ಕೋರಂ ಕೊರತೆ ನಡುವೆ ಐತ್ತೂರು ಗ್ರಾಮ ಸಭೆ | ಉಪಾಧ್ಯಕ್ಷರು, ನಾಲ್ವರು ಸದಸ್ಯರು ಜತೆ ಹೊರ ನಡೆದ ಗ್ರಾಮಸ್ಥರು

ಕಡಬ ತಾಲೂಕಿನ ಐತ್ತೂರು ಗ್ರಾಮ ಸಭೆಯನ್ನು ಕೊರಂ ಕೊರತೆ ಇದ್ದರೂ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಹೊರ‌ ನಡೆದ ಘಟನೆ ನಡೆದಿದೆ.

 

ಈ ಹಿನ್ನೆಲೆಯಲ್ಲಿ ಗೊಂದಲ ಏರ್ಪಟ್ಟು ಸಭೆಗೆ ಕಡಬ ಎಸ್.ಐ. ಆಂಜನೇಯ ರೆಡ್ಡಿ ಹಾಗೂ ಸಿಬಂದಿಗಳು ಆಗಮಿಸಿದ್ದಾರೆ.
ಗ್ರಾಮಸ್ಥರು ಹೊರ ಹೋಗುವುದನ್ನು ಕಂಡ ಉಪಾಧ್ಯಕ್ಷರು ಹಾಗೂ ನಾಲ್ವರು ಸದಸ್ಯರು ಹೊರ ನಡೆದು ಪಂಚಾಯತ್ ಕಛೇರಿಯಲ್ಲಿ ಕುಳಿತಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಿಡಿಓ ಸುಜಾತ ಅವರು,ನ ಗ್ರಾಮ ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಂಡಿಲ್ಲ.ಸಭೆಗೆ ಮಾಹಿತಿ ನೀಡಲು ವಿವಿಧ ಕಡೆಗಳಿಂದ ಬೇರೆ ಬೇರೆ ಇಲಾಖೆಯ ಅಧಿಕಾರಿಗಳು ಆಗಮಿಸಿದ್ದು,ಅವರಿಂದ ಮಾಹಿತಿ ನೀಡಲಾಗಿದೆ ಎಂದರು.

Leave A Reply

Your email address will not be published.