ಸುಳ್ಯ : ವರುಣನ ಆರ್ಭಟ, ಗೃಹಪ್ರವೇಶಕ್ಕೆ ಸಿದ್ಧವಾಗಿದ್ದ ಮನೆ ನೆಲಸಮ!

ಮಂಗಳೂರು: ಕರಾವಳಿಯಾದ್ಯಂತ ಮಳೆ ಜೋರಾಗಿದೆ. ಎಲ್ಲೆಡೆ ಬಿರುಸಿನ ಮಳೆ ಗಾಳಿಯಿಂದಾಗಿ ಹಲವು ಕಡೆ ಗುಡ್ಡಗಳು ಕುಸಿದು ಬೀಳುತ್ತಿವೆ. ಜನ ಭಯಭೀತರಾಗಿಯೇ ದಿನ ಕಳೆಯುತ್ತಿದ್ದಾರೆ. ಜಿಲ್ಲಾಡಳಿತ ಎಲ್ಲಾ ಸಾಧ್ಯತೆಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

 

ಆದರೆ ಈ ಭಾರೀ ಮಳೆಯಿಂದಾಗಿ ಗೃಹಪ್ರವೇಶಕ್ಕೆ ಸಿದ್ಧವಾಗಿದ್ದ ಮನೆಯೊಂದು ನೆಲಸಮವಾಗಿರುವ ಘಟನೆಯೊಂದು ದಕ್ಷಿಣ ಕನ್ನಡದಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕ ಬಳಿ ಮೂರು ದಿನದ ಹಿಂದೆ ಮರ ಬಿದ್ದು ಮನೆ ಗೋಡೆಗಳಲ್ಲಿ ಬಿರುಕು ಮೂಡಿತ್ತು. ನಂತರ ಬಿರುಕು ಬಿಟ್ಟಿದ್ದ ಗೋಡೆ ದುರಸ್ತಿ ಕೆಲಸ ಮಾಡಲಾಗಿ ಗೃಹ ಪ್ರವೇಶಕ್ಕೆ ಸಜ್ಜು ಮಾಡಲಾಗಿತ್ತು. ಜುಲೈ 18ರಂದು ಗೃಹಪ್ರವೇಶಕ್ಕೆ ದಿನಾಂಕ ನಿಗದಿಪಡಿಸಲಾಗಿತ್ತು. ಎಲ್ಲಾ ತಯಾರಿಯನ್ನು ಮಾಡಲಾಗಿತ್ತು. ಆದರೆ ವರುಣನ ಕೃಪೆಯಿಂದಾಗಿ ಗುಡ್ಡ ಕುಸಿದು ಮನೆ ಸಂಪೂರ್ಣ ನೆಲಸಮವಾಗಿದೆ. ಕಷ್ಟಪಟ್ಟು ಕಟ್ಟಿದ್ದ ಮನೆ ಗೃಹಪ್ರವೇಶಕ್ಕೆ ಮೊದಲೇ ನೆಲಸಮವಾಗಿದ್ದರಿಂದ ಮನೆಯವರು ಕಂಗಾಲಾಗಿದ್ದಾರೆ.

Leave A Reply

Your email address will not be published.