ಗುಂಡ್ಯ ಶಿರಾಡಿ ಹೊಳೆಯಲ್ಲಿ ಆನೆ ಮರಿಯ ಮೃತದೇಹ ಪತ್ತೆ

ನೆಲ್ಯಾಡಿ : ರಾ.ಹೆ.75ರ ಮಧ್ಯೆ ಶಿರಾಡಿ ಗಡಿ ದೇವಸ್ಥಾನದ ಹಿಂಭಾಗದ 200 ಮೀಟರ್ ದೂರದ ಹೊಳೆ ಪಕ್ಕದಲ್ಲಿ ಐದು ತಿಂಗಳ ಗಂಡು ಮರಿ ಆನೆ ಶವವು ಜುಲೈ 8ರ ರಾತ್ರಿ ಪತ್ತೆಯಾಗಿದೆ.

 

ಸಕಲೇಶಪುರ ವಲಯ, ಮಾರನಹಳ್ಳಿ ಶಾಖೆ, ಕೆಂಪುಹೊಳೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಶವ ಪತ್ತೆಯಾಗಿದ್ದು, ತಾಯಿ ಆನೆಯೊಂದಿಗೆ ಆಹಾರ ಹುಡುಕುತ್ತಾ ಬರುವಾಗ ಮರಿಯಾನೆ ಮೇಲಿನಿಂದ ಜಾರಿ ಬಿದ್ದಿರಬಹುದು ಅಥವಾ ಹಳ್ಳ ದಾಟುವಾಗ ನೀರಿನೊಂದಿಗೆ ಕೊಚ್ಚಿಕೊಂಡು ಬಿದ್ದಿರಬಹುದೆಂದು ಶಂಕಿಸಲಾಗಿದೆ.

ಘಟನಾ ಸ್ಥಳಕ್ಕೆ ಮಾರನಹಳ್ಳಿ ಉಪವಲಯ ಅರಣ್ಯ ಅಧಿಕಾರಿ ಮಂಜುನಾಥ್, ಉಪ್ಪಿನಂಗಡಿ ಅರಣ್ಯ ವಲಯ ವ್ಯಾಪ್ತಿಯ ಶಿರಾಡಿ ಅರಣ್ಯಾಧಿಕಾರಿ ಧೀರಜ್, ಅರಣ್ಯ ರಕ್ಷಕ ಸುನೀಲ್ ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದಾರೆ.

Leave A Reply

Your email address will not be published.