‘ಚಪ್ಪಲಿ’ ಧರಿಸಿ ದ್ವಿಚಕ್ರ ವಾಹನವನ್ನು ಓಡಿಸುವಂತಿಲ್ಲ!
ಸರ್ಕಾರ ವಾಹನ ಸವಾರರ ಸುರಕ್ಷತೆಗಾಗಿ ಹಲವು ರಸ್ತೆ ಸಂಚಾರಿ ನಿಯಮಗಳನ್ನು ಜಾರಿಗೊಳಿಸಿದೆ. ಇಂತಹ ಕಾನೂನುಗಳನ್ನು ಪಾಲಿಸದಿದ್ದರೆ ನೀವು ದಂಡ ಪಾವತಿಸಬೇಕಾಗುತ್ತದೆ. ಆದರೆ, ಕೇಂದ್ರ ಸರ್ಕಾರದ ಕೆಲವು ನಿಯಮಗಳ ಕುರಿತು ನೀವು ತಿಳಿದಿದ್ದು, ದಂಡದಿಂದ ಪಾರಾಗಲು ಈ ನಿಯಮಗಳನ್ನು ಪಾಲಿಸುತ್ತೀರಿ. ಆದ್ರೆ, ‘ಚಪ್ಪಲಿ’ಗಳನ್ನು ಧರಿಸಿ ದ್ವಿಚಕ್ರ ವಾಹನವನ್ನು ಓಡಿಸುವ ಅನುಮತಿ ಇದುವರೆಗೂ ನೀಡಿಲ್ಲ.
ಹೌದು .ಕಾನೂನಿನ ಪ್ರಕಾರ, ಸ್ಲೀಪರ್ಸ್ ಅಥವಾ ‘ಚಪ್ಪಲಿ’ಗಳನ್ನು ಧರಿಸಿ ದ್ವಿಚಕ್ರ ವಾಹನವನ್ನು ಓಡಿಸುವ ಅನುಮತಿ ನೀಡಲಾಗಿಲ್ಲ. ಸವಾರಿ ಮಾಡುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯ ಇಂತಹ ಹಲವು ವಿಷಯಗಳ ಬಗ್ಗೆ ತಿಳಿದಿರುವ ಸಂಗತಿ. ಆದರೆ, ಇನ್ನಷ್ಟು ಕಾನೂನಿನ ಕುರಿತು ಮಾಹಿತಿ ಇಲ್ಲಿದೆ ನೋಡಿ.
ಮೋಟಾರು ವಾಹನ ಕಾಯ್ದೆಯ ಪ್ರಕಾರ, ಭಾರತದಲ್ಲಿ ವಾಹನ ಚಾಲನೆ ಮಾಡುವಾಗ ಅಥವಾ ಚಲಾಯಿಸುವಾಗ ನೀವು ಕೆಲವು ವಸ್ತುಗಳನ್ನು ಧರಿಸುವುದು ಕಡ್ಡಾಯವಾಗಿದೆ. ನಿಯಮಗಳ ಪ್ರಕಾರ, ದ್ವಿಚಕ್ರ ವಾಹನವನ್ನು ಚಾಲನೆ ಮಾಡುವಾಗ ಕ್ಲೋಸ್ಡ್ ಶೂಗಳನ್ನು ಧರಿಸುವುದು ಕಡ್ಡಾಯವಾಗಿದೆ. ಯಾರಾದರೂ ಈ ಕಾನೂನು ಉಲ್ಲಂಘಿಸಿದರೆ ಅವರಿಗೆ 1000 ರೂ. ಚಾಲನ್ ಬೀಳಲಿದೆ. ಇದರಂತೆಯೇ ವಾಹನ ಚಾಲನೆ ಮಾಡುವ ವ್ಯಕ್ತಿಯು ಪ್ಯಾಂಟ್ನೊಂದಿಗೆ ಶರ್ಟ್ ಅಥವಾ ಟಿ-ಶರ್ಟ್ ಅನ್ನು ಧರಿಸುವುದು ಕಡ್ಡಾಯವಾಗಿದೆ, ಈ ನಿಯಮವನ್ನು ಉಲ್ಲಂಘಿಸುವವರಿಗೆ ರೂ 2000 ದಂಡ ಬೀಳುತ್ತದೆ.
ಸ್ಲಿಪ್ಪರ್, ಹವಾಯಿ ಚಪ್ಪಲಿ ಹಾಕಿದರೆ ದ್ವಿಚಕ್ರ ವಾಹನದ ಗೇರ್ ಬದಲಾಯಿಸಲು, ವಾಹನ ನಿಯಂತ್ರಣಕ್ಕೆ, ಪಾರ್ಕ್ ಮಾಡಲು, ಪಾರ್ಕಿಂಗ್ನಿಂದ ವಾಹನ ತೆಗೆಯಲು ಸಮಸ್ಯೆ ಆಗಲಿದೆ. ಜೊತೆಗೆ ಅಪಘಾತದವಾದಾಗ ಕಾಲಿಗೆ ಗಾಯವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಸವಾರರು ಶೂ ಧರಿಸಿದರೆ ಉತ್ತಮ ಎಂಬುದು ನಿಯಮದ ಉದ್ದೇಶವಾಗಿದೆ.
ಎರಡು ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದು:
ಒಬ್ಬ ವ್ಯಕ್ತಿಗೆ ಎರಡು ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದು ಕಂಡುಬಂದರೆ, ಆ ವ್ಯಕ್ತಿಯು ದಂಡವನ್ನು ಪಾವತಿಸಬೇಕಾಗುತ್ತದೆ. ನೀವು ಎರಡು ವಾಹನ ಚಲಾವಣೆಯ ಪರವಾನಗಿಗಳನ್ನು ಹೊಂದಿರುವಿರಿ ಎಂದು ಕಂಡುಬಂದರೆ, ಈ ಅಪರಾಧಕ್ಕಾಗಿ ನಿಮಗೆ ಚಾಲನ್ ನೀಡಲಾಗುತ್ತದೆ.
ಫೋನ್ ಬಳಕೆ:
ವಾಹನ ಚಲಾಯಿಸುವಾಗ ಮಾತನಾಡುವುದು ಅಥವಾ ಫೋನ್ ನಲ್ಲಿ ಮಾತನಾಡುವುದು ದಂಡನೀಯ ಅಪರಾಧವಾಗಿದೆ. ಆದರೆ ಇದಕ್ಕೆ ಒಂದು ವಿನಾಯಿತಿ ಇದೆ. ಯಾವುದೇ ಸವಾರ/ಚಾಲಕ ತನ್ನ ವಾಹನವನ್ನು ಚಲಾಯಿಸುವಾಗ ತನ್ನ ಫೋನ್ ಅನ್ನು ನ್ಯಾವಿಗೇಷನ್ ಉದ್ದೇಶಕ್ಕಾಗಿ ಮಾತ್ರ ಬಳಸಬಹುದಾಗಿದೆ. ಆದರೆ, ಅದನ್ನು ಬಿಟ್ಟು ಬೇರೆ ಬೇರೆ ಯಾವುದಾದರು ಕೆಲಸಕ್ಕೆ ಬಳಸಿದರೆ ನೀವು ಖಂಡಿತವಾಗಿಯೂ ದಂಡವನ್ನು ಪಾವತಿಸಬೇಕಾಗಬಹುದು. ಈ ಕಾನೂನು ಉಲ್ಲಂಘಿಸುವವರಿಗೆ 5,000 ರೂ.ವರೆಗೆ ದಂಡ ವಿಧಿಸುವ ನಿಯಮವಿದೆ.