ಪುತ್ತೂರು: ನಗರದ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ!! ಪುತ್ತೂರಿನ ಪ್ರತಿಷ್ಟಿತ ಕಾಲೇಜಿನ ವಿದ್ಯಾರ್ಥಿ ಅಂದರ್

ಪುತ್ತೂರು: ನಗರದಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಆರೋಪಿಗಳ ಬೇಟೆಯ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಸುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಪುತ್ತೂರು ನಗರ ಠಾಣಾ ಎಸ್ ಐ ರಾಜೇಶ್ ಕೆ.ವಿ ನೇತೃತ್ವದ ಪೊಲೀಸರ ತಂಡ ಹೆಡೆಮುರಿಕಟ್ಟಿದೆ.

 

ನಗರದ ಪ್ರತಿಷ್ಟಿತ ಕಾಲೇಜೊಂದರ ಪದವಿ ವಿದ್ಯಾರ್ಥಿ, ಕೇರಳ ಮೂಲದ ಮುಬಿನ್ (20) ಎಂಬಾತನನ್ನು ಗಾಂಜಾ ಸಹಿತ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಈತ ಕಳೆದ ಕೆಲ ಸಮಯಗಳಿಂದ ನಗರದ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ನಡೆಸುತ್ತಿದ್ದೂ, ಗ್ರಾಮೀಣ ಭಾಗಕ್ಕೂ ಗಾಂಜಾ ಮಾರಾಟ ನಡೆಸುತ್ತಿದ್ದ ಎನ್ನಲಾಗಿದೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಎಸ್.ಐ ರಾಜೇಶ್ ಕೆ.ವಿ ಮತ್ತು ತಂಡ ಕಾರ್ಯಚರಣೆ ನಡೆಸಿದ್ದು, ಬಂಧಿತನಿಂದ ಸುಮಾರು ಅರ್ಧ ಕೆಜಿ ಗಾಂಜಾ ವಶಕ್ಕೆ ಪಡೆದುಕೊಳ್ಳಲಾಗಿದೆ.ಪುತ್ತೂರು ಡಿವೈಎಸ್ಪಿ ಗಾನ ಕುಮಾರಿ ನಿರ್ದೇಶನದಂತೆ,ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಠಾಣಾ ಸಿಬ್ಬಂದಿಗಳಾದ ಸ್ಕರಿಯ,ಉದಯ್ ಕುಮಾರ್,ಜಗದೀಶ್,ಬಸವರಾಜ್,ಕಿರಣ್,ಸಂತೋಷ್ ಪಾಲ್ಗೊಂಡಿದ್ದರು.

Leave A Reply

Your email address will not be published.