ಸಹಾಯ ಎಂದು ಹಸ್ತ ಚಾಚಿದವನಿಗೆ ಬಂಗಾರದ ಬಳೆಯನ್ನೇ ಬಿಚ್ಚಿಕೊಟ್ಟ ಸಚಿವೆ!

ಇನ್ನೊಬ್ಬನ ಕಷ್ಟಗಳನ್ನು ಅರಿತು ನೆರವಾಗುವವನೇ ನಿಜವಾದ ಮಾನವ. ಮನೆತುಂಬಾ ಬೆಲೆಬಾಳುವ ಐಶ್ವರ್ಯಗಳು, ಕೋಟಿ-ಕೋಟಿ ಆಸ್ತಿಗಳು ಇದ್ದರೆ ಅದೇನು ಲಾಭವಿಲ್ಲ. ಬದಲಾಗಿ, ಕಷ್ಟ ಎಂದವನ ಪಾಲಿಗೆ ನೆರವಾಗುವವರು ಅತೀ ದೊಡ್ಡ ಶ್ರೀಮಂತ.

ಕೆಲವೊಂದಷ್ಟು ಜನ ವಿಶೇಷವಾಗಿ ಅಧಿಕಾರಿಗಳು, ಭರವಸೆ ನೀಡುತ್ತಾರೆಯೇ ವಿನಃ, ನೆರವಿಗೆಂದು ಕೈಚಾಚುವವರಿಗೆ ಒಂಚೂರು ಕರುಣೆಯಿಲ್ಲದೆ ಆತನನ್ನು ತಿರಸ್ಕರಿಸಿ ಹೋಗುತ್ತಾರೆ. ಆದರೆ ಇಲ್ಲೊಂದು ಕಡೆ ಈ ಮಹಾನ್ ವ್ಯಕ್ತಿ, ಕಷ್ಟ ಎಂದವನ ಪಾಲಿಗೆ ಒಂಚೂರು ಯೋಚಿಸದೆ ತನ್ನಿಂದಾಗುವ ಸಹಾಯವನ್ನು ನೀಡಿದ್ದಾರೆ. ಅವರೇ, ಕೇರಳದ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು. ಏನಿದು ಘಟನೆ ಎಂಬುದನ್ನು ಮುಂದೆ ಓದಿ..

ಈ ಘಟನೆ ತ್ರಿಶೂರಿನ ಇರಿಂಜಾಲಕುಡದಲ್ಲಿ ಪ್ರದೇಶದಲ್ಲಿ ನಡೆದಿದ್ದು, ಅಲ್ಲಿನ ವೈದ್ಯಕೀಯ ನೆರವು ಸಮಿತಿ ಕಿಡ್ನಿ ಮರುಜೋಡಣೆಗಾಗಿ ಒಂದು ಸಭೆ ನಡೆಸಿತ್ತು. ಅದರಲ್ಲಿ ಬಿಂದು ಅವರು ಕೂಡ ಪಾಲ್ಗೊಂಡಿದ್ದರು.

ಈ ವೇಳೆ ಕಿಡ್ನಿ ವೈಫಲ್ಯದಿಂದ ಬಳುತ್ತಿದ್ದ ವಿವೇಕ್ ಪ್ರಭಾಕರ್ ಎಂಬುವವರ ಜೊತೆ ಬಿಂದುವವರು ಮಾತನಾಡಿದ್ದಾರೆ. ಜೀವಂತ ಉಳಿಯಬೇಕಾದರೆ ಕಿಡ್ನಿ ಮರುಜೋಡಣೆ ಮಾಡಿಸಿಕೊಳ್ಳಲೇಬೇಕಾದ ಸ್ಥಿತಿಯಲ್ಲಿದ್ದ ಈ ವ್ಯಕ್ತಿಯ ಕಷ್ಟವನ್ನು ಗಮನಿಸಿದ ಆರ್.ಬಿಂದುರವರು ತಮ್ಮ ಒಂದು ಬಂಗಾರದ ಬಳೆಯನ್ನೇ ಬಿಚ್ಚಿಕೊಟ್ಟಿದ್ದಾರೆ.

ಇದನ್ನು ನೀನು ಮೊದಲ ದೇಣಿಗೆಯಾಗಿ ಸ್ವೀಕರಿಸಬೇಕೆಂದು ಕೇಳಿಕೊಂಡಿದ್ದಾರೆ. ಒಟ್ಟಾರೆ ಇವರ ಸಮಾಜಸೇವೆ ಜನಮೆಚ್ಚುಗೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲದೆ ಇವರ ನೆರವಿನ ಹಸ್ತ ಬರೀ ಕೇರಳಕ್ಕೆ ಮಾತ್ರವಲ್ಲದೆ ದೇಶದ ಎಲ್ಲಾ ಇತರೆ ಭಾಗದ ಜನತೆಗೂ ಮಾದರಿಯಾಗಿದೆ.

Leave A Reply

Your email address will not be published.