ನಿಮ್ಮ ದೇಹ ಆಗುತ್ತೆ ಟೊಳ್ಳು ಈ ವಿಟಮಿನ್ ಇಲ್ಲದಿದ್ದರೆ | ತಜ್ಞರಿಂದ ಸ್ಫೋಟಕ ಮಾಹಿತಿ
ಟೊಳ್ಳು ಅಂದರೆ ಸಾಮಾನ್ಯ ಅರ್ಥವೇನೆಂದರೆ ಏನಿಲ್ಲ ಎಂದು. ಅಂದರೆ ಖಾಲಿ. ಇರುವ ಹಾಗೇ ಕಂಡರೂ ಒಳಗಡೆ ಏನಿಲ್ಲ ಎಂದರ್ಥ. ಟೊಳ್ಳುಮಾತು, ಈ ಕಾಯಿ ಬರೀ ಟೊಳ್ಳು ; ಆತನದೆಲ್ಲ ಬರೇ ಟೊಳ್ಳು ಮಾತು ಎಂಬ ಮಾತುಗಳನ್ನು ನೀವು ಆಗೊಮ್ಮೆ ಈಗೊಮ್ಮೆ ಕೇಳಿರಬಹುದು. ಈಗ ಈ ಟೊಳ್ಳು ಎಂಬುದರ ಬಗ್ಗೆ ತಜ್ಞರು ಸ್ಫೋಟಕ ಮಾಹಿತಿಯೊಂದನ್ನು ನೀಡಿದ್ದಾರೆ.
ಮನುಷ್ಯನ ದೇಹದ ಬೆಳವಣಿಗೆಗೆ ಅನೇಕ ರೀತಿಯ ಪೋಷಕಾಂಶಗಳು ಬೇಕಾಗುತ್ತವೆ. ಆದರೆ ತಜ್ಞರ ಪ್ರಕಾರ ವಿಟಮಿನ್ ಬಿ 12 ಮನುಷ್ಯನ ಆರೋಗ್ಯಕ್ಕೆ ಸರಿಯಾಗಿ ಸಿಗದಿದ್ದರೆ ನೀವು ಎಷ್ಟೇ ಆರೋಗ್ಯವಂತರಾಗಿದ್ದರೂ, ನಿಮ್ಮ ದೇಹ ಟೊಳ್ಳು ಎಂಬ ಸ್ಫೋಟಕ ಮಾಹಿತಿ ನೀಡಿದ್ದಾರೆ.
ಮನುಷ್ಯನ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳಲ್ಲಿ ಒಂದು ವಿಟಮಿನ್ ಬಿ 12 ಕೂಡಾ ಒಂದು. ಇದರ ಕೊರತೆಯು ನಮಗೆ ಸಾಕಷ್ಟು ಹಾನಿಯನ್ನು ಉಂಟುಮಾಡಬಹುದು. ಆರೋಗ್ಯವಂತ ವಯಸ್ಕರಿಗೆ ಪ್ರತಿದಿನ 2.4 ಮೈಕ್ರೊಗ್ರಾಂ ವಿಟಮಿನ್ ಬಿ 12 ಅಗತ್ಯವಿದೆ ಎಂದು ಭಾರತದ ಪ್ರಸಿದ್ಧ ಪೌಷ್ಟಿಕಾಂಶ ತಜ್ಞರು ಹೇಳಿದ್ದಾರೆ. ಈ ಪೋಷಕಾಂಶಗಳು ನಮಗೆ ದೊರೆಯದಿದ್ದರೆ, ದುರ್ಬಲ, ಆಯಾಸ, ಹಸಿವಾಗದಿರುವುದು, ವಾಂತಿ, ಅತಿಸಾರ, ತೂಕ ನಷ್ಟ, ಕೈಗಳು ಮತ್ತು ಪಾದಗಳ ಮರಗಟ್ಟುವಿಕೆಯಂತಹ ಸಮಸ್ಯೆಗಳು ಉಂಟಾಗಬಹುದು. ಇದು ದೇಹವನ್ನು ತುಂಬಾ ದುರ್ಬಲಗೊಳಿಸುತ್ತದೆ. ಈ ಜೀವಸತ್ವದ ಅಗತ್ಯವನ್ನು ಪೂರೈಸಲು ನಾವು ಯಾವ ಆಹಾರಗಳನ್ನು ಸೇವಿಸಬೇಕು ಎಂದು ತಿಳಿಯೋಣ.
ವಿಟಮಿನ್ ಬಿ12 ಪಡೆಯಲು ತಿನ್ನಬೇಕಾದ 5 ಆಹಾರಗಳು
ಮೊಟ್ಟೆ : ಪ್ರೋಟೀನ್ ಜೊತೆಗೆ, ನೈಸರ್ಗಿಕ ಕೊಬ್ಬು, ವಿಟಮಿನ್ ಬಿ 12 ಸಹ ಬಹಳಷ್ಟು ಅಂಶ ಮೊಟ್ಟೆಯಲ್ಲಿದೆ. ಕಂಡುಬರುತ್ತದೆ. ಹಳದಿ ಲೋಳೆ ತಿನ್ನುವುದರಿಂದ ಮೊಟ್ಟೆಯ ಬಿಳಿಭಾಗಕ್ಕಿಂತ ಬಿ12 ಹೆಚ್ಚು ದೊರೆಯುತ್ತದೆ.
ಡೈರಿ ಉತ್ಪನ್ನಗಳು : ಹೆಚ್ಚಿನ ಪ್ರಮಾಣದ ವಿಟಮಿನ್ ಬಿ 12 ಹಾಲು ಮತ್ತು ಅನೇಕ ಡೈರಿ ಉತ್ಪನ್ನಗಳಲ್ಲಿ ಕಂಡುಬರುತ್ತದೆ. ಇದಕ್ಕಾಗಿ, ನೀವು ದೈನಂದಿನ ಆಹಾರದಲ್ಲಿ ಹಾಲಿನ ಜೊತೆಗೆ ಚೀಸ್ ಮತ್ತು ಮೊಸರನ್ನು ಸಹ ಸೇರಿಸಬಹುದು. ಭಾರತದಂತಹ ದೇಶಗಳಲ್ಲಿ ಹಾಲಿನ ಕೊರತೆಯಿಲ್ಲ.
ಸಾಲ್ಮನ್ ಮೀನು : ಉಪ್ಪು ನೀರಿನಲ್ಲಿ ಕಂಡುಬರುವ ಈ ಮೀನು, ವಿಟಮಿನ್ ಬಿ 12 ಜೊತೆಗೆ, ಇದು ಸಾಕಷ್ಟು ಪ್ರೋಟೀನ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಸಹ ಒದಗಿಸುತ್ತದೆ.
ಮಾಂಸ : ನಮ್ಮ ದೇಹದ ಬೆಳವಣಿಗೆಗೆ ಅಗತ್ಯವಾದ ಸಾಕಷ್ಟು ಪ್ರೋಟೀನ್ ಮತ್ತು ಕೊಬ್ಬನ್ನು ಒಳಗೊಂಡಿದೆ. ಆದರೆ ನಿಮಗೆ ತಿಳಿಯದ ಒಂದು ವಿಷಯ ಇದೆ ಅದುವೇ, ಮಾಂಸವು ವಿಟಮಿನ್ ಬಿ 12ನ್ನು ಸಮೃದ್ಧವಾಗಿ ಹೊಂದಿದೆ. ಆದ್ದರಿಂದ ಸೀಮಿತ ಪ್ರಮಾಣದ ಮಾಂಸವನ್ನು ಸೇವಿಸಬೇಕು.
ಟ್ಯೂನಾ ಮೀನು : ಇದು ಸಮುದ್ರ ಮೀನು, ಇದು ವಿಟಮಿನ್ ಗಳು, ಖನಿಜಗಳು ಮತ್ತು ಪ್ರೋಟೀನ್ ಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲೂ ಮತ್ತೆ ವಿಟಮಿನ್ ಬಿ 12 ಹೆಚ್ಚಿದೆ. ಆದಾಗ್ಯೂ, ಇದು ದುಬಾರಿ ಮೀನು, ಇದು ಜಪಾನ್ ನಲ್ಲಿ ಸಾಕಷ್ಟು ಕಂಡುಬರುತ್ತದೆ.