ಕಾನ್ಪುರ ಹಿಂಸಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ | ಎಸ್ಐಟಿ ತನಿಖೆಯಿಂದ ಬಯಲಾಯ್ತು ಸ್ಫೋಟಕ ಮಾಹಿತಿ

ಉತ್ತರಪ್ರದೇಶ: ಬಿಜೆಪಿ ವಾಕ್ತಾರೆ ನೂಪರ್‌ ಶರ್ಮಾ, ಪ್ರವಾದಿ ಮುಹಮ್ಮದ್ ವಿರುದ್ಧ ನೀಡಿದ್ದ ಹೇಳಿಕೆ ರಾಜ್ಯವ್ಯಾಪಿ ಚರ್ಚೆಗೆ ಕಾರಣವಾಗಿದ್ದು, ಎಲ್ಲೆಡೆ ಪ್ರತಿಭಟನೆ ನಡೆದಿದೆ. ಇದೇ ರೀತಿ ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ಕಾನ್ಪುರದಲ್ಲಿ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

 

ಕಾನ್ಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎಸ್ಐಟಿ ತನಿಖೆ ಸ್ಫೋಟಕ ಮಾಹಿತಿಯೊಂದನ್ನ ಬಹಿರಂಗ ಪಡಿಸಿದ್ದು, ಹಿಂಸಾಚಾರ ಮಾಡುವಂತೆ ದುಷ್ಕರ್ಮಿಗಳಿಗೆ ತರಬೇತಿ, ಕಲ್ಲು ತೂರಾಟಕ್ಕೆ ಹಣ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ದಿನೇಶ್ ಅಗರ್ವಾಲ್ ಅವರು ಕೇಸ್ ಡೈರಿಯನ್ನು ದಾಖಲಿಸಿದ್ದಾರೆ.

ಎಸ್ಐಟಿ ತನಿಖೆಯ ಪ್ರಕಾರ, ಹಿಂಸಾಚಾರವನ್ನು ಹರಡಲು ದುಷ್ಕರ್ಮಿಗಳಿಗೆ ಹಣವನ್ನು ನೀಡಲಾಗಿದೆ. ಕಲ್ಲು ತೂರಾಟಗಾರರಿಗೆ 500-1,000 ರೂ.ಗಳನ್ನು ನೀಡಲಾಗಿದೆ. ಗಲಭೆಯ ಸಮಯದಲ್ಲಿ ಪೆಟ್ರೋಲ್ ಬಾಂಬ್ ಬಳಸಿದವರಿಗೆ 5,000 ರೂ.ಗಳನ್ನು ನೀಡಲಾಗಿದೆ ಎಂದು ಕೇಸ್ ಡೈರಿಯಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ, ದುಷ್ಕರ್ಮಿಗಳಿಗೆ ಸಿಕ್ಕಿಬಿದ್ದರೆ ಉಚಿತ ಕಾನೂನು ಸಹಾಯದ ಭರವಸೆಯನ್ನು ನೀಡಲಾಗಿದೆ ಎಂದು ಎಸ್ಐಟಿ ಉಲ್ಲೇಖಿಸಿದೆ. ಗಲಾಟೆಗಾಗಿ ಏಳರಿಂದ ಒಂಬತ್ತು ದಿನಗಳ ತರಬೇತಿಯನ್ನು ದುಷ್ಕರ್ಮಿಗಳಿಗೆ ನೀಡಲಾಗಿದೆ ಎಂದು ಕೇಸ್ ಡೈರಿಯಲ್ಲಿ ಉಲ್ಲೇಖಿಸಲಾಗಿದೆ.

Leave A Reply

Your email address will not be published.