ಸಂತೆಯಲ್ಲಿ ಮಾರಾಟವಾದ ಮೇಕೆ ಯಜಮಾನನ ಹೆಗಲ ತಬ್ಬಿ ಆಳುವ ಮನಕಲಕುವ ದೃಶ್ಯ, ವೈರಲ್ ಆಗ್ಲೇ ಬೇಕು ಈ Video !
ಸಂತೆಯಲ್ಲಿ ಮಾರಾಟವಾದ ನಂತರ ಮೇಕೆಯೊಂದು ತನ್ನ ಮಾಲೀಕನ ಹೆಗಲ ಮೇಲೆ ತನ್ನ ತಲೆ ಇಟ್ಟು ಕಣ್ಣೀರು ಹಾಕುತ್ತಿರುವ ಮನ ಕಲಕುವ ದೃಶ್ಯ ವೈರಲ್ ಆಗ್ತಿದೆ. ಮೊನ್ನೆ ಈದ್ ಸಂದರ್ಭ ಸಂತೆಗೆ ಮಾರಾಟಕ್ಕೆ ಬಂದ ಮೇಕೆ ಇದಾಗಿತ್ತು.
ಸಾಕಿದವನಿಗೆ ದುಡ್ಡು ಮುಖ್ಯ, ಕೊಳ್ಳುವವನಿಗೆ ಅದರ ರುಚಿ ಮುಖ್ಯ. ಆದರೆ ಮನುಷ್ಯನ ಇಂತಹಾ ಯಾವುದೇ ವ್ಯವಹಾರಗಳ ಅರಿವಿಲ್ಲದ ಮೂಕ ಪ್ರಾಣಿ ಮೇಕೆ ಮಾತ್ರ ರೋಧಿಸುತ್ತಿದೆ. ಇಷ್ಟು ವರ್ಷ ತನಗೆ ಹಾಕಿದ ಮೇವು, ಇಟ್ಟ ನೀರು, ಆಹಾರ ಹಾಕಿ ಸಲುಹಿದ ಯಜಮಾನನನ್ನು ಬಿಟ್ಟು ಬೇರೆ ಕಡೆ ಹೋಗುತ್ತಿದ್ದೇನೆ ಎಂಬ ಅಗಲಿಕೆಯ ನೋವಿನಿಂದ ‘ ಅಂಬೇ ‘ ಎಂದು ಕೂಗಿ ತನ್ನ ನೋವನ್ನು ವ್ಯಕ್ತಪಡಿಸುತ್ತಿದೆ.
ಹಾಗೆ ಸಂತೆಯಲ್ಲಿ ಮಾರಾಟವಾದ ಮೇಕೆಯೊಂದು ತನ್ನ ನೋವನ್ನು ಅನುಭವಿಸುತ್ತಿರುವುದು ಮತ್ತು ತೋಡಿಕೊಳ್ಳುತ್ತಿರುವ ದೃಶ್ಯ ಮಾತ್ರ ಎಂತಹ ಕಟುಕ ಹೃದಯವುಳ್ಳವರನ್ನು ಕರಗಿಸುವಂತಿತ್ತು. ಸಮಾಜದಲ್ಲಿ ದುಡ್ಡಿಗಿರುವ ಬೆಲೆ ನನ್ನ ಭಾವನೆಗಳಿಗೆ ಇಲ್ಲ ಎಂದು ಮನುಷ್ಯ ಜಾತಿಯನ್ನು ಆ ದೃಶ್ಯ ಅಣಕಿಸುವಂತಿತ್ತು.
ಈ ಘಟನೆಯ ವಿಡಿಯೋ ಈಗ ವೈರಲ್ ಆಗುತ್ತಿದೆ. ಇದು ಯಾವ ಊರಿನಲ್ಲೋ, ಅದ್ಯಾವ ಜಾನುವಾರು ಸಂತೆಯಲ್ಲಿ ನಡೆಯಿತೋ ಗೊತ್ತಿಲ್ಲ. ಆದರೆ ಅದು ಪ್ರಾಣಿ ಪ್ರಿಯರ ಭಾವವನ್ನು ಕೆದಕಿದೆ. ಪ್ರಾಣಿಗಳನ್ನು ತನಗಿಷ್ಟವಾದಂತೆ ಬಳಸುವ ಮನುಷ್ಯನ ದುರಾಸೆಯ ಮುಖವನ್ನು ಮತ್ತೊಮ್ಮೆ ಬಯಲು ಮಾಡಿದೆ.
ಹಾಗೆ ತಾನು ಸಾಕಿದ ಮೇಕೆಯ ಮೇಲೆ ದುಡ್ಡಿನ ವ್ಯವಹಾರ ನಡೆದು ಹಣ ಕೈ ಬದಲಾಗುತ್ತಿತ್ತು. ಅದ್ಯಾವುದರ ಪರಿವೆಯೇ ಇಲ್ಲದೆ, ತನ್ನ ಯಜಮಾನನ ಹೆಗಲ ತಬ್ಬಿ ಅಳುತ್ತಿತ್ತು, ನೋವಿನ ಕೇಕೆ ಹಾಕುತ್ತಿತ್ತು ಆ ಮೇಕೆ. ಬಹುಶಃ ಅದರ ಕೊರಳ ಹಗ್ಗದ ಕೈ ಬದಲಾದದ್ದನ್ನು ಮೇಕೆ ಗಮನಿಸಿರಬೇಕು. ಒಡೆಯ ಬಿಟ್ಟು ಹೋಗ್ತಾನೆ ಅಂತ ಕೂಗು ಹಾಕ್ತಿತ್ತು ಆ ಮೇಕೆ. ಆದರೆ ಮೇಕೆಯ ಬಗಲಲ್ಲಿ ವ್ಯವಹಾರ ಕುದುರಿತ್ತು. ಮೇಕೆಯ ಧಣಿಯು, ಗರಿಗರಿ ಹಣವನ್ನು ಝಣ ಝಣ ಎಣಿಸಿ ಪಟ್ಟಾಪಟ್ಟಿ ಚಡ್ಡಿಯ ಜೋಬಿಗೆ ತುರುಕಿದ್ದ. ಅವತ್ತು ಮೇಕೆಯ ಆ ಆಕ್ರಂದನ ನೋಡಿದ ಆ ಮಾಂಸ ಪ್ರಿಯ ಕಠೋರ ಕಣ್ಣುಗಳಲ್ಲಿ ಕೂಡಾ ಹನಿ ಜರುಗಿತ್ತು. ಡೀಲ್ ಕುದುರಿ, ದುಡ್ಡು ಜೇಬಿಗೆ ಇಳಿಸಿಕೊಂಡ ಕ್ಷಣದಲ್ಲಿ ಮೇಕೆಯ ಯಜಮಾನನ ಕಣ್ಣುಗಳಲ್ಲೂ ನೋವು ಕಾಣಿಸಿಕೊಂಡಿತ್ತು.
ನಾವೆಲ್ಲ ‘ಮಾನವೀಯ ಸಂಬಂಧ’ ಎಂಬ ಸುಂದರ ಪದ ಬಳಕೆ ಮಾಡುತ್ತೇವೆ. ಆದರೆ ಈಗ ‘ಪ್ರಾಣಿ ಸಂಬಂಧ’ ಎಂದು ಆ ಪದವನ್ನು ಬಳಸಬೇಕಾಗಿದೆ. ಕಾರಣ ಪ್ರಾಣಿಗಳು ಮಾತ್ರ ತಾನೇ ನಂಬಿಕೆಯ ಮತ್ತು ಪ್ರೀತಿಯ ವಿಷಯದಲ್ಲಿ ನಿಯತ್ತಾಗಿರುವುದು ?!
ಹೌದು ನಮ್ಮ ಮನೆಯಲ್ಲಿ೨೪ರಾಸುಗಳು ಇದ್ದವು. ರಾಸುಗಳು ಎಂದರೆ ದನಗಳು. ಹೋರಿಗಳು ಕರುಗಳು ಎತ್ತುಗಳು ಕಡಸುಗಳುಹಸುಗಳು ಇದ್ದವು..ನಮ್ಮದು ಕಿರಾಣಿ ಅಂಗಡಿಯೂ ಇತ್ತು. ನಾನು ದನ ಮೇಯಿಸುತ್ತಿದ್ದೆ ಅವುಗಳ ಎಲ್ಲ ಜವಾಬ್ದಾರಿ ನನ್ವದೆ ನಾನು ಆಗ ೧೨ ವರ್ಷದ ಹುಡುಗ. ನನ್ನ ಮೇಲೆ ಅಣ್ಣನ ಉಸ್ತುವಾರಿ ಇತ್ತು. ದನಕರುಗಳನ್ನು ಬೆಳಕಾಗುತ್ತಿದ್ದಂತೆ ಹೊರಗೆ ಕಟ್ಟಿ ದನದ ಕೊಟ್ಟಿಗೆಯ ಸಗಣಿ ಗಂಜಳ ಕಸ ತೆಗೆದು ಹೊರಗೆ ದನಗಳಿಗೆ ಮೇವು ಹುಲ್ಲು ಹಾಕುತ್ತಿದ್ದೆ ನಾಲ್ಕು ಹಸುಗಳು ಕರು ಹಾಕಿದ್ದವು. ಅವು ಈಗ ೧ ವರ್ಷದ ಕರುಗಳಾಗಿದ್ದವು ಎಲ್ಲವೂ ಹೋರಿ ಕರುಗಳು. ನಾನು ಎಲ್ಲ ದನಕರುಗಳನ್ನು ಪ್ರತಿ ದಿನ ಅವುಗಳ ಕೊರಶು ತಬ್ಬಿಕೊಂಡು ಮುದ್ದು ಮಾಡುತ್ತಿದ್ದೆ ಎಲ್ಲ ದನ ಕರುಗಳನ್ನು ಮೈನೀವಿ ಕೊರಳು ತಬ್ಬಿಕೊಂಡು ಮುದ್ದು ಮಾಡುತ್ತಿದ್ದೆ ಅವೂ ಇಷ್ಟಪಡುತ್ತಿದ್ದವು ಅವು ತಮ್ಮ ನಾಲಗೆಯಿಂದ ನನ್ನ ಕೈ ಮೈ ನೆಕ್ಕುತ್ತಿದ್ದವು. ನನ್ನ ಮೈಗೆ ತಮ್ಮ ಗೋಣು ಕೊಂಬು ತಾಕಿಸಿ ತಮ್ಮ ಪ್ರೀತಿತೋರಿಸುತ್ತಿದ್ದವು ಹೋರಿತರುಗಳನ್ನು ಹೊಲ ಗದ್ದೆ ಬೇಸಾಯಕ್ಕೆ ಬಂಡಿ ಹೂಡುವುದಕ್ಕೆ ರೈತರು ಕೊಳ್ಳುತ್ತಾರೆಹಾಗೆ ಜೋಡಿ ಹೂಡುವುದಕ್ಕೆ ೧ ಕರುವನ್ನು ಒಬ್ಬ ರೈತ ಕೊಂಡನು ನಮಗೆ ದುಡ್ಡಿನ ಅವಶ್ಯಕತೆ ಇಲ್ಲ ಕೊಟ್ಟಿಗೆ ಕೊರತೆಯೂ ಇಲ್ಲ ರೈತನು ದುಂಬಾಲು ಬಿದ್ದು ಬೇಕೇ ಬೇಕು ಎಂದು ಕೊಂಡನು ಅದನ್ನುಮರುದಿನಬೆಳಿಗ್ಗೆ ತೆಗೆದುಕೊಂಡು ಹೋಗುತ್ತೇವೆ ಎಂದರು ನಾನು ಶಾಲೆಯಿಂದ ಬಂದ ಮೇಲೆ ವಿಚಾರ ತಿಳಿಯಿತು ನಾನು ಓಡಿ ಹೋಗಿಆ ಕರುವನ್ನು ತಬ್ಬಿಕೊಂಡು ಮುದ್ದಾಡಿದೆ ನಿನ್ನನ್ನು ಮಾರಾಟ ಮಾಡಿದ್ದಾರೆ ನೀನು ಹೋಗಬೇಡ ನಮ್ಮ ಮನೆಯಲ್ಲಿಯೆ ಇರು ಎಂದುಮುದ್ದಾಡಿ ಕಣ್ಣೇರು ಹಾಕಿದೆ ಅದಕ್ಕೆ ಯಾಕೆ ನಾನು ಅಳುವುದು ಎಂದು ಗೊತ್ತಿಲ್ಲ ಮರುದಿನ ಕೊಟ್ಟಿಗೆಯಿಂದಬೆಳಿಗ್ಗೆ ಹೊರಗೆ ಕಟ್ಟಿದಾಗಲೂ ಅದನ್ನು ತಬ್ಬಿಕೊಂಡುಅದರ ಕಿವಿಯಲ್ಲಿ ಬಹಳಮಾತಾಡಿದೆ. ಶಾಲೆಗೆ ಹೋಗಬೇಕಿತ್ತು ಹೋದೆಸಂಜೆಗೆ ಬಂದಾಗ ಕರು ಇಲ್ಲ ಕಣ್ಣೀರು ಹಾಕಿದೆ ಮರುದಿನ ಬಳಿಗ್ಗೆ ಎಲ್ಲ ದನ ಹೊರಗೆ ಕಟ್ಟುವ ಸಮಯ. ಆ ವೇಳೆಗೆ ಈ ಕರು ಅಂಬಾ ಎಂದು ಕೊಟ್ಟಿಗೆ ಒಳಗೆ ಓಡಿ ಬಂತು .ಎಲ್ಲ ದನಗಳೂ ಅಂಬಾ ಎಂದು ಬರ ಾಮಾಡಿಕೊಂಡವು ಕರು ತನ್ನ ತಾಯಿ ಹತ್ತಿರ ಹೋಯಿತು ಹಸು ತನ್ನ ಕರುವನ್ನು ಅಂಬಾ ಎಂದು ತನ್ನ ನಾಲಗೆಯಿಂದ ನೆಕ್ಕ ತೊಡಗಿತು. ನನ್ವನ್ನು ನೋಡಿ ನನ್ನ ಹತ್ತಿರ ಬಂದು ತನ್ನನಾಲಗೆಯಿಂದ ನೆಕ್ಕಿತು ತನ್ನ ಗೋಣಿನಿಂದ ತುರಿಸಿತು ನಾನು ಅದನ್ನು ತಬ್ಬಿಕೊಂಡು ಮುದ್ದ್ಡಾಡಿದೆ. ಕೊಟ್ಟಿಗೆ ಕೆಲಸ ಮುಗಿಸಿ ನಾನು ಶಾಲೆಗೆ ಹೋದೆ ಸಂಜೆಗೆ ಬಂದಾಗ ಕರು ಇರಲಿಲ್ಲ ಮತ್ತೆ ಅದನ್ನು ೧೪ಕಿ ಮೀ ದೂರದ ಊರಿಗಂ ಒಯ್ದರು. ಅದು ಹೀಗೆ ನಾಲ್ಕು ಸಲ ನಮ್ಮ ಮನೆಗೆ ಬಂತು ಕೊಂಡವರು ಅದನ್ನು ಹೊಡೆದು ಬಡಿದು ಒಯ್ದರು ಎಂದು ಮನೆಯಲ್ಲಿ ತಾಯಿಯವರು ಕಣ್ಣೀರು ಹಾಕಿದರು ೪ ನೆ ಸಲ ಬಂದಾಗ ಆ ಕರುವನ್ನು ಬಹಳ ಅಪ್ಪಿ ಮುದ್ದಾಡಿದೆ ಅದರ ಕಿವಿಯಲ್ಲಿ ಬಹಳಮಾತಾಡಿದೆ ನೀನು ಮತ್ತೆ ಬರ ಬೇಡ ಕಣೊ ಅವರು ನಿನಗೆ ಬಡಿಯುವುದನ್ನುನನಗೆ ನೋಡಲಾಗುವುದಿಲ್ಲ ನೀನು ಮೊಂಡಾಟ ಮಾಡಬೇಡ ಮತ್ಮ್ತೆ ಈ ಮನೆಗೆ ನೀನುಬರಬೇಡ ಮನೆ ಋಣ ಮುಗಿಯಿತು ಇನ್ನು ನೀನು ಒದೆ ತಿನ್ನುವುದು ನನಗೆ ನೋಡಲಾಗುವುದಿಲ್ಲ ನಿನಗೆ ಬಹಳ ಹೊಡೆದಿದ್ಗಾರೆ ದುಷ್ಟರು ಎಂದು ಅದರಮೈಯ್ಯೆಲ್ಲ ಮೃದುವಾಗಿ ನೇವರಿಸಿ ಮುತ್ತಿಟ್ಟೆ ನಾನು ಶಾಲೆಗೆ ಹೋದೆ ಮತ್ತೆ ಮರುದಿನಕರು ಬರಲಿಲ್ಲ.ಪ್ರೀತಿ ಕೊಟ್ಟವರಿಗೆ ಪ್ರೀತಿಯ ಸಂಕಟ ಅರ್ಥವಾಗುತ್ತದೆ