Shocking murder | ತಲವಾರಿನಿಂದ ದಾಳಿ ನಡೆಸಿ, ಹೋಗುವಾಗ ಎದೆಗೆ ಲಂಬವಾಗಿ ತಲವಾರ್ ಚುಚ್ಚಿ ಹಾಗೇ ಬಿಟ್ಟು ಹೋದ ಹಂತಕರು

Share the Article

ಕಲಬುರಗಿ: ಇವತ್ತು ಕಲಬುರ್ಗಿಯಲ್ಲಿ ಮೈ ನಡುಗಿಸುವಂತಹಾ ಕೊಲೆಯೊಂದು ನಡೆದಿದೆ. ಹಾಡಹಗಲೇ ಬರ್ಬರವಾಗಿ ಕೊಲೆ ಮಾಡಿದ್ದಲ್ಲದೆ, ಅವರ ಎದೆಗೆ ತಲವಾರ್ ಚುಚ್ಚಿ, ಆ ತಳವಾರ್ ಅನ್ನು ಹಾಗೆ ಚುಚ್ಚಿದ ಸ್ಥಿತಿಯಲ್ಲಿ ಬಿಟ್ಟು ಹೋಗಿರುವಂಥ ಭೀಕರ ಪ್ರಕರಣ ನಡೆದಿದೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಹಬಾದ್ ಪಟ್ಟಣದಲ್ಲಿ ಅದೂ ಶಹಬಾದ್ ನಗರದ ರೈಲ್ವೆ ನಿಲ್ದಾ ಮುಂಭಾಗದಲ್ಲಿ ಈ ಭೀಕರ ಕೊಲೆ ನಡೆದಿದೆ. ಶಹಬಾದ್ ನಗರಸಭೆ ಮಾಜಿ ಅಧ್ಯಕ್ಷ, ನಗರಸಭೆಯ ಹಾಲಿ ಅಧ್ಯಕ್ಷೆಯ ಪತಿ ಗಿರೀಶ್ ಕಂಬಾನುರ್ ಕೊಲೆಗೀಡಾದ ವ್ಯಕ್ತಿ.

ಇಂದು ನಾಲ್ವರು ಯುವಕರು ಓಡುತ್ತಾ ಬಂದು ಏಕಾಏಕಿ ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ದಾಳಿ ಮಾಡಿದ್ದಾರೆ. ಒಟ್ಟು 15 ರಿಂದ 20 ಬಾರಿ ಇರಿದಿದ್ದಾರೆ. ಆ ಬಳಿಕ ತಲವಾರ್‌ನಿಂದ ಎದೆಗೆ ಚುಚ್ಚಿ ಅದನ್ನು ಹಾಗೇಯೇ ಇಟ್ಟು ಹೋಗಿದ್ದಾರೆ. ಗಂಭೀರ ಗಾಯಗೊಂಡ ಗಿರೀಶ್ ಅವರನ್ನು ತಕ್ಷಣ ಕಲಬುರಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಬದುಕುಳಿಯಲಿಲ್ಲ.

ಎರಡು ವರ್ಷಗಳ ಹಿಂದೆ 2020ರ ಫೆಬ್ರವರಿಯಲ್ಲಿ ಗಿರೀಶ್ ಕಂಬಾನೂ‌ರ್ ಸಹೋದರ ಸತೀಶ್ ಕಂಬಾನೂರ್ ಕೊಲೆಯಾಗಿತ್ತು. ಇದೀಗ ಗಿರೀಶ್ ಕೂಡ ಕೊಲೆಯಾಗಿ ಹೋಗಿದ್ದು, ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೈಯಕ್ತಿಕ ದ್ವೇಷದಿಂದ ಕೊಲೆ ನಡೆದಿದೆ ಎನ್ನಲಾಗಿದೆ.

Leave A Reply