ಆಘಾತಕಾರಿ ವಿಷಯ | ತರಗತಿಯಲ್ಲಿದ್ದ ಸಹಪಾಠಿಗೆ ಬೆಂಕಿ ಹಚ್ಚಿದ ವಿದ್ಯಾರ್ಥಿಗಳು ! ಕಾರಣ ಏನು ಗೊತ್ತೇ?

ಆಘಾತಕಾರಿ ಘಟನೆಯೊಂದರಲ್ಲಿ ಪ್ರೌಢಶಾಲಾ ಬಾಲಕನೋರ್ವನ ಮೇಲೆ ಆತನ ಸಹಪಾಠಿಗಳೇ ಬೆಂಕಿ ಹಚ್ಚಿದ ಘಟನೆಯೊಂದು ನಡೆದಿದೆ. ಈ ಘಟನೆಯಿಂದ ಎಲ್ಲರೂ ಭಯಭೀತರಾಗಿದ್ದಾರೆ. ಈ ಘಟನೆ ಮೆಕ್ಸಿಕೋ ನಗರದಲ್ಲಿ ನಡೆದಿದೆ.

 

14 ವರ್ಷದ ಪ್ರೌಢಶಾಲಾ ಬಾಲಕನ ಮೇಲೆ ಆತನ ಸಹಪಾಠಿಗಳೇ ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ನಡೆದಿದೆ.

ಶಾಲಾ ಬಾಲಕನ ಮೇಲೆ ಆತನ ಸಹಪಾಠಿಗಳೇ ತರಗತಿ ಕೊಠಡಿಯಲ್ಲಿ ಬೆಂಕಿ ಹಚ್ಚಿದ ಭಯಾನಕ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಆತ ಸ್ಥಳೀಯ ಭಾಷೆಯಲ್ಲಿ ಮಾತನಾಡಿದ್ದೇ ಆತ ಎಸಗಿದ ‘ಮಹಾಪರಾಧ’ ಎನ್ನಲಾಗಿದೆ. ಇದು ಜನಾಂಗೀಯ ತಾರತಮ್ಯ, ದ್ವೇಷ ತೀವ್ರವಾಗಿರುವ ದೇಶದಲ್ಲಿ ಈ ಘಟನೆ ಜನಸಾಮಾನ್ಯರ ಎದೆನಡುಗಿಸಿದೆ.

ಕ್ವಾರೆಟಾರೋದ ಕೇಂದ್ರ ರಾಜ್ಯದಲ್ಲಿನ ಪ್ರೌಢಶಾಲೆಯಲ್ಲಿ 14 ವರ್ಷದ ವಿದ್ಯಾರ್ಥಿ ಜುವಾನ್ ಜಮೋರಾನೋ ಕುಳಿತಿದ್ದ ಕುರ್ಚಿ ಮೇಲೆ ಇಬ್ಬರು ಸಹಪಾಠಿಗಳು ಆಲ್ಕೋಹಾಲ್ ಸುರಿದಿದ್ದಾರೆ. ತನ್ನ ಟ್ರಸರ್ಸ್ ಒದ್ದೆಯಾಗಿರುವುದು ಗೊತ್ತಾದ ಬಳಿಕ ಜುವಾನ್ ಎದ್ದು ನಿಂತಿದ್ದ. ಆಗ ಅವರಲ್ಲಿ ಒಬ್ಬಾತ ಆತನಿಗೆ ಬೆಂಕಿ ಹಚ್ಚಿದ್ದಾನೆ ಎಂದು ಬಾಲಕನ ಕುಟುಂಬ ತಿಳಿಸಿದೆ.

ಈ ಘಟನೆ ಜೂನ್‌ನಲ್ಲಿ ನಡೆದಿದೆ. ಬೆಂಕಿಯಿಂದ ತೀವ್ರವಾಗಿ ಗಾಯಗೊಂಡು, ಹಲವು ಸುಟ್ಟ ಗಾಯಗಳಿಗೆ ಒಳಗಾಗಿದ್ದಾನೆ. ಈ ವಾರವಷ್ಟೇ ಆತ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ.

Leave A Reply

Your email address will not be published.