ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವು ಪ್ರಕರಣಕ್ಕೆ ದೊರೆಯಿತು ಬಿಗ್ ಟ್ವಿಸ್ಟ್ | NCB ಯಿಂದ ಮಹತ್ವದ ಮಾಹಿತಿ ಬಹಿರಂಗ

ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ಇಡೀ ಚಿತ್ರರಂಗ ಮಾತ್ರವಲ್ಲ, ದೇಶದ ಜನರೇ ಬಾಲಿವುಡ್ ಚಿತ್ರರಂಗದತ್ತ ನೋಡಿದ ದಿನ‌. ಎಲ್ಲೆಡೆ ಜನ ಆಕ್ರೋಶಗೊಂಡ ದಿನ. ಎಷ್ಟೊ ಮಂದಿ ಸುಶಾಂತ್ ಮರಣ ನಂತರ ಬಾಲಿವುಡ್ ಚಿತ್ರರಂಗವನ್ನು ದ್ವೇಷಿಸಿದ್ದು ಸುಳ್ಳಲ್ಲ. ಈಗ ಈ ಕೇಸ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಸುಶಾಂತ್ ನಿಧನ ಹೊಂದಿ ಎರಡು ವರ್ಷ ಕಳೆದರೂ ಅವರ ಸಾವಿಗೆ ನಿಖರವಾದ ಕಾರಣವೇನು ಎಂದು ತಿಳಿದುಬಂದಿಲ್ಲ. ಇದು ಆತ್ಮಹತ್ಯೆಯೋ ಕೊಲೆಯೋ ಎಂದು ಕೆಲವರು ಬಿಂಬಿಸುವುದರಲ್ಲೇ ಇದ್ದಾರೆ.

 

ಇದೀಗ ಎನ್ ಸಿಬಿ ಯಿಂದ ಮತ್ತೊಂದು ಮಾಹಿತಿ ತಿಳಿದು ಬಂದಿದೆ. ಅದೇನೆಂದರೆ, ಸುಶಾಂತ್ ಸಿಂಗ್ ರಜಪೂತ್ ಅತೀಯಾಗಿ ಮಾದಕ ದ್ರವ್ಯವ್ಯಸನಿಯಾಗಲು ರಿಯಾ ಚಕ್ರವರ್ತಿ ಅವರು ಕುಮ್ಮಕ್ಕು ನೀಡಿದ್ದರು ಎಂದು ಎನ್ ಸಿಬಿ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ. ಅವರ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದ ತನಿಖೆಯಲ್ಲಿ ಎನ್ಸಿಬಿ ಈ ಪ್ರಕರಣದಲ್ಲಿ 35 ಆರೋಪಿಗಳ ವಿರುದ್ಧ ಒಟ್ಟು 38 ಆರೋಪಗಳನ್ನು ಹೊರಿಸಿದೆ.

ಈ ಕುರಿತು ಅತೀ ಶೀಘ್ರದಲ್ಲೇ ತನಿಖೆಯ ತೀರ್ಪು ಹೊರಗೆ ಬರಲಿದೆ. ಅದಕ್ಕಾಗಿ ಸುಶಾಂತ್ ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ. ಇಂದಿಗೂ ಸಹ ಸುಶಾಂತ್ ಸಾವಿಗೆ ನ್ಯಾಯ ಸಿಗಬೇಕೆಂದು ಅದೆಷ್ಟೋ ಮಂದಿ ಹೋರಾಟ ಮಾಡುತ್ತಿದ್ದಾರೆ. ಪ್ರಕರಣದ ತನಿಖೆ ಪೂರ್ಣಗೊಂಡು ಸುಶಾಂತ್ ಸಾವಿಗೆ ಕಾರಣ ಆದವರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

Leave A Reply

Your email address will not be published.