SDA : ಜಲಸಂಪನ್ಮೂಲ ಇಲಾಖೆಯ ಎಸ್ ಡಿಎ ಹುದ್ದೆಗಳ ಆಕಾಂಕ್ಷಿಗಳೇ ನಿಮಗೊಂದು ಮಹತ್ವದ ಮಾಹಿತಿ

ಜಲ ಸಂಪನ್ಮೂಲ ಇಲಾಖೆಯ ಗ್ರೂಪ್-ಸಿ ವೃಂದದ ಪರಿಶಿಷ್ಟ ಜಾತಿ ಬ್ಯಾಕ್‌ಲಾಗ್ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸ್ವೀಕಾರ ಪ್ರಕ್ರಿಯೆಯನ್ನು ಅನಿರ್ಧಿಷ್ಠಾವಧಿಯವರೆಗೆ ಮುಂದೂಡಲಾಗಿದೆ.

ವಾಟರ್ ರಿಸೋರ್ಸ್ ಡಿಪಾರ್ಟೆಂಟ್ ನ ದ್ವಿತೀಯ ದರ್ಜೆ ಸಹಾಯಕರ ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿಗಾಗಿ ಜೂನ್ ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಸದರಿ ಹುದ್ದೆಗಳಿಗೆ ಇಂದಿನಿಂದ (ದಿನಾಂಕ – 11-07 2022) ಆನ್‌ಲೈನ್ ಅರ್ಜಿ ಸಲ್ಲಿಸಲು ದಿನಾಂಕ ನಿಗದಿ ಪಡಿಸಲಾಗಿತ್ತು.

ಸದರಿ ನೇಮಕಾತಿ ಪ್ರಕ್ರಿಯೆ ಮುಂದೂಡಿರುವ ಕುರಿತು ಪ್ರಕಟಣೆ ಹೊರಡಿಸಿರುವ ಇಲಾಖೆ, ‘ತಾಂತ್ರಿಕ ಕಾರಣಾಂತರಗಳಿಂದ ಅನಿರ್ದಿಷ್ಠ ಅವಧಿಯವರೆಗೆ ಈ ನೇಮಕಾತಿ ಪ್ರಕ್ರಿಯೆ ಮುಂದೂಡಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಕೆಯ ಪ್ರಾರಂಭಿಕ ಹಾಗು ಕೊನೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ವೆಬ್‌ಸೈಟ್ https://waterresource.karnataka.gov.in ಪ್ರಕಟಿಸಲಾಗುವುದು’ ಎಂದು ಹೇಳಲಾಗಿದೆ.

ಸದರಿ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಮುಂದಿನ ದಿನಗಳಲ್ಲಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.

Leave A Reply

Your email address will not be published.