ಬಂಟ್ವಾಳ : ಸ್ನಾನಕ್ಕೆಂದು ಹೋದ ವ್ಯಕ್ತಿ ವಿದ್ಯುತ್ ಖಾಯಿಲ್ ಶಾಕ್ ಹೊಡೆದು ಸಾವು!!!

ಬಂಟ್ವಾಳ : ವಿದ್ಯುತ್ ಖಾಯಿಲ್ ನಿಂದಾಗಿ ಶಾಕ್ ಹೊಡೆದು ವ್ಯಕ್ತಿಯೋರ್ವರು ಸ್ನಾನಗೃಹದಲ್ಲೇ ಮೃತಪಟ್ಟ ಘಟನೆಯೊಂದು ಬ್ರಹ್ಮರಕೊಟ್ಲು ಎಂಬಲ್ಲಿ ನಡೆದಿದೆ.

ನೀರುಮಾರ್ಗ ನಿವಾಸಿಯಾಗಿರುವ ಆದರೆ ಬ್ರಹ್ಮರಕೊಟ್ಲು ಕಳ್ಳಿಗೆ ಚಂದ್ರಿಗೆಯ ಪರಿಯೋಡಿಬೀಡು ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿರುವ ಹೇಮಚಂದ್ರ (49) ಎಂಬವರೇ ಮೃತಪಟ್ಟ ವ್ಯಕ್ತಿ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಹೇಮಚಂದ್ರ ಅವರ ಪತ್ನಿ ಮನೆ ಚಂದ್ರಿಗೆಯಲ್ಲಿದೆ. ಅಲ್ಲೇ ಸಮೀಪ ಪೆರಿಯೋಡಿಬೀಡು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಅಲ್ಲಿಂದಲೇ ಇಬ್ಬರು ಮಂಗಳೂರಿಗೆ ಕೆಲಸಕ್ಕೆ ಹೋಗುತ್ತಿದ್ದರು.

ಎಂದಿನಂತೆ ರಾತ್ರಿ ಕೆಲಸ ಮುಗಿಸಿ ಹೇಮಚಂದ್ರ ಅವರು ಮನೆಗೆ ಬಂದವರೇ ಸ್ನಾನ ಮಾಡಲು ಸ್ನಾನಗೃಹಕ್ಕೆ ಹೋಗಿದ್ದಾರೆ. ಆದರೆ ಸ್ನಾನ ಮಾಡಲೆಂದು ಹೋದ ಗಂಡ ತುಂಬಾ ಹೊತ್ತಾದರೂ ಬರದೇ ಇದ್ದುದ್ದನ್ನು ಕಂಡು ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಹೆದರಿ ಬಾಗಿಲು ಮುರಿದು ಒಳನೋಡಿದಾಗ ಸ್ನಾನಗೃಹದಲ್ಲಿ ಹೇಮಚಂದ್ರ ಕೆಳಗೆ ಬಿದ್ದಿದ್ದಾರೆ. ಹೇಮಚಂದ್ರ ಅವರ ಕೈ ಬಕೆಟ್ ನಲ್ಲಿದ್ದು ಕೆಳಗೆ ಬಿದ್ದಿದ್ದಾರೆ. ಅನಂತರ ಗಮನಿಸಿದಾಗ ಬಿಸಿನೀರು ಕಾಯಿಸುವ ವಿದ್ಯುತ್ ಕಾಯಿಲ್ ಮೂಲಕ ಶಾಕ್ ಹೊಡೆದು ಕೆಳಗೆ ಬಿದಿರುವುದು ಗಮನಕ್ಕೆ ಬಂದಿತ್ತು. ತತ್ ಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅದಾಗಲೇ ಅವರು ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದರು.

ಬಂಟ್ವಾಳ ನಗರ ಠಾಣಾ ಎಸ್.ಐ.ಅವಿನಾಶ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!
Scroll to Top
%d bloggers like this: