ಬೆಳ್ತಂಗಡಿ : ನಕಲಿ ಮೆಸ್ಕಾಂ ಇಲಾಖೆಯ ಸಂದೇಶ, ಎಚ್ಚರಿಕೆ ವಹಿಸಲು ಇಲಾಖೆಯ ಮಾಹಿತಿ
ದಿನಾ ಬೇರೆ ಬೇರೆ ರೀತಿಯಲ್ಲಿ ಅಮಾಯಕ ಜನರನ್ನು ವಂಚಿಸುವ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಕಾರಣ ಜನರ ನಿರ್ಲಕ್ಷವೆಂದೇ ಹೇಳಬಹುದು. ಇದೀಗ ವಿವಿಧ ಸಂಖ್ಯೆಗಳಿಂದ ಮೆಸ್ಕಾಂ ಇಲಾಖೆಯ ಹೆಸರಿನಲ್ಲಿ ಸಂದೇಶ ಕಳುಹಿಸಿ, ಅವರದ್ದೇ ಮೆಸ್ಕಾಂ ಸಂಖ್ಯೆಯನ್ನು ನಮೂದಿಸಿ ಕರೆ ಮಾಡಿ ಎಂದು ನಂಬಿಸುತ್ತಾರೆ. ಕೆಲ ಸಮಯದ ನಂತರ ಆ ನಂಬರ್ ಸ್ವಿಚ್ ಒಫ್ ಮಾಡಿ ಇನ್ನೊಂದು ನಂಬರ್ ನಿಂದ ಬೇರೆ ಬೇರೆ ಜನರಿಗೆ ಸಂದೇಶ ಕಳುಹಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಯಾವ ರೀತಿಯಲ್ಲಿ ಸಂದೇಶ ಕಳುಹಿಸುತ್ತಾರೆ ಎಂದರೆ ಮೆಸ್ಕಾಂ ಇಲಾಖೆಯ ಹೆಸರಿನಲ್ಲಿ 7679848920 ಸಂಖ್ಯೆಯಿಂದ ”ಪ್ರಿಯಾ ಗ್ರಾಹಕರೇ ನೀವು ನಿಮ್ಮ ಹಿಂದಿನ ತಿಂಗಳ ವಿದ್ಯುತ್ ಬಿಲ್ಲು ಪಾವತಿಸದ ಕಾರಣ ನಿಮ್ಮ ವಿದ್ಯುತ್ ಸಂಪರ್ಕವನ್ನು ಇಂದು ರಾತ್ರಿ 9.30 ಕ್ಕೆ ಕಡಿತಗೊಳಿಸಲಾಗುವುದು. ತಕ್ಷಣವೇ ವಿದ್ಯುತ್ ಇಲಾಖೆಯ ಮೊಬೈಲ್ ಸಂಖ್ಯೆ 8116170061 ಗೆ ಕರೆ ಮಾಡಿ ವಿದ್ಯುತ್ ಶುಲ್ಕ ಪಾವತಿಸಿ ಧನ್ಯವಾದಗಳು ಎಂದು ಇಂಗ್ಲಿಷ್ ನಲ್ಲಿ ಸಂದೇಶ ಕಳುಹಿಸುತ್ತಾರೆ.
ಮೆಸ್ಕಾಂ ಇಲಾಖೆಯ ಮೀಟರ್ ಅನುಮತಿ ಪಡೆಯದವರಿಗೂ ಸಂದೇಶ ಕಳುಹಿಸಿ ಹಣ ವಂಚನೆ ಮಾಡಿದ್ದು, ಮಂಗಳೂರು ಮತ್ತು ಬೆಳ್ತಂಗಡಿಯ ಹಲವು ಮಂದಿಗೆ ಈ ಸಂದೇಶ ಬಂದಿರುತ್ತದೆ. ಈ ನಕಲಿ ಮೆಸ್ಕಾಂ ಬಗ್ಗೆ ಎಚ್ಚರಿಕೆಯಿಂದ ಇರಲು ಮೆಸ್ಕಾಂ ಇಲಾಖೆ ಸಂದೇಶ ನೀಡಿದೆ. ಇಂತಹ ಯಾವುದೇ ಸಂದೇಶ ಮೆಸ್ಕಾಂ ಕಳುಹಿಸುದಿಲ್ಲ ಎಂದು ಅಧಿಕಾರಿಗಳು ಸ್ವಷ್ಟಪಡಿಸಿದ್ದಾರೆ.