BIGG NEWS : ಬಾದಾಮಿ ಗುಂಪು ಘರ್ಷಣೆ ಹಿನ್ನೆಲೆ: ನಮಗೆ ನ್ಯಾಯ ಕೊಡಿ ಪ್ಲೀಸ್ ದುಡ್ಡು ಬೇಡ‌ ! ಸಿದ್ದರಾಮಯ್ಯ ಕೊಟ್ಟ 2 ಲಕ್ಷ ಹಣ ಎಸೆದ ಮುಸ್ಲಿಂ ಮಹಿಳೆ !

Share the Article

ಇತ್ತೀಚೆಗೆ ಬಾದಾಮಿಯ ಕೆರೂರು ಗುಂಪು ಘರ್ಷಣೆ ವೇಳೆ ಕೆಲ ಜನ ಗಾಯಗೊಂಡಿದ್ದರು‌. ಈ ಹಿನ್ನೆಲೆಯಲ್ಲಿ ಇಂದು ಸಿದ್ದರಾಮಯ್ಯ ಸಾಂತ್ವನ ಹೇಳಿ ಪರಿಹಾರ ನೀಡುವ ಸಲುವಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಈ ವೇಳೆ ಮುಸ್ಲಿಂ ಮಹಿಳೆಯೊಬ್ಬರು ನಮಗೆ ನ್ಯಾಯ ಕೊಡಿ ಎಂದು ಹೇಳಿ, ದುಡ್ಡು ಬೇಡ ಎಂದು 2 ಲಕ್ಷ ರೂ. ಹಣವನ್ನು ಎಸೆದಿರುವ ಘಟನೆ ನಡೆದಿದೆ.

ಈ ಘಟನೆಯಲ್ಲಿ ಗಾಯಾಳುಗಳು ಬಾಗಲಕೋಟೆ ಬಳಿಯ ಆಶೀರ್ವಾದ ಆಸ್ಪತ್ರೆಗೆ ದಾಖಲಾಗಿದ್ದರು. ಇಲ್ಲಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಗಾಯಾಳುಗಳಿಗೆ 2 ಲಕ್ಷ ರೂ. ಕೊಟ್ಟು ಬರುತ್ತಿದ್ದರು. ಈ ವೇಳೆ ಗಾಯಾಳುಗಳ ಕುಟುಂಬ ನಮಗೆ ಹಣ ಬೇಡ. ನ್ಯಾಯ ಬೇಕು. ನಮಗೆ ಹಣ ಬೇಡ ಶಾಂತಿ ಬೇಕು ಎಂದು ಮನವಿ ಮಾಡಿದ್ದಾರೆ.
ಅಲ್ಲಿಂದ ಮರಳಿ ಹಣವನ್ನು ವಾಪಸ್ ಕೊಡಲು ಕಾರು ಹಿಂಬಾಲಿಸಿದ ಮಹಿಳೆಯರನ್ನು ಸಿದ್ದರಾಮಯ್ಯ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಮಹಿಳೆಯರು ಸಮಾಧಾನಕ್ಕೆ ಬಗ್ಗಲಿಲ್ಲ. ಆದರೆ ಇಲ್ಲಿಗೆ ಸುಮ್ಮನಾಗದ ಮಹಿಳೆ ರಾಜ್ಮ ಅವರು ಕಾರಿನ ಹಿಂದೆ ಹೋಗಿ ಹಣವನ್ನು ಎಸೆದಿದ್ದಾರೆ.

Leave A Reply