ಕಳ್ಳನ ಹುಚ್ಚಾಟ : ಬಂಧನ ಭೀತಿಯಿಂದ ಈತ ಮಾಡಿದ್ದೇನು ಗೊತ್ತೇ?

ಈ ಕಳ್ಳರು ಮಾಡುವ ಕಿತಾಪತಿ ಒಂದಲ್ಲ. ಮಾಡುವುದು ಕಳ್ಳತನ ಅದರಲ್ಲೂ ಹುಚ್ಚಾಟ ಮಾಡುತ್ತಾರೆ. ಅಂಥದ್ದೊಂದು ಘಟನೆ ಮುಂಬೈನಲ್ಲಿ ನಡೆದಿದೆ

 

ಕಳ್ಳತನ ಮಾಡಿದ ಕಳ್ಳನೊಬ್ಬ ಕಟ್ಟಡವೊಂದರ ನಾಲ್ಕನೇ ಮಹಡಿಯಿಂದ ಜಿಗಿಯುತ್ತೇನೆ ಎಂದು ಕಳ್ಳನೊಬ್ಬ ಬಂಧನ ತಪ್ಪಿಸಿಕೊಳ್ಳಲು ಹುಟ್ಟಾಟ ಮೆರೆದಿದ್ದ ಘಟನೆ ಬೆಳಕಿಗೆ ಬಂದಿದೆ.

ಕೆಲ ಗಂಟೆಗಳ ಕಾಲ, ಅಲ್ಲಿನ ನಿವಾಸಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಕಟ್ಟಡವೊಂದರ ನಾಲ್ಕನೇ ಮಹಡಿಯಿಂದ ಆರೋಪಿ ರೋಹಿತ್ ಅವರ ಸುರಕ್ಷತೆಗಾಗಿ ಕಿಟಕಿಯ ಬಳಿ ಬರುವಂತೆ ಮನವೊಲಿಸಲು ಪ್ರಯತ್ನಿಸಿದರು.
ಎಷ್ಟೇ ಮನವೋಲಿಕೆಗೆ ಬಗ್ಗದ ಆರೋಪಿ ಬಂಧನ ಭೀತಿಯಲ್ಲಿ ಕಡ್ಡಡದಿಂದ ಜಿಗಿದಿದ್ದು, ತಕ್ಷಣ ಅವರನ್ನು ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಅಧಿಕಾರಿಗಳ ಪ್ರಕಾರ, ಕಳ್ಳತನಕ್ಕಾಗಿ ಬಂಧನಕ್ಕೊಳಗಾಗುವುದನ್ನು ತಪ್ಪಿಸಲು ಆ ವ್ಯಕ್ತಿ ಕಟ್ಟಡವನ್ನು ಏರಿ ಈ ದುಸ್ಸಾಹಕ್ಕೆ ಒಳಪಟ್ಟು ಜೀವವನ್ನೇ ಕಳೆದುಕೊಂಡಿದ್ದಾನೆ ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ

Leave A Reply

Your email address will not be published.