ಪಡುಬಿದ್ರಿ : ಇಂದು ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಘದ ನವೀಕೃತ ಹವಾನಿಯಂತ್ರಣ ಸಿಟಿ ಶಾಖೆ ಲೋಕಾರ್ಪಣೆ!
ಪಡುಬಿದ್ರೆ :ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಘದ ಪಡುಬಿದ್ರಿ ಹೃದಯ ಭಾಗದ ನವೀಕೃತ ಸಂಪೂರ್ಣ ಹವಾನಿಯಂತ್ರಣ ಸಿಟಿ ಶಾಖೆಯ ಉದ್ಘಾಟನೆಯು ಇಂದು ಜುಲೈ 9 ರಂದು ಪೂರ್ವಹ್ನ 11.00 ಗಂಟೆಗೆ ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಎಂ. ಎನ್ ರಾಜೇಂದ್ರ ಕುಮಾರ್ ನೆರವೇರಿಸಲಿರುವರು.ಇವರೊಂದಿಗೆ ಕೃಷಿ ಸಲಕರಣೆ ವಿಭಾಗದ ಉದ್ಘಾಟನೆಯನ್ನು ಇಂದೇ ನೆರವೇರಿಸಲಿದೆ ಎಂದು ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಉದ್ಘಾಟನೆಯ ಬಳಿಕ ಸೊಸೈಟಿಯ ಪ್ರಧಾನ ಕಚೇರಿಯ ವೈ ಲಕ್ಷ್ಮಣ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮವನ್ನು ಬೆಳಿಗ್ಗೆ 11.15 ಕ್ಕೆ ಆಯೋಗಿಸಲಾಗಿದ್ದು, ಗಣ್ಯತಿ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಸಭಾ ಕಾರ್ಯಕ್ರಮದಲ್ಲಿ ಸೊಸೈಟಿಯ ಕಾರ್ಯ ವ್ಯಾಪ್ತಿಯಲ್ಲಿ ಬರುವ ಭತ್ತದ ಕೃಷಿ ಬೆಲೆ ಬೆಳೆಯುವ ನೂರುಕ್ಕೂ ಹೆಚ್ಚು ಕೃಷಿಕರಿಗೆ ‘ಸಂಗಮ ಕೃಷಿ ನಿಧಿಯಿಂದ ಸಹಾಯಧನವನ್ನು ವಿತರಿಸಲಾಗುತ್ತದೆ.
ಕೃಷಿ ಸಾಮಗ್ರಿಗಳ ಮಳಿಗೆ ಉದ್ಘಾಟನೆಯನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಶುದ್ಧ ಕುಡಿಯುವ ನೀರು ಸೌಲಭ್ಯ ದ ಲೋಕಾರ್ಪಣೆಯನ್ನು ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ರವಿ ಶೆಟ್ಟಿ, ಚಿನ್ನಾಭರಣದ ಶುದ್ಧತೆ ಪರೀಕ್ಷಿಸುವ ಯಂತ್ರ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಶಂಕರ್ ಶೆಟ್ಟಿ ಇಂದ್ರಾಳಿ ಇವರು ನೆರವೇರಿಸಲಿರುವರು.ಪ್ರಧಾನ ಕಚೇರಿಯ ಸಭಾಂಗಣದಲ್ಲಿ ವೈ. ಸುಧೀರ್ ಕುಮಾರ್ ಇವರ ಅಧ್ಯಕ್ಷಯತೆಯಲ್ಲಿ ಶಾಸಕ ಲಾಲಾಜಿ ಆರ್ ಮೆಂಡನ್ ನೆರವೇರಿಸುವರು. ಭತ್ತದ ಕೃಷಿಗೆ ಸಹಾಯಧನ ವಿತರಣೆಯನ್ನು ಶಾಸಕ ಕೆ. ರಘುಪತಿ ಭಟ್ ನಡೆಸಲಿರುವರು.ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಸಹಕಾರ ಸಂಘಗಳ ನಿಬಂಧಕ ಲಕ್ಷ್ಮಿ ನಾರಾಯಣ್ ಜಿ.ಎನ್,ಸಹಾಯಕ ನಿಬಂಧಕಿ ಲಾವಣ್ಯ ಕೆ. ಆರ್, ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ರೊಂದಿಗೆ ಸಂಘದ ಉಪಾಧ್ಯಕ್ಷ ಗುರುರಾಜ್ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ.ಎಚ್,ನಿರ್ದೇಶಕರಾದ ಗಿರೀಶ್ ಪಲಿಮಾರು,ಶಿವರಾಮ ಎನ್. ಶೆಟ್ಟಿ,ವಾಸುದೇವಾ ದೇವಾಡಿಗ, ಮಾಧವ ಆಚಾರ್ಯ, ಸ್ವನಿ ಕ್ವಾಡ್ರಸ್ ಮತ್ತಿತರರು ಉಪಸ್ಥಿತರಿದ್ದರು.