ಹಿಂದೂ ಯುವತಿಯರನ್ನು ಚುಡಾಯಿಸಿದ ಪ್ರಕರಣ; ಮತ್ತೋರ್ವ ಹಿಂದೂ ಕಾರ್ಯಕರ್ತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ
ಶಿವಮೊಗ್ಗ : ಹಿಂದೂ ಯುವತಿಯರನ್ನು ಚುಡಾಯಿಸುತ್ತಿದ್ದ ಮುಸ್ಲಿಂ ಯುವಕರನ್ನು ಪ್ರಶ್ನಿಸಿದ ಒಬ್ಬ ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ ಬೆನ್ನಲ್ಲೇ, ಮತ್ತೋರ್ವ ಹಿಂದೂ ಕಾರ್ಯಕರ್ತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಘಟನೆ ನಡೆದಿದೆ.
ಶಿವಮೊಗ್ಗದ ಬಾಲರಾಜ್ ಅರಸು ರಸ್ತೆಯ ಮಥುರಾ ಪ್ಯಾರಡೈಸ್ ಹೋಟೆಲ್ ಬಳಿ ಹರ್ಷ ಎಂಬ ಯುವಕನ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ, ನಿನ್ನೆ ರಾತ್ರಿ 10 ಗಂಟೆ 20 ನಿಮಿಷ ರ ಸಮಯದಲ್ಲಿ ರಾಜೀವ್ ಗಾಂಧಿ ಬಡಾವಣೆಯ ಮೊದಲನೇ ತಿರುವಿನಲ್ಲಿರುವ ಕಾಂತರಾಜು (27) ಎಂಬುವವರ ಮೇಲೂ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.
ಕಾಂತರಾಜು ಮನೆಯಿಂದ ಹೊರ ಬಂದು ಮೂತ್ರ ವಿಸರ್ಜನೆ ಮಾಡುವಾಗ ಹಿಂಬದಿಯಿಂದ ಬಂದ ನಾಲ್ಕೈದು ಜನ ದಾಳಿ ನಡೆಸಿದ್ದಾರೆ. ಆದರೆ ಯುವಕ ಅವರ ಆಯುಧಗಳನ್ನೇ ಕಸಿದುಕೊಂಡು ತಮ್ಮ ಕುಟುಂಬ ಮತ್ತು ಸ್ನೇಹಿತರನ್ನು, ಕರೆಯಿಸಿಕೊಂಡು ಯುವಕ ಬಜಾವ್ ಆಗಿದ್ದಾನೆ. ದಾಳಿ ನಡೆಸಿದವರನ್ನು ಅನ್ಯಕೋಮಿನ ಹುಡುಗರು ಎಂದು ಹೇಳಲಾಗುತ್ತಿದೆ.
ಹೊಡೆಯುವಾಗ ಇನ್ನೂ ಇಬ್ಬರ ಯುವಕರ ಹೆಸರನ್ನು ಹೇಳಿ ದಾಳಿ ನಡೆಸಿರುವ ಹಲ್ಲೆಕೋರರು, ಉಳಿದ ಇಬ್ಬರು ಯುವಕರನ್ನೂ ಮುಗಿಸುವುದಾಗಿ ಹೇಳಿದ್ದಾರೆ ಎಂದು ಕಾಂತರಾಜು ಎಂಬುವವರು ತಿಳಿಸಿದ್ದಾರೆ. ಕಾಂತರಾಜುವಿನ ಬಲಗೈ ಗೆ ಎರಡು ಏಟು ಮಚ್ಚಿನಿಂದ ಹೊಡೆಯಲಾಗಿದೆ.