ಹಿಂದೂ ಯುವಕನ ವರಿಸಿದ ಮುಸ್ಲಿಂ ಯುವತಿ, ಮುದ್ದಾದ ಹುಡುಗಿಯ ಫೋಟೋಸ್ ವೈರಲ್ !

ಉತ್ತರ ಪ್ರದೇಶದ ಅಜಂಗಢ ಗುರುವಾರ ವಿಶಿಷ್ಟ ಪ್ರೇಮಕಥೆಗೆ ಸಾಕ್ಷಿಯಾಗಿದ್ದು, ಮುಸ್ಲಿಂ ಯುವತಿಯೊಬ್ಬಳು ಹಿಂದೂ ಧರ್ಮಕ್ಕೆ ಮತಾಂತರಗೊಂಡು ತನ್ನ ಪ್ರೇಮಿಯನ್ನು ಮದುವೆಯಾಗಿದ್ದಾಳೆ. ಇಬ್ಬರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಮದುವೆಯಲ್ಲಿ ಮೊಮಿನ್ ಕೆಂಪು ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದು, ಸೂರಜ್ ಕೂಡ ಇದೇ ರೀತಿಯ ಶರ್ಟ್ ಧರಿಸಿದ್ದಾರೆ. ಹುಡುಗಿಯ ಮುಖಲಕ್ಷಣ ಮತ್ತು ಆಕೆ ಈಗ ಧರಿಸಿದ ಉಡುಪುಗಳು ಆಕೆಯನ್ನು ಥೇಟು ಹಿಂದೂ ಧರ್ಮೀಯಳಂತೆ ಕಾಣಿಸುತ್ತಿವೆ.

 

ಹುಡುಗಿಯ ಹೆಸರು ಮೊಮಿನ್ ಖಾತೂನ್, ಹಿಂದೂ ಹುಡುಗನ ಹೆಸರು ಸೂರಜ್. ಉತ್ತರ ಪ್ರದೇಶದ ಅಜಂಗಢ ನಗರವು ಅಂತರ್​ ಧರ್ಮದ ಪ್ರೇಮಕ್ಕೆ ಸಾಕ್ಷಿಯಾಗಿದ್ದು, ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮ ಜೋಡಿ ಧರ್ಮದ ಗೋಡೆ ಒಡೆದು ತಮ್ಮ ಪ್ರೀತಿಯನ್ನು ಪರಿಪೂರ್ಣಗೊಳಿಸಿದ್ದಾರೆ. ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಉತ್ತರ ಪ್ರದೇಶದ ಅಜಂಗಢ ನಗರವು ಅಂತರ್​ ಧರ್ಮದ ಪ್ರೇಮಕ್ಕೆ ಸಾಕ್ಷಿಯಾಗಿದ್ದು, ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮ ಜೋಡಿ ಧರ್ಮದ ಗೋಡೆ ಒಡೆದು ತಮ್ಮ ಪ್ರೀತಿಯನ್ನು ಪರಿಪೂರ್ಣಗೊಳಿಸಿದ್ದಾರೆ. ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಹುಡುಗಿಯ ಹೆಸರು ಮೊಮಿನ್ ಖಾತೂನ್ ಮುಸ್ಲಿಂ ಸಮಾಜದಿಂದ ಬಂದಿದ್ದರೆ, ಹುಡುಗ ಸೂರಜ್ ಹಿಂದಿ ಧರ್ಮದಿಂದ ಬಂದವನು.

ಎರಡು ವರ್ಷಗಳ ಹಿಂದೆ, ಅಜಂಗಢದ ಅಟ್ರೌಲಿಯಾ ಪ್ರದೇಶದ ಖಾನ್‌ಪುರ್ ಫತೇಹ್ ಗ್ರಾಮದಲ್ಲಿ ವಾಸಿಸುತ್ತಿದ್ದ ಸೂರಜ್, ಹೈದರ್‌ಪುರ ಖಾಸ್ ಗ್ರಾಮದ ಮೋಮಿನ್ ಖಾತೂನ್ ಎಂಬ ಮುಸ್ಲಿಂ ಹುಡುಗಿಯನ್ನು ಪ್ರೀತಿಸಲು ಶುರುಮಾಡಿದ್ದ. ಸೂರಜ್ ಮತ್ತು ಮೊಮಿನ್ ಖಾತೂನ್ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ಇಬ್ಬರೂ ಆಗಾಗ ಭೇಟಿಯಾಗುತ್ತಲೇ ಇದ್ದರು.

ಅದ್ದರೆ ಇಬ್ಬರ ಪ್ರೀತಿಗೆ ಧರ್ಮವೇ ದೊಡ್ಡ ಅಡ್ಡಿಯಾಗಿತ್ತು. ಸೂರಜ್ ಮತ್ತು ಮೋಮಿನ್ ಖಾತೂನ್ ಇಬ್ಬರೂ ಬೇರೆ ಬೇರೆ ಧರ್ಮಕ್ಕೆ ಸೇರಿದವರಾಗಿದ್ದು, ಆರಂಭದಲ್ಲಿ ಕುಟುಂಬದವರೂ ಅಡ್ಡಿಯಾದರು. ಹುಡುಗಿಯು ಸೂರಜ್ ನನ್ನ ಇಸ್ಲಾಮ್ ಧರ್ಮಕ್ಕೆ ಮತಾಂತರ ಗೊಳ್ಳಲು ಕೇಳಿಕೊಂಡಿದ್ದಳು. ಆದರೆ, ಅದಕ್ಕೆ ಸೂರಜ್ ಖಡಾಖಂಡಿತವಾಗಿ ನಿರಾಕರಿಸಿದ್ದ. ಕೊನೆಗೆ ಹುಡುಗಿ ತನ್ನ ಮನೆಯವರನ್ನು ಒಪ್ಪಿಸಿದ್ದಾಳೆ. ಈಗ ಹಿಂದೂ ಧರ್ಮಕ್ಕೆ ಮತಾಂತರ ಆಗಿ ಆತನನ್ನು ಮದುವೆಯಾಗಿದ್ದಾಳೆ. ಅಂತಿಮವಾಗಿ ಜುಲೈ 13 ರಂದು ಸೂರಜ್ ಮತ್ತು ಮೊಮಿನ್ ಅಟ್ರೌಲಿಯಾ ಸಮ್ಮೋ ಮಾತಾ ದೇವಾಲಯದ ಸಂಕೀರ್ಣದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾದರು. ಈ ಮದುವೆಗೂ ಮುನ್ನ ಮುಸ್ಲಿಂ ಯುವತಿ ಹಿಂದೂ ಧರ್ಮವನ್ನು ಸ್ವೀಕರಿಸಿ ತನ್ನ ಪ್ರಿಯಕರನ ಕೊರಳಿಗೆ ಹಾರ ಹಾಕಿದರು. ಈ ಪ್ರೀತಿಯ ಜೋಡಿಗೆ ಕುಟುಂಬ ಸದಸ್ಯರು ಮತ್ತು ಗಣ್ಯರು ಆಶೀರ್ವದಿಸಿದರು.

ಇವರಿಬ್ಬರ ಪ್ರೀತಿಗೆ ಹುಡುಗನ ಮನೆಯವರಿಗೆ ಯಾವುದೇ ಅಭ್ಯಂತರ ಇರಲಿಲ್ಲ. ಯುವತಿಯ ಮನೆಯವರು ಧರ್ಮದ ಕಾರಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಯುವತಿ ತಾನೂ ಹಿಂದೂ ಧರ್ಮ ಅಳವಡಿಸಿಕೊಂಡು ಪ್ರಿಯಕರ ಸೂರಜ್ ನನ್ನು ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಳು. ಆಕೆಯ ಹಠ ಗೆದ್ದಿದ್ದು, ಇಡೀ ಪ್ರದೇಶದಲ್ಲಿ ಈ ಮದುವೆ ಚರ್ಚೆಯಾಗುತ್ತಿದೆ. ಈ ಮದುವೆಯ ವಿಶೇಷವೆಂದರೆ ಸೂರಜ್ ಮತ್ತು ಮೊಮಿನ್ ಖಾತೂನ್ ಅವರ ಹೊಸ ಜೀವನಕ್ಕೆ ಶುಭ ಕೋರಲು ಎರಡೂ ಕುಟುಂಬ ಸದಸ್ಯರು ಹಾಜರಾಗಿದ್ದರು. ಎರಡೂ ಕುಟುಂಬದವರು ನವದಂಪತಿಗಳನ್ನು ಆಶೀರ್ವದಿಸಿದ್ದಾರೆ.

ಆದರೆ ಈ ಪ್ರೀತಿಯ ಜೋಡಿ ಮದುವೆಯಾಗಿರುವುದು ಮುಸ್ಲಿಂ ಧರ್ಮದ ಮುಖಂಡರ ಕಣ್ಣು ಕೆಂಪಗಾಗಿಸಿದೆ. ಈ ಮದುವೆಯ ನಂತರ ಮುಸ್ಲಿಂ ಮುಸ್ಲಿಂ ಹುಡುಗಿ ಮೋಮಿನ್ ಮತ್ತು ಹಿಂದೂ ಯುವಕ ಸೂರಜ್‌ಗೆ ನಿರ್ದಿಷ್ಟ ಸಮುದಾಯದ ಸಂಘಟನೆಯಿಂದ ಬೆದರಿಕೆ ಬಂದಿದ್ದು, ಆ ಸಂಬಂಧ ಪೊಲೀಸ್ ದೂರು ಕೂಡಾ ದಾಖಲಾಗಿದೆ. ಸದ್ಯಕ್ಕೆ ಅಲ್ಲಿನ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌರವ್ ಸಿಂಗ್ ಈ ಪ್ರೀತಿಯ ಜೋಡಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಯಂಗ್ ಮುಸ್ಲಿಂ ಕೌನ್ಸಿಲ್ ಎನ್‌ಆರ್‌ಐ ಸಮಿತಿಯ ಸದಸ್ಯ ಮೊಹಮ್ಮದ್ ಅಫ್ಜಲ್ ತನ್ನ ಧರ್ಮದ ಹೊರತಾಗಿ ಮದುವೆಯಾಗಿದ್ದಕ್ಕಾಗಿ ಹುಡುಗಿಯನ್ನು ದೂಷಿಸಿದ್ದು, ಅವರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಅವರು ಹೀಗೆ ಬರೆದಿದ್ದಾರೆ: “ಇಂದಿಗೂ, ನರಕದಲ್ಲಿ ಮುಳುಗಿರುವ ಅಸಂಖ್ಯಾತ ಮುಸ್ಲಿಮರು ಎಚ್ಚರಗೊಳ್ಳಲು ಸಿದ್ಧರಿಲ್ಲ, ಮತ್ತು ತಮ್ಮ ಕಣ್ಣುಗಳ ಮುಂದೆ ತಮ್ಮ ಹೆಣ್ಣುಮಕ್ಕಳು ನರಕಕ್ಕೆ ಹೋಗುವುದನ್ನು ನೋಡಿದ ನಂತರವೂ ಅವರು ಎಚ್ಚರವಾಗಿಲ್ಲ. ತಮ್ಮ ಒಡೆಯನ ಕಟ್ಟಳೆಗಳನ್ನು ಮರೆತು ನಾಚಿಕೆಯಿಲ್ಲದ ತಪ್ಪು ಮಾರ್ಗಗಳನ್ನು ಆರಿಸಿಕೊಳ್ಳುವ ಇಂತಹ ಜನರಿಗೆ ಅಲ್ಲಾಹನು ಅವಮಾನಗಳನ್ನು ನೀಡುತ್ತಾನೆ ” ಎಂದಿದ್ದಾರೆ.

Leave A Reply

Your email address will not be published.