ಖ್ಯಾತ ತಮಿಳು ನಟಿ ಪ್ರಿಯಾ, ನಿತ್ಯಾನಂದ ಸ್ವಾಮಿಯ ಜತೆ ವಿವಾಹ ?!

ಖ್ಯಾತ ತಮಿಳು ನಟಿ ಪ್ರಿಯಾ ಆನಂದ್ ರಸ ರಾಜ, ರಸಾಧಿಕ ಚಕ್ರವರ್ತಿ, ಕೈಲಾಸವಾಸಿ ಶ್ರೀಮಾನ್ ನಿತ್ಯಾನಂದ ಸ್ವಾಮಿಯನ್ನು, ಮದುವೆಯಾಗುವ ಮ್ಯಾಟರ್ ಇದೀಗ ದೊಡ್ಡ ಸುದ್ದಿಯಲ್ಲಿದೆ. ಆಕೆ ನಿತ್ಯಾನಂದನನ್ನು ಮದುವೆಯಾಗುವ ಹೇಳಿಕೆ ನೀಡಿದ್ದು, ಆಕೆಯ ಅಭಿಮಾನಿಗಳು ಅಸೂಯೆಪಡುತ್ತಿದ್ದಾರೆ.
ವಾಮನನ್‌ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಪ್ರಿಯಾ ಆನಂದ್, ಶಿವಕಾರ್ತಿಕೇಯನ್, ಅಥರ್ವ, ವಿಕ್ರಮ್ ಪ್ರಭು, ಗೌತಮ್ ಕಾರ್ತಿಕ್, ಪೃಥ್ವಿರಾಜ್, ಪುನೀತ್ ರಾಜ್‌ಕುಮಾರ್ ಮತ್ತು ಅಶೋಕ್ ಸೆಲ್ವನ್ ಸೇರಿದಂತೆ ದಕ್ಷಿಣ ಭಾರತದ ಹಲವಾರು ಟಾಪ್ ಹೀರೋಗಳೊಂದಿಗೆ ನಟಿಸಿದ್ದಾರೆ. ಅಮೆರಿಕಾದಲ್ಲಿ ಬೆಳೆದ ಈ ಚೆಲುವೆ ಬಹುಭಾಷಾ ನಟಿ ಎಂದೇ ಖ್ಯಾತಿಪಡೆದಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಜೇಮ್ಸ್ ಸೇರಿದಂತೆ ಕನ್ನಡದ ಕೆಲ ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆಯೂ ಇವರದ್ದು. ಈಗ 35 ವರ್ಷ ಆಗಿದ್ದರೂ, ‘ ಫಿಗರ್ ‘ ಅನ್ನು ಮಾತ್ರ ಮಿಸುಕದೆ ಹಾಗೆ ಇಟ್ಟುಕೊಂಡಿದ್ದಾಳೆ ಪ್ರಿಯಾ. ಅಂತಹ ಸೌಂದರ್ಯದ ಖನಿ ನಿತ್ಯಾನಂದ ಸ್ವಾಮಿಯನ್ನು ಮದುವೆ ಆಗುವುದೆಂದರೆ, ತಮಿಳುನಾಡಿನ ‘ಅಣ್ಣಾಚಿಗಳು’, ‘ಪಯ್ಯ’ಗಳು, ತೆಲುಗಿನ ‘ಬಿಡ್ಡ’ ರು ಮತ್ತು ಕನ್ನಡದ ಬರಗೆಟ್ಟ ಪಡ್ಡೆಗಳು ಬಾಯಿ ಬಡ್ಕೊಳ್ಳದೇ ಇರ್ತಾರಾ ? ಹಾಗೆಯೇ ಆಗಿದೆ. ಆಕೆಯ ಅಭಿಮಾನಿಗಳು ಉರ್ಕೊಳ್ತಾ ಇದ್ದಾರೆ. ಕಾರಣ ಆಕೆಯ ಮದುವೆ ವಿಚಾರ.

 

ಸಾಮಾನ್ಯವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಅಷ್ಟೇನೂ ಆಕ್ಟಿವ್‌ ಆಗಿರದ ನಟಿ ಪ್ರಿಯಾ ಆನಂದ್‌, ವಿವಾದಿತ ದೇವಮಾನವ ಸ್ವಾಮಿ ನಿತ್ಯಾನಂದ ಕುರಿತ ಪೋಸ್ಟ್ ಗಳನ್ನು ನಿಯಮಿತವಾಗಿ ತಿಂಗಳಿಗೆ ಎರಡು ಬಾರಿ ಹಂಚಿಕೊಳ್ಳುವುದನ್ನು ಅಭಿಮಾನಿಗಳು ಗಮನಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಪ್ರಿಯಾ ಆನಂದ್‌ ಅವರನ್ನು ಈ ಬಗ್ಗೆ ಕೇಳಿದಾಗ, ಅವರು ಕೊಟ್ಟ ಉತ್ತರ ಕೇಳಿದವರೆಲ್ಲ ಶಾಕ್‌ ಆಗಿದ್ದಾರೆ. ಆಗಲೇ, ಆಕೆಯ ಅಭಿಮಾನಿಗಳು ತಲ್ಲಣ ಅನುಭವಿಸಿ ನಿತ್ಯಾನಂದನ ಬಗ್ಗೆ ಅಸೂಯೆ ಬರಿಸಿಕೊಂಡು ಅಸಿಡಿಟಿ ಬಿಪಿ ಏರಿಸಿಕೊಂಡದ್ದು.

ಸ್ವಾಮಿ ನಿತ್ಯಾನಂದರವರು ತನ್ನ ವರ್ಚಸ್ಸಿನ ಮೂಲಕ ಸೆಳೆಯುವ ಕಾರಣ ಸಾವಿರಾರು ಜನ ಆತನನ್ನು ಹಿಂಬಾಲಿಸುತ್ತಾರೆ ಎಂದು ಪ್ರಿಯಾ ಈ ಸಂದರ್ಶನದಲ್ಲಿ ವಿವರಿಸಿದ್ದಾರೆ. ಅಲ್ಲದೇ ತಾನು ಅವನನ್ನು ಮದುವೆಯಾಗುತ್ತೇನೆ ಎಂದು ಪ್ರಿಯಾ ಹೇಳಿದ್ದಾರೆ. ನಿತ್ಯಾನಂದನನ್ನು ಮದುವೆಯಾದರೆ ತನ್ನ ಹೆಸರನ್ನು ಬದಲಾಯಿಸಬೇಕಾಗಿಲ್ಲ, ಏಕೆಂದರೆ ಅದು ಈಗಾಗಲೇ ಹೆಚ್ಚು ಕಡಿಮೆ ಹೋಲುತ್ತದೆ, ಆನಂದ- ನಿತ್ಯಾನಂದ ಎಂದು ಪ್ರಿಯಾ ಆನಂದ್ ಹೇಳಿದ್ದಾರೆ. ಅವರು ಹಾಸ್ಯಮಯವಾಗಿ ಹಾಗೆ ಹೇಳಿದ ಮಾತನ್ನು ಕೆಲವರು ಸೀರಿಯಸ್ ಆಗಿ ತೆಗೆದುಕೊಂಡಿದ್ದು, ಈಗ ಪ್ರಿಯಾ ಆನಂದ್ ಮದ್ವೆ ವಿಷ್ಯ ದೊಡ್ಡದಾಗಿ ಸುದ್ದಿಯಾಗುತ್ತಿದೆ. ಇಂಥವರನ್ನು ಕೂಡ ಆಕರ್ಷಿಸಬಲ್ಲ ನಿತ್ಯಾನಂದ ಈ ನಟಿಯನ್ನು ಬುಟ್ಟಿಗೆ ಹಾಕಿಕೊಂಡರೆ ಆಶ್ಚರ್ಯವೇನಿಲ್ಲ. ಅಲ್ಲದೆ ಈ ನಟಿ ಈಗಾಗಲೇ ನಿತ್ಯಾನಂದ ಮಹಾರಾಜನ ಪೋಸ್ಟ್ಗಳನ್ನು ಆಗಾಗ ಷೇರು ಮಾಡುತ್ತಿದ್ದು, ಈಗ ಮದುವೆಯ ವಿಷಯ ಅವಳಿಗೆ ಎತ್ತಿದ ಕಾರಣ ನಿತ್ಯಾ vs ಪ್ರಿಯಾ ಆನಂದ್ ರ ಕಲ್ಯಾಣದ ವಿಷಯ ಜೋರಾಗಿ ಚರ್ಚೆಯಲ್ಲಿದೆ.

ಪ್ರಿಯಾ ಆನಂದ್ ಅವರ ಮುಂದಿನ ಚಿತ್ರ ‘ಸುಮೋ’ ಮತ್ತು ‘ಕಾಸೆದನ್‌ ಕಡವುಲಡಾ’ ಇವೆರಡೂ ಮಿರ್ಚಿ ಶಿವ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವಲ್ಲದೇ, ‘ಅಂಧಗನ್’ ಸಿನಿಮಾದಲ್ಲಿ ಅವರು ಹಿರಿಯ ನಾಯಕ ಪ್ರಶಾಂತ್ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ.

Leave A Reply

Your email address will not be published.