ಪುತ್ತೂರು:ಮರದ ಗೆಲ್ಲು ಕಡಿಯುತ್ತಿದ್ದಾಗ ಪ್ರವಹಿಸಿದ ವಿದ್ಯುತ್!! ಮೆಸ್ಕಾಂ ಪವರ್ ಮ್ಯಾನ್ ಸಾವು
ಪುತ್ತೂರು:ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದು ಪವರ್ ಮ್ಯಾನ್ ಓರ್ವರು ಮೃತಪಟ್ಟ ಘಟನೆಯೊಂದು ಪುತ್ತೂರು ತಾಲೂಕಿನ ಕುಂಬ್ರ ಪರ್ಪುಂಜದಲ್ಲಿ ಜುಲೈ 12ರ ಮಧ್ಯಾಹ್ನ ನಡೆದಿದೆ.
ಮೃತರನ್ನು ಮೆಸ್ಕಾಂ ಕುಂಬ್ರ ಶಾಖಾ ಸಿಬ್ಬಂದಿ ಬಾಗಲಕೋಟೆ ಮೂಲದ ಬಸವರಾಜ್(26) ಎಂದು ಗುರುತಿಸಲಾಗಿದ್ದು, ಕೊಂಚ ಮಳೆ ಇಳಿಕೆಗೊಂಡ ಹಿನ್ನೆಲೆಯಲ್ಲಿ ವಿದ್ಯುತ್ ತಂತಿ ಹಾದುಹೋಗುವಲ್ಲಿ ಅಡ್ಡಿಯಾಗುತ್ತಿದ್ದ ಮರದ ಗೆಲ್ಲು ಕಡಿಯುತ್ತಿದ್ದ ಸಂದರ್ಭ ಘಟನೆ ನಡೆದಿದೆ ಎನ್ನಲಾಗಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.