ಉಡುಪಿ: ಬ್ರಹ್ಮಾವರದ ಘಟನೆ ಮಾಸುವ ಮುನ್ನವೇ ಇನ್ನೊಂದು ಪ್ರಕರಣ ಬೆಳಕಿಗೆ!!! ಸುಟ್ಟ ಕಾರಿನ ಹಿಂದಿನ ಸೀಟಿನಲ್ಲಿದೆ ಶವ??

ಉಡುಪಿ:ಇತ್ತೀಚೆಗಷ್ಟೇ ಉಡುಪಿಯ ಬ್ರಹ್ಮಾವರದಲ್ಲಿ ಬೆಂಗಳೂರು ಮೂಲದ ಜೋಡಿಯೊಂದು ಕಾರಿನೊಳಗೆ ಬೆಂಕಿ ಹಚ್ಚಿಕೊಂಡು, ಕಾರು ಸಹಿತ ದೇಹ ಸುಟ್ಟು ಕರಕಲಾದ ಘಟನೆ ಮಾಸುವ ಮುನ್ನವೇ ಅದೇ ಘಟನೆಯನ್ನು ಹೋಲುವ ಇನ್ನೊಂದು ಘಟನೆ ಬೆಳಕಿಗೆ ಬಂದಿದೆ.ಹೌದು ಜಿಲ್ಲೆಯ ಬೈಂದೂರು ತಾಲೂಕಿನ ವತ್ತಿನೆಣೆ ಪ್ರದೇಶದ ಹೇನಬೇರು ಎಂಬಲ್ಲಿ ಕಾರಿನೊಳಗೆ ವ್ಯಕ್ತಿಯೊಬ್ಬರು ಸುಟ್ಟ ಘಟನೆ ನಡೆದಿದೆ.

 

ಜುಲೈ 13ರ ಮುಂಜಾನೆ ಕಾರೊಂದು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದರೊಳಗೆ ಗುರುತು ಸಿಗದಂತಹ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ಪೋರ್ಡ್ ಕಂಪೆನಿಯ ಐಕಾನ್ ಕಾರು ಎನ್ನಲಾಗಿದ್ದು ಚಾಸ್ಸಿಸ್ ಹಾಗೂ ಇಂಜಿನ್ ನಂಬರ್ ಕೂಡ ಸುಟ್ಟು ಹೋದ ಕಾರಣ ಕಾರಿನ ಮಾಲಕರ ಪತ್ತೆ ಕೂಡ ಕಷ್ಟವಾಗಿದೆ. ವತ್ತನೆಣೆಯಲ್ಲಿ ಕಾಡು ಪ್ರದೇಶದಲ್ಲಿ ಕಾರಿನೊಳಗೆ ಅಪರಿಚಿತ ಶವ ಕೂಡಾ ಪತ್ತೆಯಾಗಿದ್ದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸುಟ್ಟು ಕರಕಲಾದ ಕಾರಿನ ಜೊತೆ ವ್ಯಕ್ತಿಯ ದೇಹ ಕೂಡಾ ಸಂಪೂರ್ಣ ಸುಟ್ಟು ಕರಕಲಾಗಿದೆ. ಸಂಪೂರ್ಣ ಸುಟ್ಟ ಕಾರಣ ವ್ಯಕ್ತಿಯ ಗುರುತು ಪತ್ತೆಯಾಗದೇ ಇದ್ದುದರಿಂದ ಮೃತ ವ್ಯಕ್ತಿಯ ಪತ್ತೆ ಹಚ್ಚುವ ಕಾರ್ಯಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಪತ್ತೆಹಚ್ಚುವ ಕಾರ್ಯದಲ್ಲಿ ನಿರತರಾದ ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ, ಮತ್ತು ಪಿ.ಎಸ್.ಐ ಪವನ್ ನಾಯಕ್ ತಂಡ ಹಾಗೂ ಸ್ಥಳಕ್ಕೆ ಫೋರೆನ್ಸಿಕ್ ತಜ್ಞರು ಆಗಮಿಸಿದ ಬಳಿಕವಷ್ಟೇ ಹೆಚ್ಚಿನ ಮಾಹಿತಿ ಲಭಿಸಲಿದೆ.

ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.