ಸ್ವಾತಂತ್ರ್ಯ ಮಹೋತ್ಸವಕ್ಕೆ ರಜೆ ಕ್ಯಾನ್ಸಲ್ ಮಾಡಿದ ಸರಕಾರ

ಭಾರತಕ್ಕೆ ಈಗಾಗಲೇ ಸ್ವಾತಂತ್ರ ದೊರಕಿ 74 ವರ್ಷಗಳು ಕಳೆದಿದೆ. ಭಾರತಕ್ಕೆ 1947 ಆಗಸ್ಟ್ 15 ರಂದು ಬ್ರಿಟಿಷರಿಂದ ನಮಗೆ ಸ್ವಾತಂತ್ರ್ಯ ದೊರೆಕಿದ್ದು, ಇಂದಿಗೆ 74 ವರ್ಷಗಳು ಕಳೆದಿದ್ದು ಮುಂದೆ ಬರಲಿದೆ 2022 ಆಗಸ್ಟ್ 15 ಸ್ವತಂತ್ರ ಮಹೋತ್ಸವ 75 ನೇ ವರ್ಷಕ್ಕೆ ಕಾಲಿಡಲಿದೆ.

 

ಈ ಸಂದರ್ಭದಲ್ಲಿ ಒಂದು ಶುಭ ಸೂಚನೆ ಕೊಟ್ಟ ಸರ್ಕಾರ ಉತ್ತರಪ್ರದೇಶದ ಸರ್ಕಾರವು ಸ್ವಾತಂತ್ರ್ಯ ದಿನಾಚರಣೆಯ ಸಾರ್ವತ್ರಿಕ ರಜೆಯನ್ನು ರದ್ದುಪಡಿಸಿದೆ. ಈಗಾಗಲೇ ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಆ ದಿನಾ ನಾವೆಲ್ಲರೂ ಅರ್ಥಪೂರ್ಣವಾದ ಆಚರಣೆಗೆ ಮಾಡಬೇಕು ಎಂದು ಉತ್ತರಪ್ರದೇಶದ ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಎಲ್ಲಾ ಸರ್ಕಾರಿ ಸಂಬಂಧಿತ ಕಚೇರಿಗಳು ಮತ್ತು ಎಲ್ಲಾ ಖಾಸಗಿ ಶಾಲೆಗಳು ಆಗಸ್ಟ್ 15ರಂದು ತೆರೆಯಬೇಕೆಂದು ಅಲ್ಲಿನ ರಾಜ್ಯ ಸರ್ಕಾರ ಸೂಚಿಸಿದೆ.

ಅಷ್ಟೇ ಅಲ್ಲದೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಅಂದು ಭಾರತಿಯರೆಲ್ಲ ನಾಡಿನ “ಪರಿಸರದ ಶುಚಿತ್ವದ” ಚಟುವಟಿಕೆಯಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು. ಪರಿಸರವನ್ನು ಸ್ಪಚ್ಚವಾಗಿಡುವ ಅಭಿಯಾನ ಆರಂಭಿಸಬೇಕು. ಇದರಲ್ಲಿ ಮಕ್ಕಳು , ಶಿಕ್ಷಕರು ಪಾಲ್ಗೊಳ್ಳಬೇಕು ಎಂದು ರಾಜ್ಯ ಸರ್ಕಾರ ಹೇಳಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಮತ್ತು ಅದನ್ನು ಖಾತರಿಪಡಿಸಲು ಉತ್ತರ ಪ್ರದೇಶದ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.

Leave A Reply

Your email address will not be published.