದಲು ತಮ್ಮ ಒಳ ಉಡುಪನ್ನು ತೆಗೆಯುವಂತೆ ಆರಂಭಿಕ 100 ವಿದ್ಯಾರ್ಥಿನಿಯರನ್ನು ಭಾನುವಾರ ಅವಮಾನಿಸಲಾಗಿದೆ. ಡ್ರೆಸ್ ಕೋಡ್ ಪ್ರಕಾರ, ವಿದ್ಯಾರ್ಥಿಗಳು ಪರೀಕ್ಷಾ ಹಾಲ್‌ಗೆ ಪ್ರವೇಶಿಸುವಾಗ ಯಾವುದೇ ಲೋಹದ ವಸ್ತು ಅಥವಾ ಪರಿಕರಗಳನ್ನು ಧರಿಸಲು ಮಾತ್ರವಷ್ಟೇ ಅನುಮತಿ ಇದ್ದಿರಲಿಲ್ಲ. ಆದರೆ ವಿದ್ಯಾರ್ಥಿನಿಯರ ಬಳಿ ಒಳ ಉಡುಪನ್ನು ತೆಗೆದಿರು ಇಡುವಂತೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಹೇಳಿದ್ದಾಗಿ ಆರೋಪ ಕೇಳಿಬಂದಿದೆ. ಈ ಕುರಿತು ವಿದ್ಯಾರ್ಥಿನಿಯೋರ್ವಳ ಪೋಷಕರು ಪೊಲೀಸ್ ದೂರು ದಾಖಲಿಸಿದ್ದಾರೆ.
NEET ಪರೀಕ್ಷಾ ಕೇಂದ್ರಗಳಲ್ಲಿ ಮಹಿಳಾ ವಿದ್ಯಾರ್ಥಿಗಳು ಈ ರೀತಿಯ ಕಿರುಕುಳವನ್ನು ಎದುರಿಸುತ್ತಿರುವುದು ಇದೇ ಮೊದಲಲಲ್ಲ. ಕಳೆದ ವರ್ಷ ಕೂಡಾ ಸಹ ಇದೇ ರೀತಿಯ ಆಘಾತಕಾರಿ ಘಟನೆಗಳು ನಡೆದಿದ್ದವು.
ಪರೀಕ್ಷೆ ಎಂಬುದು ವಿದ್ಯಾರ್ಥಿಗಳ ಪಾಲಿಗೆ ಅತ್ಯಂತ ಮಹತ್ವದ್ದು. ಆದರೆ ಪರೀಕ್ಷಾ ಕೇಂದ್ರದ ಒಳ ಹೊಕ್ಕುವ ಮುನ್ನವೇ ಇಂತಹ ಮಾನಸಿಕ ಆಘಾತ ನಡೆದಲ್ಲಿ ಉತ್ತಮವಾಗಿ ಪರೀಕ್ಷೆಯನ್ನು ಎದುರಿಸಲು ಯಾರಿಂದಲೂ ಸಾಧ್ಯವಾಗದು.