ಲವ್ವರ್ ಜೊತೆ ಮಾಲ್ಡೀವ್ಸ್ ಗೆ ಹೋದ ಮದುವೆಯಾದ ವ್ಯಕ್ತಿ | ವಿಮಾನ ನಿಲ್ದಾಣದಲ್ಲೇ ಅರೆಸ್ಟ್ ! ವ್ಯಕ್ತಿಯ ಬಣ್ಣ ಬಯಲು ಮಾಡಿದ…ಆ ಒಂದು ವಸ್ತು
ಮದುವೆಯಾದ್ಮೇಲೆ ನೆಟ್ಟಗೆ ಸಂಸಾರ ಮಾಡ್ಕೊಂಡು ಇರಬೇಕು. ಬೇಡದ ವಿಚಾರಗಳಿಗೆ, ಬೇರೆ ಹೆಣ್ಣಿನ ಹಿಂದೆ ಹೋದರೆ ಅಪಾಯ ತಪ್ಪಿದ್ದಲ್ಲ. ಹಾಗೆನೇ ಇಲ್ಲೊಬ್ಬ ಮದುವೆಯಾದ ವ್ಯಕ್ತಿ, ಹೆಂಡತಿ ಇದ್ದರೂ ಪ್ರೇಮಿ ಜೊತೆ ಸುತ್ತಾಡೋಕೆ ಹೋಗಿದ್ದಾನೆ. ಆಮೇಲೆ ಆದದ್ದೇನು? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
ಮಾಲ್ಡೀವ್ಸ್ ಪ್ರೇಮಿಗಳಿಗೆ ಹೇಳಿ ಮಾಡಿಸಿದ ಜಾಗ. ಹೆಚ್ಚಿನವರು ಅಲ್ಲಿ ಸಮಯ ಕಳೆಯೋಕೆ ಹೋಗುತ್ತಾರೆ. ಅಲ್ಲಿನ ಸುಂದರ ಸಮುದ್ರದ ವರ್ಣನೆಯಂತೂ ಯಾರೂ ಹೇಳಿದರೂ ಅಲ್ಲೇ ಮನಸೋತು ಹೋಗ್ತೀರಾ…ಅಷ್ಟು ಚೆನ್ನಾಗಿದೆ. ಹಾಗೆನೇ ಅದು ಎಲ್ಲರನ್ನೂ ಸೆಳೆಯುತ್ತದೆ. ಮದುವೆಯಾದ ನವ ದಂಪತಿಗಳು ಅಲ್ಲಿಗೆ ಹೋಗುತ್ತಾರೆ. ಒಂಥರಾ ಅದು ಡ್ರೀಮ್ಸ್ ಕಮ್ಸ್ ಟ್ರೂ ಅನ್ನೋ ಥರಾ. ಮಾಲ್ಡೀವ್ಸ್ ನಿಮ್ಮ ರೋಮ್ಯಾಂಟಿಕ್ ಫೀಲ್ ಹೆಚ್ಚು ಮಾಡುವುದರಲ್ಲಿ ಎರಡು ಮಾತಿಲ್ಲ.
ಆದರೆ ಇಲ್ಲೊಬ್ಬ ಮದುವೆಯಾದ ಅಸಾಮಿ ತನ್ನ ಪ್ರೇಮಿ ಜೊತೆ ಭಾರತ ದಲ್ಲಿ ಸುತ್ತಾಡಿದ್ರೆ ಪತ್ನಿ ಗೆ ಗೊತ್ತಾಗುತ್ತೆ ಅಂತಾ ವ್ಯಕ್ತಿ ಮಾಲ್ಡೀವ್ಸ್ ಆಯ್ಕೆ ಮಾಡಿಕೊಂಡಿದ್ದಾನೆ.
ಅಲ್ಲಿ ಸುತ್ತಾಡಿ, ಗರ್ಲ್ ಫ್ರೆಂಡ್ ಜೊತೆ ಎಂಜಾಯ್ ಮಾಡಿ ವಾಪಸ್ ಬಂದಿದ್ದಾನೆ. ಈಗ ಈ ವ್ಯಕ್ತಿ ಮಾಡಿದ ತಪ್ಪಿಗೆ ಈಗ ಶಿಕ್ಷೆ ಅನುಭವಿಸುವಂತಾಗಿದೆ. ಅಷ್ಟಕ್ಕೂ ಆತ ಮಾಡಿದ್ದೇನು ಗೊತ್ತಾ? ವಿವಾಹೇತರ ಸಂಬಂಧಕ್ಕೆ ಯಾವುದೇ ಭದ್ರತೆಯಿಲ್ಲ. ಒಂದಾಲ್ಲ ಒಂದು ಸಮಯದಲ್ಲಿ ಅದು ಬಹಿರಂಗವಾಗುತ್ತೆ. ಪತ್ನಿಗೆ ಗೊತ್ತಾಗದ ಹಾಗೇ ಏನೇ ಆಟ ಆಡಲು ಹೋದರೆ ಅಷ್ಟೇ… ಸತ್ಯ ಹೇಗಾದ್ರೂ ಪತ್ನಿಗೆ ತಿಳಿಯುತ್ತೆ ಅನ್ನೋದಕ್ಕೆ ಈತನೇ ಸಾಕ್ಷಿ.
ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿರುವ ವಿವಾಹಿತ ಇಂಜಿನಿಯರ್ 32 ವರ್ಷದ ವ್ಯಕ್ತಿ ಪತ್ನಿಗೆ ಸುಳ್ಳು ಹೇಳಿ ಮಾಲ್ಡೀವ್ಸ್ ಗೆ ಹೋಗಿದ್ದಾನೆ. ಕೆಲಸದ ಮೇಲೆ ವಿದೇಶಕ್ಕೆ ಹೋಗ್ತಿದ್ದೇನೆ ಎಂದಿದ್ದವನು ಮಾಲ್ಡೀವ್ಸ್ ಗೆ ಪ್ರಯಾಣ ಬೆಳೆಸಿದ್ದಾನೆ. ಅಲ್ಲಿ ಗರ್ಲ್ ಫ್ರೆಂಡ್ ಜೊತೆ ಸುಂದರ ಕ್ಷಣಗಳನ್ನು ಕಳೆದಿದ್ದಾನೆ.
ಆದರೆ ಹೆಂಡತಿಗೆ ಏನೋ ಅನುಮಾನ ಬಂದಿದೆ. ಹಾಗಾಗಿ ಪದೇ ಪದೇ ವೀಡಿಯೋ ಕಾಲ್ ಮಾಡಿದ್ದಾಳೆ. ಗರ್ಲ್ ಫ್ರೆಂಡ್ ಜೊತೆ ಮಾಲ್ಡೀವ್ಸ್ ಹೋದ ವ್ಯಕ್ತಿ ಪತ್ನಿಯ ಕಾಟಕ್ಕೆ ಬೇಸತ್ತಿದ್ದಾನೆ. ಪತಿಯ ಮೇಲೆ ಅನುಮಾನಗೊಂಡ ಪತ್ನಿ ವಾಟ್ಸ್ ಅಪ್ ಕಾಲ್ ಮಾಡಿದ್ದಾಳೆ. ಆಕೆ ನಿರಂತರವಾಗಿ ಮಾಡ್ತಿದ್ದ ವಾಟ್ಸ್ ಅಪ್ ಕಾಲ್ ನಿಂದ ಕಂಗೆಟ್ಟ ಪತಿ ಮೊದಲೇ ಮುಂಬೈಗೆ ಬರುವ ನಿರ್ಧಾರ ತೆಗೆದುಕೊಂಡಿದ್ದಾನೆ.
ಪತ್ನಿಗೆ ಮಾಲ್ಡೀವ್ಸ್ ಸತ್ಯ ಗೊತ್ತಾಗಬಾರದು ಎಂಬ ಕಾರಣಕ್ಕೆ ವಿಮಾನ ಏರಿದ ನಂತ್ರ ಪಾಸ್ ಪೋರ್ಟ್ ಪೇಜ್ ಹರಿದಿದ್ದಾನೆ. ಮಾಲ್ಡೀವ್ಸ್ ನಿಂದ ಹಿಂದಿರುಗಿದ ನಂತರ ಅವನ ಪಾಸ್‌ಪೋರ್ಟ್‌ನ ಕೆಲವು ಪುಟಗಳು ನಾಪತ್ತೆಯಾಗಿರುವುದನ್ನು ವಿಮಾನ ನಿಲ್ದಾಣ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ನಂತರ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇಂಜಿನಿಯರ್ ಅಧಿಕಾರಿಗಳಿಗೆ ತೃಪ್ತಿದಾಯಕ ಉತ್ತರಗಳನ್ನು ನೀಡಲು ಸಾಧ್ಯವಾಗ್ಲಿಲ್ಲವಂತೆ. ಹಾಗಾಗಿ ಆತನನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಪೊಲೀಸ್ ವಶಕ್ಕೆ ನೀಡಿದ್ದಾರೆ. ವ್ಯಕ್ತಿ ಉದ್ದೇಶಪೂರ್ವಕವಾಗಿ ತನ್ನ ಪಾಸ್‌ಪೋರ್ಟ್‌ನ ಪುಟಗಳನ್ನು ಹರಿದು ಮಾಲ್ಡೀವ್ಸ್ ನಿಂದ ಭಾರತಕ್ಕೆ ಪ್ರಯಾಣಿಸಿದ್ದಾನೆ. ಈ ಮೂಲಕ ಪಾಸ್‌ಪೋರ್ಟ್ ಪ್ರಾಧಿಕಾರ ಮತ್ತು ಇಮಿಗ್ರೇಷನ್ ಇಲಾಖೆಗೆ ವಂಚಿಸಿದ್ದಾನೆಂದು ಅಧಿಕಾರಿಯೊಬ್ಬರು ದೂರಿನಲ್ಲಿ ಹೇಳಿದ್ದಾರೆ.
ಪಾಸ್ ಪೋರ್ಟ್ ಪೇಜ್ ಹರಿಯುವುದು ಕ್ರಿಮಿನಲ್ ಅಪರಾಧ. ಪೊಲೀಸರು ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯಡಿ ವಂಚನೆ ಮತ್ತು ಫೋರ್ಜರಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಪತ್ನಿಯ ಕೋಪದಿಂದ ತಪ್ಪಿಸಿಕೊಳ್ಳಲು ವೀಸಾ ಸ್ಟಾಂಪ್ ಪೇಜ್ ಹರಿದು ಹಾಕಿದ್ದಾಗಿ ಎಂಜಿನಿಯರ್ ಪೊಲೀಸರಿಗೆ ತಿಳಿಸಿದ್ದಾನೆ. ಪಾಸ್‌ಪೋರ್ಟ್‌ನ 3-6 ಮತ್ತು 31-34 ಪುಟಗಳು ಆತ ಕತ್ತರಿಸಿದ್ದಾನೆ. ಇದು ಕ್ರಿಮಿನಲ್ ಎಂಬುದು ನನಗೆ ತಿಳಿದಿರಲಿಲ್ಲ. ಪತ್ನಿಯಿಂದ ತಪ್ಪಿಸಿಕೊಳ್ಳುವುದು ಮಾತ್ರ ನನ್ನ ಉದ್ದೇಶವಾಗಿತ್ತು ಎಂದು ಆತ ಅವಲತ್ತುಕೊಂಡಿದ್ದಾನೆ.