ತುಳುಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ನಾನು ಸೇರ್ಪಡೆ ಮಾಡುತ್ತೇನೆ – ಡಾ.ಡಿ ವೀರೇಂದ್ರ ಹೆಗ್ಗಡೆ
ನಮ್ಮ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ನಾನು ಸೇರ್ಪಡೆ ಮಾಡುತ್ತೇನೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ರಾಜ್ಯ ಸಭೆಗೆ ಆಯ್ಕೆ ಆಗಿರುವಂತಹ ಹೆಗ್ಗಡೆಯವರಿಗೆ ಬೇರೆ-ಬೇರೆ ತುಳು ಸಂಘಟನೆಗಳಿಂದ ಸನ್ಮಾನಗಳು ನಡೆದಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ವೀರೇಂದ್ರ ಹೆಗ್ಗಡೆಯವರು ‘ರಾಜ್ಯ ಸಭೆಗೆ ನಾನು ಆಯ್ಕೆ ಆದದ್ದು ತುಂಬಾ ಖುಷಿಯಾಗಿದೆ. ನಮ್ಮ ತುಳುಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ನಾನು ಸೇರ್ಪಡೆ ಮಾಡಲು ಪ್ರಯತ್ನ ಮಾಡುತ್ತೇನೆ’ ಎಂದಿದ್ದಾರೆ.
ಆದಿತ್ಯವಾರ ಈ ಕಾರ್ಯಕ್ರಮ ನಡೆದಿದ್ದು, ಇದರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಮತ್ತು ಡಾ. ಆಕಾಶ್ ರಾಜ್ ಜೈನ್, ಟೈಮ್ಸ್ ಆಫ್ ಕುಡ್ಲ ಎಸ್. ಆರ್. ಬಂಡಿಮಾರ್, ಯಶೋಧರ ಕೋಟ್ಯಾನ್, ಪ್ರಬಂಧಕರಾದ ಪವನ್ ರಾಜ್ ಮತ್ತು ಕಚೇರಿ ವ್ಯವಸ್ಥಾಪಕರು ಭುವನಾ ದಿನೇಶ್, ಲೆಕ್ಕ ಪತ್ರ ವಿಭಾಗದ ದೀಕ್ಷಿತ, ಜೈ ತುಳುನಾಡಿನ ಅಧ್ಯಕ್ಷರು ಅಶ್ವಥ್ ತುಳುವ ಕುಶಾಲಾಕ್ಷಿ ಕಣ್ವತೀರ್ಥ ಮತ್ತು ಅದರ ಸದಸ್ಯರು, ತುಳುವ ಪಕ್ಷದ ಸ್ಥಾಪಕ ಅಧ್ಯಕ್ಷರು ಶೈಲೇಶ್ ಆರ್. ಜೆ ಬೋಲ್ತೆರ್ ಮತ್ತು ಇತರ ಸದ್ಯಸರು ಉಪಸ್ಥಿತರಿದ್ದರು.