ನಮ್ಮ ಬ್ರಹ್ಮಾಂಡ ಹೇಗಿದೆ ? ನಾಸಾ ಬಿಡುಗಡೆ ಮಾಡಿದ ಹೊಚ್ಚ ಹೊಸ ಪ್ರಮುಖ ಪೋಟೊ ಮಾಹಿತಿ ಇಲ್ಲಿದೆ
ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಅತ್ಯಂತ ಶಕ್ತಿಶಾಲಿ ಬಾಹ್ಯಾಕಾಶ ದೂರದರ್ಶಕ ಜೇಮ್ಸ್ ವೆಬ್ನಿಂದ ಹೊಸ ಫೋಟೋವನ್ನು ಬಿಡುಗಡೆ ಮಾಡಿದೆ. ಇದುವರೆಗಿನ ಬ್ರಹ್ಮಾಂಡದ ಅತ್ಯಂತ ಹೆಚ್ಚಿನ ರೆಸಲ್ಯೂಶನ್ ಬಣ್ಣದ ಛಾಯಾಚಿತ್ರ ಇದಾಗಿದೆ.
ನಾಸಾ ಬಿಡುಗಡೆಗೊಳಿಸಿದ ಚಿತ್ರವು “ಪರ್ವತಗಳು” ಮತ್ತು “ಕಣಿವೆಗಳ” ಭೂದೃಶ್ಯವನ್ನು ಹೊಳೆಯುವ ನಕ್ಷತ್ರಗಳೊಂದಿಗೆ ತೋರಿಸುತ್ತದೆ. ನಾಸಾದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವನ್ನು ಕಳೆದ ವರ್ಷ ಡಿಸೆಂಬರ್ 25 ರಂದು ಫ್ರೆಂಚ್ ಗಯಾನಾದ ಉಡಾವಣಾ ನೆಲೆಯಿಂದ ಏರಿಯಾನ್ ರಾಕೆಟ್ ಮೂಲಕ ಉಡಾವಣೆ ಮಾಡಲಾಗಿತ್ತು.
ಈ ಯಶಸ್ಸಿನ ಬಗ್ಗೆ ನಾಸಾ ಮುಖ್ಯಸ್ಥ ಬಿಲ್ ನೆಲ್ಸನ್, ‘ಈ ಬ್ರಹ್ಮಾಂಡವು 13 ಶತಕೋಟಿ ವರ್ಷಗಳಿಂದ ಪ್ರಯಾಣಿಸುತ್ತಿದೆ’ ಎಂದು ತಿಳಿಸಿದ್ದಾರೆ.