1242 ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪರೀಕ್ಷೆ ಬರೆದವರಿಗೊಂದು ಮಹತ್ವದ ಮಾಹಿತಿ!

ಕರ್ನಾಟಕ ರಾಜ್ಯ ಪ್ರಥಮ ದರ್ಜೆ ಕಾಲೇಜುಗಳ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಅಭ್ಯರ್ಥಿಗಳು ಗಳಿಸಿದ ಸ್ಕೋರ್ ಲಿಸ್ಟ್ ಬಿಡುಗಡೆ ಮಾಡಲಾಗಿದೆ. ವಿಷಯವಾರು ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳ ಸ್ಕೋರ್ ಅನ್ನು ಚೆಕ್ ಮಾಡಬಹುದಾಗಿದೆ.

 

ಅಭ್ಯರ್ಥಿಗಳು ತಮ್ಮ ಸ್ಕೋರ್ ಚೆಕ್ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ https://cetonline.karnataka.gov.in/kea/gfgc 2021 ಗೆ ಭೇಟಿ ನೀಡಬೇಕಾಗಿದೆ. ನಂತರ ಅಭ್ಯರ್ಥಿಗಳು ತಾವು ಯಾವ ವಿಷಯದ ಹುದ್ದೆಗೆ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದಾರೋ ಆ ವಿಷಯದ ಮೇಲೆ ಕ್ಲಿಕ್ ಮಾಡಿದರೆ ಪಿಡಿಎಫ್ ಫೈಲ್ ಒಂದು ಓಪನ್ ಆಗುತ್ತದೆ. ಇಲ್ಲಿ ತಮ್ಮ ಅಂಕಗಳನ್ನು ಚೆಕ್ ಮಾಡಬಹುದು. ಅಭ್ಯರ್ಥಿಗಳ ಹೆಸರು, ರಿಜಿಸ್ಟರ್ ನಂಬರ್, ಅಪ್ಲಿಕೇಶನ್ ನಂಬರ್, ಪರೀಕ್ಷೆ ಬರೆದ ವಿಷಯದಲ್ಲಿ ತೆಗೆದ ಅಂಕಗಳು, ಉತ್ತರ ಪತ್ರಿಕೆ ವರ್ಷನ್ ಎಲ್ಲ ಮಾಹಿತಿಗಳನ್ನು ನೀಡಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 1242 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕ (ವಿವಿಧ ವಿಷಯಗಳು) ಹುದ್ದೆಗಳಿಗೆ 2022ರ ಮಾರ್ಚ್ 14, 15, 16 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಅಂಕಗಳನ್ನು ಚೆಕ್ ಮಾಡಿಕೊಳ್ಳಬಹುದು.

ಕೆಇಎ’ಯು ಇತ್ತೀಚೆಗೆ ಈ ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ನು ಬಿಡುಗಡೆ ಮಾಡಿತ್ತು. ಇದೀಗ ಅಭ್ಯರ್ಥಿಗಳ ಅಂಕಗಳನ್ನು ಬಿಡುಗಡೆ ಮಾಡಿದೆ. ಶೀಘ್ರದಲ್ಲೇ ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ನಂತರದಲ್ಲಿ ಈ ಪಟ್ಟಿಗೆ ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ನಂತರ ಸ್ವೀಕರಿಸಲಾದ ಆಕ್ಷೇಪಣೆಗಳನ್ನು ಪರಿಶೀಲಿಸಿ, ಅನಂತರ ಅಂತಿಮ ಆಯ್ಕೆಪಟ್ಟಿಯನ್ನು ವಿಷಯವಾರು ಬಿಡುಗಡೆ ಮಾಡುತ್ತದೆ.

ಕರ್ನಾಟಕ ರಾಜ್ಯ ಪ್ರಥಮ ದರ್ಜೆ ಕಾಲೇಜುಗಳ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಅರ್ಜಿ ಸಲ್ಲಿಸಿ, ಪರೀಕ್ಷೆ ಬರೆದ ಅಭ್ಯರ್ಥಿಗಳು ಆಗಾಗ ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿಯ ವೆಬ್‌ಸೈಟ್ kea.kar.nic.in ಗೆ ಭೇಟಿ ನೀಡುತ್ತಿರಿ. ಪ್ರಾಧಿಕಾರವು ಯಾವಾಗ ಬೇಕಾದರೂ ಪ್ರಾವಿಷನಲ್ ಸೆಲೆಕ್ಟ್ ಲಿಸ್ಟ್ ಅನ್ನು ಬಿಡುಗಡೆ ಮಾಡಬಹುದು.

ಸದರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಲೇಟೆಸ್ಟ್ ಅಪ್‌ಡೇಟ್ಸ್‌ಗಳನ್ನು ಚೆಕ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.