ಪವಿತ್ರ ಲೋಕೇಶ್ Video ಬಿಡುಗಡೆ । ‘ ಆಂಟಿ ಬಾನೆ ಉಂದಿ ‘ ಎಂದ ಜನ ಏನೆಲ್ಲಾ ರಿಪ್ಲೈ ಕೊಟ್ರು ಅಂತ ನೋಡಿದ್ರೆ ನೀವ್ ಸುಸ್ತಾಗ್ತೀರಾ !

‘ ಆತನ ಹೆಂಡತಿಗೆ ದುಡ್ಡು ಬೇಕು, ಆತನಿಗೆ ಪವಿತ್ರ ಬೇಕು, ಪವಿತ್ರಾಗೆ ಆತ ಮತ್ತು ದುಡ್ಡು ಎರಡೂ ಬೇಕು, ಮಾಧ್ಯಮಕ್ಕೆ ಟಿ ಆರ್ ಪಿ ಬೇಕು, ನಮ್ಮಂತ ಜನರಿಗೆ ಟೈಮ್ ಪಾಸ್ ಮಾಡಲು ಗಾಸಿಪ್ ಬೇಕು !’- ಜನರ ಥರಾವರಿ ಕಾಮೆಂಟ್ಸ್ !

 

ಕನ್ನಡದ ಹಾಸ್ಯ ನಟ ಮೈಸೂರು ಲೋಕೇಶ್ ಅವರ ಪುತ್ರಿ ಪವಿತ್ರ ಲೋಕೇಶ್ ಹಾಗೂ ತೆಲುಗು ನಟ ಕೃಷ್ಣ ಅವರ ಎರಡನೇ ಹೆಂಡತಿಯ ಮೊದಲ ಮಗ ನರೇಶ್ ಅವರ ನಡುವಿನ ವಿಚಾರಗಳು ಕಳೆದ 15 ದಿನಗಳಿಂದ ಸುದ್ದಿಯಾಗುತ್ತಲೇ ಇದ್ದು ಅವು ಕನ್ನಡ ಮತ್ತು ತೆಲುಗು ಚಿತ್ರರಂಗವನ್ನು ಒಂದೆರಡು ವಾರಗಳ ಮಟ್ಟಿಗೆ ಜೋಡಿಸಿತ್ತು. ಆ ಮಟ್ಟಿಗೆ ಒಂದೇ ಸಬ್ಜೆಕ್ಟ್ ‘ ಟಾಕ್ ಆಫ್ ದ ಟೌನ್ ನಿಂದಾ ಕೆಳಗೆ ಇಳಿದು, ಪೇಟೆ ಸುತ್ತಿ, ಪಟ್ಟಣ ಬಳಸಿ, ಹಳ್ಳಿಗೆ ಇಳಿದು, ಬೀದಿಗೆ ಬಿದ್ದು ಬಾಯ್ಚಪಲದ ಜನರಿಗೆ ಸಕತ್ ಟೈಂಪಾಸ್ ಮ್ಯಾಟರ್ ಅನ್ನು ಮತ್ತು ಟಿವಿ ಮತ್ತಿತರ ಮಾಧ್ಯಮದ ಮಿತ್ರರಿಗೆ ಟಿಆರ್ ಪಿ ಏರಿಸಿಕೊಳ್ಳಲು ಭರ್ಜರಿ ಇಂಧನ ಒದಗಿಸಿತ್ತು. ಗಾಡಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ಪುಕ್ಕಟೆ ಸಿಕ್ಕಷ್ಟೇ ಖುಷಿಯಿಂದ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳು ಜಾಲತಾಣಗಳ ‘ ಹಾಂಡಲ್ ‘ ಅನ್ನು ತಿರುಗಿಸಿ, ಆಕ್ಸಿಲೇಟರ್ ಅದುಮಿದ್ದೇ ಅದುಮಿದ್ದು. ಹಾಗೆ ಪವಿತ್ರಾ ಏಕಾಏಕಿ ನ್ಯಾಷನಲ್ ಫಿಗರ್ ಆಗಿ ಹೋದ್ರು. ಆಕೆಯ ಬಗ್ಗೆ ಗೊತ್ತಿಲ್ಲದವರೂ, ತಿಳಿದುಕೊಂಡು ‘ ಆಂಟಿ ಬಾನೆ ಉಂದಿ ‘ ಎಂದು ಮನಸ್ಸಲ್ಲೇ ಅಂದುಕೊಂಡದ್ದು ಸುಳ್ಳಾಗಿರಲಿಕ್ಕಿಲ್ಲ.

ಇವುಗಳಲ್ಲಿ ನರೇಶ್ ಅವರ ಪತ್ನಿ ರಮ್ಯಾ ರಘುಪತಿ ಯವರು ಬೆಂಗಳೂರಿಗೆ ಬಂದು ಪತ್ರಿಕಾಗೋಷ್ಠಿ ನೀಡಿದ್ದು, ಅಲ್ಲಿಂದ ಮೈಸೂರಿಗೆ ಹೋಗಿ ರಾತ್ರೋರಾತ್ರಿ ಕಾದು ಕೂತು ಪವಿತ್ರ ಮತ್ತು ನರೇಶ ಅವರು ಒಂದೇ ಹೋಟೆಲ್ನಲ್ಲಿ ಬೀಡು ಬಿಟ್ಟ ವಿಷಯವನ್ನು ಬೀದಿಗೆ ಹಾಕಿದ್ದನ್ನು ಇಡೀ ಜಗತ್ತೇ ನೋಡಿ, ತನ್ನ ಪಾಡಿಗೆ ಮೌಲ್ಯಮಾಪನದ ಕೆಲಸ ಮಾಡಿವೆ.

ನರೇಶ್ ಮೂರನೇ ಪತ್ನಿ, ರಮ್ಯಾ ರಘುಪತಿಯವರು ಕೂಡ ಇವರಿಬ್ಬರ ಮೇಲೆ ಸಾಕಷ್ಟು ಆರೋಪಗಳನ್ನು ಹೊರಿಸಿದ್ದು, ಅದರ ಬೆಳವಣಿಗೆ ಕೋರ್ಟಿನಲ್ಲಿ ನಾನು ಇದರ ವಿರುದ್ಧವಾಗಿ ಹೋರಾಡುತ್ತೇನೆ ಎಂದು ಮೈಸೂರಿನಲ್ಲಿ ಹೇಳಿದ್ದರು. ಆದರೆ ಪಾಪ ಅವರಿಗೆ ಗೊತ್ತುಂಟಾ ಇಲ್ಲವೋ, ಹಾದರಕ್ಕೆ, ಅಪವಿತ್ರ ಅನೈತಿಕ ಸಂಬಂಧಕ್ಕೆ ಮತ್ತು ಇಂತಹಾ ಪ್ರಸಂಗಗಳಲ್ಲಿ ಕಾನೂನು ಯಾವುದೇ ಸಹಾಯಕ್ಕೆ ಬರಲಾರದು ಎಂದು. ವೈವಾಹಿಕೇತರ ಸಂಬಂಧಗಳಿಗೆ ಕಾನೂನುನಲ್ಲಿ ಶಿಕ್ಷೆ ಇಲ್ಲ. ಕಾರಣ ಅದು ಅವರಿಬ್ಬರ ವೈಯಕ್ತಿಕ ವಿಚಾರ ! ಕೋರ್ಟಿನಲ್ಲಿ ಹೋಗಿ ಡೈವೋರ್ಸ್ ಪಡೆದು ಹಳೆಯದನ್ನು ಮರೆತುಬಿಡಬಹುದು ಅಷ್ಟೇ. ಹಾಗಿದ್ದರೂ, ರಮ್ಯಾ ಅವರು ನೋವಿನಿಂದ ಕೋರ್ಟು ಕಚೇರಿ ವಿಷಯ ಎತ್ತಿದ್ದರು. ಇದೆಲ್ಲ ವಿಷಯ ಆಂಟಿಯ ಮುಖಪರಿಚಯ ಇರುವ ಎಲ್ಲರಿಗೂ ಈಗ ಗೊತ್ತು.

ನಂತ್ರ ಲೊಕೇಶನ್ ಹೈದರಾಬಾದಿಗೆ ಶಿಫ್ಟ್ ಆಗಿದೆ. ಅಲ್ಲಿ ಒಂದಷ್ಟು ಬೆಳವಣಿಗೆಗಳು ನಡೆದಿವೆ. ಪವಿತ್ರ ಲೋಕೇಶ್ ಅವರು ಒಂದು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು, ತನ್ನ ಮೇಲೆ ವಿನಾಕಾರಣ ಅಪಪ್ರಚಾರ ನಡೆಯುತ್ತಿದೆ. ನನ್ನನ್ನು ಬೆಂಬಲಿಸಿ ಎಂದು ತೆಲುಗು ಚಿತ್ರ ವೀಕ್ಷಕರನ್ನು ಕೇಳಿಕೊಂಡಿದ್ದಾಳೆ.

“ಅಂದರಿಕಿ ನಮಸ್ಕಾರಮಂಡಿ ” ಎಂದು ಶುರುಮಾಡಿದ ಪವಿತ್ರ ಲೋಕೇಶ್, ಅಗಾರು ಬಗ್ಗೆ ಅವರ ಫ್ಯಾಮಿಲಿ ಬಗ್ಗೆ ಎಲ್ಲರಿಗೂ ಗೊತ್ತು. ನಮ್ಮಿಬ್ಬರ ಫೋಟೋಗಳನ್ನ ಇಟ್ಟುಕೊಂಡು ಏನೇನೋ ಹೇಳುತ್ತಿದ್ದೀರಿ. ಅದೇನೆನೋ ವಿಚಾರಗಳನ್ನು ಬೇರೆ ಬೇರೆಯಾಗಿ ಕಲ್ಪಿಸಿ ಮಾತನಾಡಿದ್ದೀರಿ. ಅವರ ಹೆಂಡತಿ ಅಂತ ಹೇಳಿಕೊಂಡು (!) ಯಾರೋ ಬಂದಿದ್ದು, ಅವರ ಸಂಸಾರವನ್ನು ನಾನು ಹಾಳು ಮಾಡುತ್ತಿದ್ದೇನೆ ಎನ್ನುವ ಆಪಾದನೆ ಮಾಡ್ತಿದ್ದಾರೆ. ಅವರು ನರೇಶ್ ಅವರ ಹೆಂಡತಿಯಾ ಅಂತ, ನನಗೆ ಗೊತ್ತೇ ಇಲ್ಲ. ನಿಜಕ್ಕೂ ನರೇಶ್ ಅವರ ಹೆಂಡತಿ ಅವರೇ ನಾ ಎಂದು ನನಗೆ ಅನುಮಾನವಿದೆ. ಹಾಗೆ ಹೀಗೆ ಎಂದು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ ಪವಿತ್ರ ಲೋಕೇಶ್. ನನ್ನನ್ನು ಬಲಿಪಶು ಮಾಡಲಾಗುತ್ತಿದೆ. ಅವರ ಸಂಸಾರದಲ್ಲಿ ಸಮಸ್ಯೆ ಇದ್ರೆ ಅದನ್ನು ಕೂತು, ಅವರ ಕುಟುಂಬದಲ್ಲೇ ದೊಡ್ಡವರು ಇದ್ದಾರೆ, ಅವರೇ ಬಗೆ ಹರಿಸಿಕೊಳ್ಳಬೇಕಿತ್ತು, ಬೆಂಗಳೂರಿಗೆ ಬಂದು ಪ್ರಚಾರ ಕೊಡುವ ಅಗತ್ಯ ಏನಿತ್ತು ?- ಎಂದಿದ್ದಾರೆ ಪವಿತ್ರಾ.
    
ನನ್ನ ಕಷ್ಟದ ಸಮಯದಲ್ಲಿ ನರೇಶ್ ಗಾರು ನನ್ನ ಜೊತೆಗಿದ್ದರು. ನನ್ನ ಕಷ್ಟ ಸುಖದ ಸಂದರ್ಭದಲ್ಲಿ ನನ್ನ ಜೊತೆ ಭಾಗಿಯಾಗಿದ್ದವರು ನರೇಶ್. ಇದೀಗ ಅವರು ಸಹ ಕಷ್ಟದ ಸಮಯದಲ್ಲಿ ಇದ್ದಾರೆ. ನಾನು ಅವರೊಟ್ಟಿಗೆ ನಿಲ್ಲಬೇಕು. ಹೌದು, ಅಫ್ಕೋರ್ಸ್ ನಾವಿಬ್ಬರು ಜೊತೆಗಿದ್ದೇವೆ, ಅಟ್ಯಾಚ್ ಆಗಿದ್ದೇವೆ, ಸ್ನೇಹಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ ಅಂತಾನೆ ಇಟ್ಕೊಳ್ಳಿ ಅದರಲ್ಲಿ ತಪ್ಪೇನಿದೆ ಎಂದು ನಟಿ ಪವಿತ್ರಾ ಲೋಕೇಶ್ ಮಾಧ್ಯಮಕ್ಕೆ ಪ್ರಶ್ನೆ ಮಾಡಿದ್ದಾರೆಂದು ಸುದ್ದಿಯಾಗಿದೆ. ನರೇಶ್ ಮತ್ತು ನನ್ನ ಹೆಸರನ್ನು ಇಟ್ಟುಕೊಂಡು ರಮ್ಯಾ ರಘುಪತಿಯವರು ಪಾಪುಲಾರಿಟಿ ಆಗುತ್ತಿದ್ದಾರೆ. ತೆಲುಗು ಅಲ್ಲಿ ಸಮಸ್ಯೆಯಾದರೆ ಕನ್ನಡದ ಮಾಧ್ಯಮಗಳ ಮುಂದೆ ಯಾಕೆ ಹೋಗುತ್ತಿದ್ದಾರೆ. ಪವಿತ್ರ ಲೋಕೇಶ್ ಅವರು ಈ ವಿಡಿಯೋ ಹೇಳಿಕೆ ಕೊಟ್ಟ ಬೆನ್ನಲ್ಲೇ ನೆಟ್ಟಿಗರು ಥರಾವರಿ ಕಾಮೆಂಟ್ ಮಾಡಿದ್ದಾರೆ.

ಸಕಾರಾತ್ಮಕ ನಕಾರಾತ್ಮಕ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ” ಸ್ವಲ್ಪ ಸಮಯದ ಹಿಂದೆ ನರೇಶ್ ಬಿಡುಗಡೆ ಮಾಡಿದ ಫೋಟೋ ನಲ್ಲೂ, ಇದೇ ಜಾಗ, ಇದೇ ಸೋಫಾ ಸೆಟ್ಟು, ಅದೇ ಆನೆಯ ಬೊಮ್ಮ (ಬೋಂಬೆ) ಇತ್ತು ಅಂತ ಕಿಚಾಯಿಸಿದ್ದಾರೆ. ಇನ್ನೊಬ್ಬಾತ, ‘ ಆತನ ಹೆಂಡತಿಗೆ ದುಡ್ಡು ಬೇಕು, ಆತನಿಗೆ ಪವಿತ್ರ ಬೇಕು, ಪವಿತ್ರಾಗೆ ಆತ ಮತ್ತು ದುಡ್ಡು ಎರಡೂ ಬೇಕು, ಟಿವಿಯವರಿಗೆ ಟಿ ಆರ್ ಪಿ ಬೇಕು, ನಮ್ಮಂತ ಜನರಿಗೆ ಟೈಮ್ ಪಾಸ್ ಮಾಡಲು ಗಾಸಿಪ್ ಬೇಕು ‘ ಎಂದು ನಿಜವಾದ ಮಾತಾಡಿದ್ದಾರೆ.

“ಮಹಾಸತಿ ಪವಿತ್ರಾ, ನರೇಶ್ ಗಾರು ಥರ್ಡ್ ವೈಫ್ ಡಿಸ್ಟರ್ಬ್ ಚೇಸಿಂದಾ ನಿನ್ನು ಪವಿತ್ರಾ ಪೇರ್ ಯವರು ಪೆಟ್ಟಾರು ? ” ಮಹಾಸತಿಯಾದ ಪವಿತ್ರಾ ಲೋಕೇಶ್ ಅವರೇ, ನರೇಶ್ ಮೂರನೆಯ ಹೆಂಡತಿಯನ್ನು ಡಿಸ್ಟರ್ಬ್ ಮಾಡಿದ ನಿನಗೆ ಪವಿತ್ರಾ ಅಂತ ಹೆಸರಿಟ್ಟದ್ದು ಯಾರು ? ಎಂದು ಕೇಳಿದ್ದಾರೆ. ‘ಆಂಟಿ ಬಾನೆ ಉಂದಿ, ನಿನ್ನ ಯಾವ ಕುಕ್ಕ (ನಾಯಿ) ಬೆಂಬಲಿಸ್ತದೆ ? ಅಂತ ತೆಲುಗು ಮಂದಿ ಯರ್ರಾಬಿರ್ರೀ ಉಗಿದು ಹಾಕಿದೆ. ಒಟ್ಟಾರೆ ನರೇಶ್ ಪವಿತ್ರಾ ಜೋಡಿ ಒಟ್ಟಾಗಿದ್ದರೂ, ಸಮಾಜದಿಂದ ದೂರವಾಗಿದೆ ! ಜನ ಯಾವ ನ್ಯೂಸ್ ಬಿಟ್ರೂ ಪವಿತ್ರಾ ಲೋಕೇಶ್ ಅವರ ಬಗೆಗಿನ ಗಾಸಿಪ್ ಓದದೇ ಬಿಡೋದಿಲ್ಲ. ಆಕೆಯನ್ನು ಕೇವಲ ಅಮ್ಮನ ಪಾತ್ರದಲ್ಲಿ ನೋಡುತ್ತಿದ್ದ ಜನ ಈಗ ‘ ಆಂಟಿ ‘ ಥರ ನೋಡುತ್ತಿದ್ದು, ಮೊದಲೇ ದಪ್ಪಗಿನ ತುಂಬಿದ ವ್ಯಕ್ತಿತ್ವಗಳನ್ನು ಇಷ್ಟಪಡುವ ತೆಲುಗು ಮಂದಿ ಬಾಯಲ್ಲಿ ಈಗ ಒಂದೇ ಡೈಲಾಗು- ‘ ಆಂಟಿ ಬಾನೆ ಉಂದಿ’ !!!

Leave A Reply

Your email address will not be published.