‘ ಹೆಂಡತಿ ‘ ಜಾಬ್ ಮಾಡಲು ನಾಯಕ ನಟಿಗೆ ಆಫರ್ ನೀಡಿದ ಉದ್ಯಮಿ, ತಿಂಗಳಿಗೆ 25 ಲಕ್ಷ ಸಂಬಳ !
ಒಂದು ಹೊಸ ಜಾಬ್ ಸೃಷ್ಟಿಯಾಗಿದೆ. ಅಂತಹಾ ಹುದ್ದೆಯನ್ನು ಸೃಷ್ಟಿ ಮಾಡಿದ್ದು ಓರ್ವ ಉದ್ಯಮಿ. ಹೆಂಡತಿಯಾಗಿ ಕೆಲಸ ನಿರ್ವಹಣೆ ಮಾಡೋದೇ ಆ ಹೊಸ ಉದ್ಯೋಗದ ಜಾಬ್ ಡಿಸ್ಕ್ರಿಪ್ಶನ್.
ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನದ ‘ಗೋದಾವರಿ’ ಚಿತ್ರದ ಮೂಲಕ ಖ್ಯಾತಿ ಪಡೆದ ನಾಯಕಿ ನೀತು ಚಂದ್ರ. ಈಕೆ ಹಿಂದೆ ಮೈಸೂರು ಸ್ಯಾಂಡಲ್ ಸೋಪಿನ ಜಾಹೀರಾತಿನಲ್ಲಿ ಕೂಡಾ ಕಾಣಿಸಿಕೊಂಡಿದ್ದರು. ಈ ನಟಿ ನೀತು ಚಂದ್ರ ಅವರು ತಮಗೆ ಬಂದ ಇಂತಹ ‘ ಜಾಬ್ ‘ ಅಫರ್ ಕುರಿತು ರಿವೀಲ್ ಮಾಡಿದ್ದಾರೆ. ನೀತು ಅವರಿಗೆ ಉದ್ಯಮಿಯೊಬ್ಬರು ತಮಗೆ ಹೆಂಡತಿಯಾಗಿ ಇದ್ದಲ್ಲಿ ತಿಂಗಳಿಗೆ 25 ಲಕ್ಷ ಸಂಬಳ ನೀಡುವುದಾಗಿ ಆಫರ್ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ.
ಆ ಚಿತ್ರದ ನಂತರ ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಕೆಲ ವರ್ಷಗಳಿಂದ ಅವರಿಗೆ ಸಿನಿಮಾಗಳ ಆಫರ್ ಬರುತ್ತಿರುವುದು ಕಡಿಮೆ ಆಗಿತ್ತು. ಆಗ ಭೇಟಿ ಆದ ಉದ್ಯಮಿ ಒಬ್ಬರು ಆವರಿಗೆ ಹೆಂಡತಿ ಆಗುವ ಜಾಬ್ ಆಫರ್ ನೀಡಿದ್ದು, ನಟಿ ಅದನ್ನು ‘ ಅಫೇರ್ ‘ ಮಾಡಿಕೊಳ್ಳಲು ಇಷ್ಟವಿಲ್ಲದೆ ತಿರಸ್ಕರಿಸಿದ್ದಳಂತೆ.
ಇತ್ತೀಚೆಗೆ ಬಾಲಿವುಡ್ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ನಟಿ, ಅನೇಕ ಸ್ವಾರಸ್ಯಕರವಾದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನೀತು ಅವರಿಗೆ ದೊಡ್ಡ ಉದ್ಯಮಿಯೊಬ್ಬರ ಹೆಂಡತಿಯಾಗಿರಲು ಆಫರ್ ಬಂದಿತ್ತಂತೆ.
ಹೌದು, ಖ್ಯಾತ ಉದ್ಯಮಿಯೊಬ್ಬರು ಪ್ರತಿ ತಿಂಗಳು 25 ಲಕ್ಷ ಸಂಬಳ ನೀಡುತ್ತೇನೆ. ನನ್ನ ಹೆಂಡತಿಯಾಗಿರು ಎಂದು ನೀತು ಅವರಿಗೆ ಆಫರ್ ನೀಡಿದ್ದರಂತೆ. ಆದರೆ ನೀತು ಅವರು ಉದ್ಯಮಿ ಅವರ ಆಫರ್ ತಿರಸ್ಕರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ತಾನು ರಾಷ್ಟ್ರಪ್ರಶಸ್ತಿ ಪಡೆದ 13 ಸ್ಟಾರ್ ನಟರ ಜೊತೆ ನಟಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.
ಸದ್ಯ ನೀತು ಚಂದ್ರ ಅವರಿಗೆ ಚಿತ್ರರಂಗದಲ್ಲಿ ಅವಕಾಶಗಳಿಲ್ಲದ ಕಾರಣ ಕೊಂಚ ಸಮಯದಿಂದ ಸಿನಿಮಾದಿಂದ ದೂರವಿದ್ದಾರೆ. ಹೀಗಾಗಿ ಅವಕಾಶಗಳಿಲ್ಲದ ಸಮಯದಲ್ಲಿ ಉದ್ಯಮಿಯೊಬ್ಬರು ಸಂಬಳದ ಹೆಂಡತಿಯಾಗಲು ಕೇಳಿದ್ದರು ಎಂದು ಹೇಳಿಕೊಂಡಿದ್ದಾರೆ. ಆದರೆ ಉದ್ಯಮಿಯ ಹೆಸರನ್ನು ಬಹಿರಂಗಪಡಿಸಿಲ್ಲ. ಇನ್ನು, ನೀತು ಚಂದ್ರ ಅವರ ವೃತ್ತಿಜೀವನದ ವಿಷಯಕ್ಕೆ ಬಂದರೆ, ಅವರು ಮೊದಲು ಮಂಚು ವಿಷ್ಣು ನಾಯಕರಾಗಿದ್ದ ‘ವಿಷ್ಣು‘ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು.
ಈ ಚಿತ್ರದ ನಂತರ, ಅವರು 2005 ರಲ್ಲಿ ಬಿಡುಗಡೆಯಾದ ಹಿಂದಿ ಚಿತ್ರ ಗರಂ ಮಸಾಲಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಆ ಸಿನಿಮಾದಲ್ಲಿ ಗಗನಸಖಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ಟ್ರಾಫಿಕ್ ಸಿಗ್ನಲ್, 123, ಓಯ್ ಲಕ್ಕಿ ಲಕ್ಕಿ ಓಯ್, ಅಪಾರ್ಟ್ ಮೆಂಟ್, 13ಬಿ ಚಿತ್ರಗಳಲ್ಲಿ ನಟಿಸಿದ್ದರು. ಕಚ್ ಲವ್ ಜೈಸಾ ಚಿತ್ರದಲ್ಲಿ ನೀತು ಚಂದ್ರ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ 2005 ರಲ್ಲಿ ಅಕ್ಷಯ್ ಕುಮಾರ್ ಮತ್ತು ಜಾನ್ ಅಬ್ರಹಾಂ ಅಭಿನಯದ ಗರಂ ಮಸಾಲಾ ಚಿತ್ರದ ಮೂಲಕ ಹಿಂದಿ ಚಿತ್ರರಂಗವನ್ನು ಪ್ರವೇಶಿಸಿದರು. ಅದರ ನಂತರ ಅವರು ಅನೇಕ ಚಿತ್ರಗಳಲ್ಲಿ ನಟಿಸಿದರು. ಇದಲ್ಲದೆ ಅವರು ತಮ್ಮದೇ ಆದ ನಿರ್ಮಾಣ ಕಂಪನಿ ಚಂಪಾರಣ್ ಟಾಕೀಸ್ ಅನ್ನು ಆರಂಭಿಸಿದ್ದರು. ಇದಲ್ಲದೇ ಅವರ ಚಿತ್ರಗಳಾದ ಓಯ್ ಲಕ್ಕಿ! ಲಕ್ಕಿ ಓಯ್! ಮತ್ತು ಮಿಥಿಲಾ ಮಖನ್ ಚಿತ್ರಗಳು ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿವೆ.
ನೀತು ಚಂದ್ರ ಅವರು ‘ನೆವರ್ ಬ್ಯಾಕ್ ಡೌನ್: ರಿವೋಲ್ಟ್‘ ಎಂಬ ಚಿತ್ರದ ಮೂಲಕ ಹಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಇದಲ್ಲದೆ, ಅವರು ಕೆಲವು ಟಿವಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಕೆಲವು ಜಾಹೀರಾತುಗಳು ಹಾಗೂ ಸಿನಿಮಾಗಳಲ್ಲಿ ನೀತು ನಟಿಸಿದ್ದಾರೆ.