ಮದುಮಗನ ಕಿವಿಯಲ್ಲಿ ಅದೇನೋ ಗುಣುಗಿದ ವ್ಯಕ್ತಿ, ಅಷ್ಟರಲ್ಲೇ ಕುಸಿದು ಬಿದ್ದ ವರ | ಅಷ್ಟಕ್ಕೂ ಆತ ಹೇಳಿದ್ದೇನು?

ಸೋಶಿಯಲ್ ಮೀಡಿಯಾಗಳಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ವಿಡಿಯೋಗಳು ವೈರಲ್ ಆಗುತ್ತಿದ್ದು, ಕೆಲವೊಂದು ನಗು ತರಿಸಿದರೆ, ಇನ್ನೂ ಕೆಲವು ವಿಚಿತ್ರ ಎಂಬಂತೆ ಹೀಗೂ ಉಂಟೆ ಎನ್ನುವ ಭಾವನೆ ಬರುವ ರೀತಿ ಇರುತ್ತದೆ. ಅದರಲ್ಲೂ ಇತ್ತೀಚೆಗೆ ಮದುವೆ ಸಮಾರಂಭಗಳ ವೀಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿದ್ದು, ಇನ್ನೇನು ಮದುವೆ ನಡೆಯಬೇಕು ಎನ್ನುವಷ್ಟರಲ್ಲಿ ಮದುವೆ ಮುರಿದು ಹೋಗುವಂತಹ ಅದೆಷ್ಟೋ ಪ್ರಕರಣಗಳು ನಡೆದಿದೆ.

ಇದೀಗ ಅಂತಹುದೇ ಒಂದು ವಿಡಿಯೋ ವೈರಲ್ ಆಗಿದ್ದು, ಇನ್ನೇನು ಹಾರ ಬದಲಾಯಿಸಬೇಕಾಗಿದ್ದ ವರ ದಿಢೀರನೆ ಕುಸಿದು ಬಿದ್ದಿದ್ದಾನೆ. ಆದರೆ ವಿಡಿಯೋದಲ್ಲಿರುವ ರೀತಿ, ವರ ಕುಸಿದು ಬೀಳುವ ಮೊದಲು ವ್ಯಕ್ತಿಯೊಬ್ಬ ಬಂದು ವರನ ಕಿವಿಯಲ್ಲಿ ಏನೋ ಹೇಳಿದ್ದಾನೆ. ಆ ಕೂಡಲೇ ವರ ದಿಢೀರನೆ ಕುಸಿದು ಬಿದ್ದಂತಹ ವಿಸ್ಮಯಕಾರಿ ಘಟನೆ ನಡೆದಿದೆ

ಮದುವೆ ಅಂದ ಮೇಲೆ ಅಲ್ಲಿ ಸಂಭ್ರಮ-ಸಡಗರ ಮಾತುಕತೆ ಇದ್ದೇ ಇರುತ್ತದೆ. ಅದೇ ರೀತಿ ಈ ವಿಡಿಯೋದಲ್ಲಿ ಕೂಡ ಮದುವೆ ಶಾಸ್ತ್ರಗಳೆಲ್ಲವೂ ನಡೆಯುತ್ತಿರುತ್ತದೆ. ಇನ್ನೇನು ಹಾರ ಬದಲಾಯಿಸಲು ವಧು ಮತ್ತು ವರ ಎದ್ದು ನಿಂತಿದ್ದಾರೆ. ಅಷ್ಟರಲ್ಲಿ ಒಬ್ಬ ವ್ಯಕ್ತಿ ಬಂದು ವರನ ಕಿವಿಯಲ್ಲಿ ಅದೇನೋ ಹೇಳುತ್ತಾನೆ. ಕೆಲವೇ ಸೆಕೆಂಡುಗಳಲ್ಲಿ ವರ ಕುಸಿದು ಬೀಳುತ್ತಾನೆ.

ವರ ಕುಸಿದು ಬೀಳುತ್ತಿದ್ದಂತೆಯೇ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ ಬಿಡುತ್ತದೆ. ಫೋಟೋಗ್ರಾಫರ್ ನಿಂದ ಹಿಡಿದು ಎಲ್ಲರೂ ವರನತ್ತ ಓಡೋಡಿ ಬರುತ್ತಾರೆ. ವಧುವಿಗೂ ಏನಾಗುತ್ತಿದೆ ಎಂದೇ ತಿಳಿಯುವುದಿಲ್ಲ. ಆದರೆ ಗಾಬರಿ ಮಾತ್ರ ವಧುವಿನ ಮುಖದಲ್ಲಿ ಎದ್ದು ಕಾಣಿಸುತ್ತದೆ. ಇನ್ನೇನು ತನ್ನನ್ನು ವರಿಸಬೇಕಾಗಿದ್ದ ವ್ಯಕ್ತಿ ಹೀಗೆ ಕುಸಿದು ಬಿದ್ದಾಗ ಎಂಥವರ ಮನಸ್ಸು ಕೂಡಾ ಕುಸಿಯುತ್ತದೆ.

ಆದ್ರೆ ಆ ವ್ಯಕ್ತಿ ಬಂದು ಅವನಿಗೆ ಏನು ಹೇಳಿದನೋ ಏನು. ಒಟ್ಟಾಗಿ ವ್ಯಕ್ತಿ ಬಂದು ಹೇಳಿದ್ದನ್ನು ಕೇಳಿ ವರ ಕುಸಿದು ಬಿದ್ದನೋ ಅಥವಾ ಇನ್ನೇನು ಸಮಸ್ಯೆಯಿಂದ ಆತ ಬಿದ್ದನಾ ಎಂಬುದು ತಿಳಿದುಬಂದಿಲ್ಲ. ಅಲ್ಲದೆ ಈ ವೀಡಿಯೊ ಯಾವಾಗ ತೆಗೆಯಲಾಗಿದೆ, ಎಲ್ಲಿಯದ್ದು ಎನ್ನುವುದರ ಮಾಹಿತಿ ಕೂಡಾ ಇಲ್ಲ.

ಈ ವಿಡಿಯೋವನ್ನು Instagram ನಲ್ಲಿ videolucu.funny ಹೆಸರಿನ ಪುಟದಲ್ಲಿ ಅಪ್ಲೋಡ್ ಮಾಡಲಾಗಿದೆ. ಒಟ್ಟಾರೆ ಈ ವಿಡಿಯೋ ಎಲ್ಲರ ಮನಸ್ಸಲ್ಲೂ ಒಂದು ಪ್ರಶ್ನೆಯನ್ನು ಅಂತೂ ಮಾಡಿಸಿರುತ್ತದೆ. ಹೌದು. ವೀಡಿಯೋ ನೋಡಿದ ನಮಗೆ ಆ ವ್ಯಕ್ತಿ ಬಂದು ಏನು ಹೇಳಿದ ಎಂಬ ಕುತೂಹಲ ಇರಬೇಕಾದರೆ ಅಲ್ಲಿ ನೆರೆದಿದ್ದ ಜನರಿಗೆ ಈ ಪ್ರಶ್ನೆ ಮೂಡದೇ ಇರಲು ಸಾಧ್ಯವೇ ಇಲ್ಲ ಅಲ್ವಾ!?..

https://www.instagram.com/tv/Cf3J_vcgrGF/?utm_source=ig_web_copy_link

Leave A Reply

Your email address will not be published.