ಮಕ್ಕಳಿಗೆ ಇನ್ನು ಶನಿವಾರ ಪೂರ್ಣ ದಿನ ತರಗತಿ

ಕರಾವಳಿಯಾದ್ಯಂತ ಮಳೆಯ ಆರ್ಭಟದ ಕಾರಣ ಕಳೆದ ಒಂದು ವಾರದಿಂದ ಶಾಲಾಕಾಲೇಜುಗಳಿಗೆ ರಜೆ ನೀಡಲಾಗಿತ್ತು. ತರಗತಿಗಳು, ಪಾಠಪ್ರವಚನಕ್ಕೆ ಹಿನ್ನಡೆಯಾದುದರಿಂದ, ವಿದ್ಯಾರ್ಥಿಗಳ ಓದು ಕಡಿತಗೊಂಡಿದೆ.

 

ಆದರೆ ಇದೀಗ, ರಜೆಗಳನ್ನು ಸರಿದೂಗಿಸಲು ಮುಂದಿನ ಆರು ವಾರಗಳ ಕಾಲ ಶನಿವಾರ ಪೂರ್ಣ ದಿನ ತರಗತಿಗಳನ್ನು ನಡೆಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಮೌಖಿಕ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

“ಸಾಮಾನ್ಯವಾಗಿ ಶಾಲೆಗಳು ಜೂನ್ 1ರಂದು ಪ್ರಾರಂಭವಾಗುತ್ತವೆ. ಆದರೆ, ಈ ವರ್ಷ ಮೇ ಎರಡನೇ ವಾರದಲ್ಲಿ ಪ್ರಾರಂಭವಾಗಿವೆ. ಅಂದರೆ ಪ್ರಸ್ತುತ ಶೈಕ್ಷಣಿಕ ವರ್ಷವು ಇತರ ಶೈಕ್ಷಣಿಕ ವರ್ಷಗಳಿಗೆ ಹೋಲಿಸಿದರೆ 15 ದಿನಗಳ ಮುಂಚಿತವಾಗಿ ಪ್ರಾರಂಭವಾಗಿದೆ. ಆದ್ದರಿಂದ, ಒಂದು ವಾರ ರಜೆ ಕೊಟ್ಟಿರುವುದು ತರಗತಿಯ ಮೇಲೆ ಯಾವುದೇ ದೊಡ್ಡ ಮಟ್ಟದ ಪರಿಣಾಮ ಬೀರುವುದಿಲ್ಲ. ಆದರೂ ಕಳೆದುಹೋದ ಅಧ್ಯಯನ ಸಮಯವನ್ನು ಸರಿದೂಗಿಸಲು ವಾರಾಂತ್ಯದಲ್ಲಿ ವ್ಯವಸ್ಥೆ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ (ಡಿಪಿಐ) ಶಾಲೆಗಳಿಗೆ ಮೌಖಿಕ ಸೂಚನೆ ನೀಡಿದೆ” ಎಂದು ತಿಳಿದುಬಂದಿದೆ.

Leave A Reply

Your email address will not be published.