ಕರ್ನಾಟಕ ಭೂಪಟ ಕ್ಕೆ ಅವಮಾನ ಮಾಡಿದರೇ ಸಿದ್ದರಾಮಯ್ಯ !?

Share the Article

ಸಿದ್ದರಾಮಯ್ಯ ಅವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಆಗಸ್ಟ್‌ 3ರಂದು ಸಿದ್ದರಾಮೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮದ ಕುರಿತಾಗಿ ಪ್ರಚಾರಕ್ಕೆ ಬಳಸುತ್ತಿರುವ ಕಾರುಗಳ ಮೇಲೆ ಕರ್ನಾಟಕದ ಭೂಪಟವನ್ನು ಚಿತ್ರಿಸಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ‘ಮೈಸೂರು ಜಿಲ್ಲೆಯಲ್ಲಿ ಕಂಡ ಅಪಮಾನಕರ ಸೋಲು, ಕರಾವಳಿ ಭಾಗದಲ್ಲಿ ಕಾಂಗ್ರೆಸ್‌ ದುರ್ಬಲವಾಗಿರುವುದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ನಿದ್ದೆಗೆಡಿಸಿದೆ ಎಂದು ಬಿಜೆಪಿ ಟೀಕಿಸಿದೆ.

ಇದರ ಕೋಪವನ್ನು ಕರ್ನಾಟಕದ ಭೂಪಟದ ಮೇಲೆ ತೋರಿಸಿ, ಮೈಸೂರು ಹಾಗೂ ಕರಾವಳಿ ಭಾಗಕ್ಕೆ ಕತ್ತರಿ ಹಾಕಿದ್ದಾರೆ. ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ಭೂಪಟವನ್ನು ವಿರೂಪಗೊಳಿಸಿದ್ದು ಕನ್ನಡಿಗರಿಗೆ ಮಾಡಿದ ಅವಮಾನ’ ಎಂದು ವಾಗ್ದಾಳಿ ನಡೆಸಿದೆ.

Leave A Reply