Good News | ಅಡಿಕೆ ಧಾರಣೆಯಲ್ಲಿ ಭಾರಿ ನೆಗೆತ
ಮಳೆಯ ಮಧ್ಯೆ ಕೂಡಾ ಅಡಿಕೆ ಬೆಲೆ ನಾಗಾಲೋಟದಲ್ಲಿ ಓಡುತ್ತಿದೆ. ಅಡಿಕೆ ಧಾರಣೆಯಲ್ಲಿ ಮತ್ತೆ ಏರಿಕೆ ಕಂಡಿದೆ. ಈ ಬಾರಿ ಹಳೆ ಅಡಿಕೆ ಧಾರಣೆ 5 ರೂಪಾಯಿ ಕ್ಯಾಂಪ್ಕೋ ಏರಿಕೆ ಮಾಡಿದೆ. 555 ರೂಪಾಯಿಗೆ ಕ್ಯಾಂಪ್ಕೋ ಖರೀದಿ ಮಾಡುತ್ತಿದೆ. ಇದು ಮಾರುಕಟ್ಟೆಯಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಕಳೆದ ವಾರ ಹೊಸ ಅಡಿಕೆ ಧಾರಣೆಯನ್ನು ಕ್ಯಾಂಪ್ಕೋ 5 ರೂಪಾಯಿ ಏರಿಕೆ ಮಾಡಿತ್ತು. ಮಾರುಕಟ್ಟೆ 440 ರೂಪಾಯಿ ಗರಿಷ್ಟ ಮಾರುಕಟ್ಟೆ ಇತ್ತು. ಖಾಸಗಿ ವಲಯದಲ್ಲಿ 442 ರಿಂದ 445 ರೂಪಾಯಿವರೆಗೂ ಖರೀದಿ ನಡೆದಿದೆ.
ಹಳೆ ಅಡಿಕೆ ಧಾರಣೆ 550 ರೂಪಾಯಿಗೆ ಖರೀದಿ ನಡೆಯುತ್ತಿತ್ತು. ಇಂದು ಸೋಮವಾರ ಹಳೆ ಅಡಿಕೆ ಧಾರಣೆಯಲ್ಲೂ ಏರಿಕೆ ಕಂಡಿದೆ. 5 ರೂಪಾಯಿ ಬೆಲೆ ಹೆಚ್ಚಿಸಿಕೊಂಡು ಅಡಿಕೆ ಮುನ್ನುಗ್ಗುತ್ತಿದೆ. ಖಾಸಗಿ ವಲಯದಲ್ಲಿ ಹಳೆ ಅಡಿಕೆ 565 ರೂಪಾಯಿ ಹಾಗೂ ಹೊಸ ಅಡಿಕೆ 445 ರೂಪಾಯಿಗೆ ಖರೀದಿ ನಡೆಯುತ್ತಿದೆ. ಒಟ್ಟಾರೆ ಬೆಲೆ ಏರು ಹಾದಿಯಲ್ಲಿದೆ. ಮಳೆಯ ಕಣ್ಣು ತಪ್ಪಿಸಿ, ಸಿಗುವ ೧ ಗಂಟೆಗಳ ವಿರಾಮದಲ್ಲಿ ಕೊಳೆರೋಗಕ್ಕೆಎರಡನೇ ಸುತ್ತಿನ ಮದ್ದು ಬಿಡುವ ತರಾತುರಿಯಲ್ಲಿರುವ ಅಡಿಕೆ ಬೆಳೆಗಾರನ ಮುಖದಲ್ಲಿ ನಸು ನಗು.