ಓದುಗರೇ ನಿಮಗೊಂದು, ಸವಾಲು, ಗೊಂಬೆಗಳ ನಡುವೆ ಮರೆಯಾಗಿರುವ ಮೂರು ಬಾಳೆಹಣ್ಣುಗಳನ್ನು ಪತ್ತೆ ಹಚ್ಚುವಿರಾ?

ಇನ್ನೊಂದು ಆಪ್ಟಿಕಲ್ ಭ್ರಮೆ ನಿಮ್ಮ ಮುಂದೆ ಇಡುತ್ತಿದ್ದೇವೆ. ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಸೂಕ್ಷ್ಮತೆಯನ್ನು ಪರೀಕ್ಷಿಸಲು ಈ ಆಪ್ಟಿಕಲ್ ಭ್ರಮೆ ಸಹಾಯಕವಾಗಲಿದೆ. ಈ ಚಿತ್ರದಲ್ಲಿರುವ ಮೂಲಕ ನಾವು ಹಳದಿ ಬಣ್ಣದಲ್ಲಿರುವ ಗೊಂಬೆಗಳ ನಡುವೆ ಮರೆಯಾಗಿರುವ ಮೂರು ಬಾಳೆಹಣ್ಣುಗಳನ್ನು ಪತ್ತೆಹಚ್ಚಬೇಕು. ಇಲ್ಲಸ್ಟ್ರೇಟರ್ ಗೆರ್ಗೆಲಿ ಡುಡಾಸ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ್ಗೆ ಆಸಕ್ತಿದಾಯಕ ಒಗಟುಗಳನ್ನು ಹಂಚಿಕೊಂಡು ನಿರ್ದಿಷ್ಟ ವಸ್ತುಗಳನ್ನು ಹುಡುಕುವಂತೆ ಸವಾಲು ಹಾಕುತ್ತಾರೆ.

 

https://www.instagram.com/p/Cf_VTwYs4Yd/?utm_source=ig_web_copy_link

thedudolf ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಆಪ್ಟಿಕಲ್ ಭ್ರಮೆಯನ್ನು ಹಂಚಿಕೊಳ್ಳಲಾಗಿದೆ. ಗೊಂಬೆಗಳ ನಡುವೆ ಇರುವ ಮೂರು ಬಾಳೆಹಣ್ಣುಗಳನ್ನು ಪತ್ತೆಹಚ್ಚಿ ಎಂದು ಶೀರ್ಷಿಕೆಯಲ್ಲಿ ಪ್ರಶ್ನೆ ಮಾಡಲಾಗಿದೆ. ಕೆಲವರು ಬಾಳೆಹಣ್ಣುಗಳನ್ನು ಪತ್ತೆಹಚ್ಚುವಲ್ಲಿ ವಿಫಲವಾದರೆ ಇನ್ನೂ ಕೆಲವರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಇದು ಕಣ್ಣಿನ ಸಾಮರ್ಥ್ಯವನ್ನು ಅಳೆಯುವ ಸಮಯದ ಟ್ರಿಕ್. ಮೊದಲು ನೀವು ಟೈಮರ್ ಅನ್ನು ತೆಗೆದುಕೊಳ್ಳಿ, ಈಗ ಈ ಕೆಳಗೆ ನೀಡಿರುವ ಆಪ್ಟಿಕಲ್ ಭ್ರಮೆಯ ಚಿತ್ರದಲ್ಲಿ ಅಡಗಿರುವ ಮೂರು ಬಾಳೆಹಣ್ಣುಗಳನ್ನು ಕೇವಲ 60 ಸೆಕೆಂಡುಗಳಲ್ಲಿ ಪತ್ತೆಹಚ್ಚಬೇಕು.

ಚಿತ್ರದಲ್ಲಿ ಬಾಳೆಹಣ್ಣನ್ನು ಹುಡುಕುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಅದಾಗ್ಯೂ ಮೂರು ಬಾಳೆಹಣ್ಣುಗಳನ್ನು ಪತ್ತೆಹಚ್ಚುವಲ್ಲಿ ಸಫಲರಾಗಿದ್ದರೆ ನಿಮಗೆ ಅಭಿನಂದನೆಗಳು, ನೀವು ಈ ಸವಾಲಿನ ಹಾಗೂ ಕಣ್ಣಿನ ಸಾಮರ್ಥ್ಯವನ್ನು ಅಳೆಯುವ ಪರೀಕ್ಷೆಯಲ್ಲಿ ಸೋತಿದ್ದರೆ ನಾವು ನಿಮಗೆ ಸಹಾಯ ಮಾಡುತ್ತೇವೆ. ಈ ಕೆಳಗಿನ ಚಿತ್ರದಲ್ಲಿ ಕಣ್ಣಿಗೆ ಕಾಣಲು ಸಿಗದ ಬಾಳೆಹಣ್ಣುಗಳನ್ನು ತೋರಿಸಲಾಗಿದೆ.

Leave A Reply

Your email address will not be published.