ಇನ್ಮುಂದೆ ಸೆಕ್ಸ್ ಕ್ರಿಮಿನಲ್ ಗಳ ‘ ಬುಡಕ್ಕೇ ‘ ಸರಕಾರವೇ ಮಡಗಲಿದೆ ಮದ್ದು !
ಲೈಂಗಿಕತೆಯ ಸಂಬಂಧಿತ ಕ್ರೈಂ ಅನ್ನು ಮಹಾಮಾರಿಯೆಂದೇ ಹೇಳಬಹುದು. ಕಾನೂನಿನಲ್ಲಿ ಯಾವುದೇ ರೀತಿಯ ಕಠಿಣ ಶಿಕ್ಷೆ ಇದ್ದರೂ ಕೂಡಾ ಇದರ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಎನ್ನಬಹುದು. ಹಾಗಾಗಿ ಇಲ್ಲೊಂದು ಸರಕಾರ ಈ ಲೈಂಗಿಕ ಅಪರಾಧಗಳನ್ನು ಲೈಂಗಿಕತೆಯ ತೀವ್ರತೆಯನ್ನು ಬುಡಸಮೇತ ತಡೆಗಟ್ಟುವ ನಿಟ್ಟಿನಲ್ಲಿ ಒಂದು ಹೊಸ ಕಾನೂನನ್ನು ಜಾರಿಗೊಳಿಸಿದೆ. ಇದೊಂದು ಮಹತ್ವದ ಹೆಜ್ಜೆ ಈ ಸರಕಾರದಿಂದ ಎಂದೇ ಹೇಳಬಹುದು.
ಲೈಂಗಿಕ ಅಪರಾಧಿಗಳಿಗೆ ಸ್ವಯಂ ಪ್ರೇರಿತ ಕೆಮಿಕಲ್ ಕ್ಯಾಸ್ಟೇಶನ್ (ಲೈಂಗಿಕ ಹಾರ್ಮೋನ್ ಉತ್ಪಾದನೆ ನಿಲ್ಲಿಸಲು ರಾಸಾಯನಿಕಗಳು ಅಥವಾ ಔಷಧಗಳ ಬಳಕೆ) ಮಾಡುವ ಮೂಲಕ ವ್ಯಕ್ತಿಗಳ ಲೈಂಗಿಕ ಆಸಕ್ತಿಯನ್ನೇ ತಗ್ಗಿಸುವ ಕಾರ್ಯಕ್ಕೆ ಕೈ ಹಾಕಲಾಗಿದೆ.
ಇದರ ಪ್ರಕಾರ, ಈ ಲೈಂಗಿಕ ಅಪರಾಧಿಗಳು, ಮತ್ತೊಮ್ಮೆ ತಾವು ಲೈಂಗಿಕ ಅಪರಾಧ ಎಸಗುವ ಆತಂಕ ಹೊಂದಿದ್ದರೆ ಅಂಥವರಿಗೆ, ಅವರು ಬಯಸಿದ್ದಲ್ಲಿ ತಮ್ಮ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುವ ಚುಚ್ಚುಮದ್ದನ್ನು ಸ್ವೀಕರಿಸುವ ಆಯ್ಕೆ ನೀಡಲಾಗಿದೆಯಂತೆ. ಇಷ್ಟು ಮಾತ್ರವಲ್ಲ ಈ ಲೈಂಗಿಕತೆಯನ್ನು ಕಡಿಮೆ ಮಾಡಲು ನೀಡುವ ಚುಚ್ಚುಮದ್ದು ಸ್ವೀಕರಿಸಿದರೆ ಅಂಥಹ ಅಪರಾಧಿಗಳಿಗೆ ಕಡಿಮೆ ಜೈಲು ಶಿಕ್ಷೆಯನ್ನು ಕೂಡಾ ನೀಡಲಾಗುತ್ತಿದೆಯಂತೆ.
ಈ ಸಂಬಂಧಿತ ಮಸೂದೆಯನ್ನು ಥಾಯ್ಲೆಂಡ್ ಸೆನೆಟ್ ಅಥವಾ ಥಾಯ್ಲೆಂಡ್ ರಾಷ್ಟ್ರೀಯ ಪರಿಷತ್ ವರದಿ ಮಾಡಿದೆ. ಹಿಂಸಾಚಾರ ಸಂಬಂಧಿತ ಮರು ಅಪರಾಧ ತಡೆ ಮಸೂದೆಯನ್ನು ಥಾಯ್ಲೆಂಡ್ ಕಾನೂನು ಸಚಿವಾಲಯವು ಪ್ರಸ್ತಾಪಿಸಿದೆ ಮತ್ತು ಈಗಾಗಲೇ ಹೌಸ್ ಆಫ್ ರೆಪ್ರೆಸೆಂಟೇಟಿವ್ನಲ್ಲಿ ಅನುಮೋದನೆಯನ್ನು ಪಡೆದುಕೊಂಡಿದೆ. ಶೀಘ್ರದಲ್ಲೇ ಕಾನೂನು ಜಾರಿಯಾಗಲಿದೆ ಎಂದು ಬ್ಯಾಂಕಾಕ್ ಪೊಸ್ಟ್ ತಿಳಿಸಿದೆ.
ಅಂದಹಾಗೆ ಈ ಲೈಂಗಿಕತೆಯ ಆಸಕ್ತಿಯನ್ನು ಕಡಿಮೆ ಮಾಡುವ ಈ ಕ್ರಿಯೆ ಹಲವು ದೇಶಗಳಲ್ಲಿ ಜಾರಿಯಲ್ಲಿವೆ. ದಕ್ಷಿಣ ಕೊರಿಯಾ, ಪಾಕಿಸ್ತಾನ, ಪೋಲೆಂಡ್ ಮತ್ತು ಯುನೈಟೆಡ್ ಸ್ಟೇಟ್ಸ್ನ 8 ರಾಜ್ಯಗಳು ಕೆಮಿಕಲ್ ಕ್ಯಾಸ್ಟೇಶನ್ ನ್ನು ಅಳವಡಿಸಿಕೊಂಡಿವೆ. ನಾರ್ವೆ, ಡೆನ್ಮಾರ್ಕ್ ಮತ್ತು ಜರ್ಮನಿಯಲ್ಲಿ ಗಂಭೀರವಾರ ಲೈಂಗಿಕ ಅಪರಾಧಗಳ ಸರ್ಜಿಕಲ್ ಕೆಮಿಕಲ್ ಕ್ಯಾಸ್ಟೇಶನ್ ಮಾಡಲಾಗುತ್ತದೆ.
ಅಂದ ಹಾಗೇ ಈ ಕಾನೂನು ನಮ್ಮ ಭಾರತದಲ್ಲಿ ಜಾರಿಗೆ ಬಂದರೆ ಲೈಂಗಿಕ ಅಪರಾಧ, ಅತ್ಯಾಚಾರ ಸಂಬಂಧಿತ ಕೇಸ್ ಗಳು ಕಡಿಮೆಯಾಗಬಹುದು. ಹಾಗಾಗಿ ಈ ಕಾನೂನು ಜಾರಿಗೆ ಬಂದರೆ ಅತ್ಯಾಚಾರ ಅಪರಾಧಿಗಳ ಮನದಲ್ಲಿ ಭಯ ಹುಟ್ಟಿಸುವುದಂತೂ ಖಂಡಿತ.