SDA : ಕರ್ನಾಟಕ ಹೈಕೋರ್ಟ್ 142 ಎಸ್ ಡಿಎ ಹುದ್ದೆಗಳ ಅಂತಿಮ ಆಯ್ಕೆಪಟ್ಟಿ ಪ್ರಕಟ!
ಕರ್ನಾಟಕ ಹೈಕೋರ್ಟ್‌ನ 142 ದ್ವಿತೀಯ ದರ್ಜೆ ಸಹಾಯಕರ ನೇಮಕಾತಿಗೆ ಕುರಿತಂತೆ, ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ಅಂತಿಮ ಆಯ್ಕೆಪಟ್ಟಿಯನ್ನು ಹೈಕೋರ್ಟ್ ಅಧಿಕೃತ ವೆಬ್‌ಸೈಟ್‌ನಲ್ಲಿ ಚೆಕ್ ಮಾಡಬಹುದು.
ಕರ್ನಾಟಕ ಹೈಕೋರ್ಟ್ 2021 ರ ಆಗಸ್ಟ್ 08 ರಂದು 142 (127 ಉಳಿಕೆ ಮೂಲ ವೃಂದ, 15 ಸ್ಥಳೀಯ ವೃಂದದ) ದ್ವಿತೀಯ ದರ್ಜೆ ಸಹಾಯಕರ ಭರ್ತಿಗೆ ನೇರ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿತ್ತು. ಈ ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ನೇರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಇದೀಗ ಅಭ್ಯರ್ಥಿಗಳ ಮಾಹಿತಿಗೆ ಆಯ್ಕೆಪಟ್ಟಿ ಬಿಡುಗಡೆ ಮಾಡಿದೆ.
ಆಯ್ಕೆಪಟ್ಟಿ ಚೆಕ್ ಮಾಡುವುದು ಹೇಗೆ?
ಹೈಕೋರ್ಟ್ ವೆಬ್ ವಿಳಾಸ https://karnatakajudiciary.kar.nic.in/ ಭೇಟಿ ನೀಡಿ.
ಅಲ್ಲಿ ಪೇಜ್‌ನ ಬಲಭಾಗದಲ್ಲಿ ‘Notification’ ಎಂದಿರುವಲ್ಲಿ ಗಮನಿಸಿ.
‘Selection list for the post of Second Division Assistant’ ಎಂದಿರುವ ಲಿಂಕ್ ಕ್ಲಿಕ್ ಮಾಡಿ.
ಹೈಕೋರ್ಟ್ ನ ಮತ್ತೊಂದು ವೆಬ್‌ಪುಟ ತೆರೆಯುತ್ತದೆ.
ಅಲ್ಲಿ ‘Selection List of the Candidates’ ಎಂದಿರುವಲ್ಲಿ ಕ್ಲಿಕ್ ಮಾಡಿ.
ಆಯ್ಕೆಪಟ್ಟಿ ತೆರೆಯುತ್ತದೆ, ಚೆಕ್ ಮಾಡಿಕೊಳ್ಳಿ.
ಜನ್ಮ ದಿನಾಂಕ ದಾಖಲೆ, ಶೈಕ್ಷಣಿಕ ಅರ್ಹತೆ, ಮೀಸಲಾತಿ ಕೋರಿದ್ದಲ್ಲಿ ದಾಖಲೆ, ಇತರೆ ಅಗತ್ಯ ದಾಖಲೆಗಳನ್ನು ದಿನಾಂಕ 23-07-2022 ರೊಳಗೆ ಹೈಕೋರ್ಟ್ ಎಸ್‌ಡಿಎ ನೇಮಕಾತಿ ವಿಭಾಗಕ್ಕೆ ಸಲ್ಲಿಸಬೇಕು.
ಸದರಿ ಪಟ್ಟಿಯಲ್ಲಿನ ಅಭ್ಯರ್ಥಿಗಳು ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು. ಅಲ್ಲದೇ ಪೊಲೀಸ್ ವೆರಿಫಿಕೇಶನ್ ರಿಪೋರ್ಟ್, ಮೆಡಿಕಲ್ ಫಿಟ್‌ನೆಸ್ ವರದಿ ಮತ್ತು ಸೇವೆಯಲ್ಲಿದ್ದಲ್ಲಿ ನಾನ್-ಅಬ್ಬೆಕ್ಷನ್ ಸರ್ಟಿಫಿಕೇಶನ್ ಅನ್ನು ಹಾಜರುಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನೋಟಿಫಿಕೇಶನ್ ಕ್ಲಿಕ್ ಮಾಡಿ