ಆದಾಯ ತೆರಿಗೆ ರಿಟರ್ನ್ಸ್ ಜುಲೈ ನಲ್ಲೇ ಇದೆ ಕೊನೆಯ ದಿನಾಂಕ | ಫೈಲಿಂಗ್ ಮಾಡಲು ಕಷ್ಟ ಪಡುತ್ತಿದ್ದಲ್ಲಿ ಇವರನ್ನು ಸಂಪರ್ಕಿಸಿ
2021-22 ರ ಹಣಕಾಸು ವರ್ಷ ಮತ್ತು 2022–23 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್(IT Returns) ಸಲ್ಲಿಸಲು ಅಂತಿಮ ದಿನಾಂಕ ಸಮೀಪಿಸುತ್ತಿದೆ. ಸ್ಯಾಲರೀಡ್ ವ್ಯಕ್ತಿಗಳು ತಮ್ಮ ರಿಟರ್ನ್ಸ್ಗಳನ್ನು ಸಲ್ಲಿಸಬೇಕಾಗಿದೆ. ಆದಾಯ ತೆರಿಗೆ ಇಲಾಖೆಯು ತನ್ನ ಟ್ವಿಟರ್ನಲ್ಲಿ ತೆರಿಗೆದಾರರರು ಕೊನೆಯ ನಿಮಿಷದ ತೊಂದರೆಗಳಿಂದ ತಪ್ಪಿಸಿಕೊಳ್ಳಲು ರಿಟರ್ನ್ಸ್ ಸಲ್ಲಿಸುವಂತೆ ಮನವಿ ಮಾಡಿದ್ದಾರೆ.
“ನೀವು ಎಷ್ಟು ಬೇಗ IT ರಿಟರ್ನ್ಸ್ ಸಲ್ಲಿಸುತ್ತೀರೋ ಅಷ್ಟು ಹೆಚ್ಚು ನೀವು ರೆಲ್ಯಾಕ್ಸ್ ಆಗಬಹುದು! IT ರಿಟರ್ನ್ಸ್ AY 2022-23 ಯು e-filing ಪೋರ್ಟಲ್ಲ್ನಲ್ಲಿ ಲಭ್ಯವಿದೆ. ರಿಟರ್ನ್ಸ್ ಫೈಲ್ ಮಾಡಲು ನೀವೇ ಮೊದಲಿಗರಾಗಿರಿ ಮತ್ತು ಕೊನೆಯ ನಿಮಿಷದ ಧಾವಂತವನ್ನು ತಪ್ಪಿಸಲು ಈಗಲೇ ರಿಟರ್ನ್ಸ್ ಸಲ್ಲಿಸಿ. #FileNow. ದಯವಿಟ್ಟು www.incometax.gov.in ಭೇಟಿ ಕೊಡಿ . #ITR” ಎಂದು ಇನ್ಕಮ್ ಟ್ಯಾಕ್ಸ್ ಇಂಡಿಯಾ ಟ್ವೀಟ್ ಮಾಡಿದೆ.
ಈಗಾಗಲೇ ಸಂಬಳ ಪಡೆಯುವ ಜನರಿಗೆ ನಿಮ್ಮ ಕಚೇರಿಯಿಂದ ಫಾರ್ಮ್ 16 ಸಿಕ್ಕಿರಬಹುದು. ಇಲ್ಲದೇ ಹೋದರೆ ಅದನ್ನು ಕೇಳಿ ಪಡೆಯಿರಿ. ಅದನ್ನು ತಡಮಾಡದೆಯೇ ಭರ್ತಿ ಮಾಡಿ. ಅಂತಿಮ ದಿನಾಂಕದ ಮೊದಲು ಅದನ್ನು ನೀವು ಭರ್ತಿ ಮಾಡದೆ ಹೋದರೆ, ನಿಮಗೆ ದಂಡ ಬೀಳಲಿದೆ.
ಇದಲ್ಲದೆ ಇನ್ಕಂ ಟ್ಯಾಕ್ಸ್ ಇ-ಫೈಲಿಂಗ್ ವೆಬ್ ಸೈಟ್ ಮೇಲೆ ತೆರಿಗೆ ಪಾವತಿದಾರರು ರಿಟರ್ನ್ ಫೈಲ್ ಮಾಡಲು ಒಮ್ಮೆಲೇ ಮುಗಿಬಿದ್ದರೆ, ಸೈಟ್ ಮೇಲೆ ಲೋಡ್ ಹೆಚ್ಚಾಗುತ್ತದೆ. ಸರ್ವರ್ ಹಾಂಗ್ ಆಗಬಹುದು. ಈ ಹಿನ್ನೆಲೆ ಒಂದು ವೇಳೆ ನೀವೂ ಕೂಡ ಇನ್ಕಂ ಟ್ಯಾಕ್ಸ್ ಫೈಲಿಂಗ್ ನಿಂದಾಗುವ ಅಡಚಣೆಗಳಿಂದ ಪಾರಾಗಲು ಬಯಸುತ್ತಿದ್ದರೆ, ಕೊನೆಯ ದಿನಾಂಕದವರೆಗೆ ಕಾಯಬೇಡಿ.
ಜುಲೈ 31ರ ಮೊದಲು ರಿಟರ್ನ್ ಫೈಲ್ ಮಾಡಿ
ಹಣಕಾಸು ವರ್ಷ 2021-22 ಮತ್ತು ಮೌಲ್ಯಮಾಪನ ವರ್ಷ 2022-23 ಕ್ಕೆ ಯಾವುದೇ ವಿಳಂಬ ಶುಲ್ಕವಿಲ್ಲದೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31, 2022 ಆಗಿದೆ.
ಗಡುವಿನ ನಂತರ ನೀವು ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಿದರೆ, ನೀವು ಸೆಕ್ಷನ್ 234A ಅಡಿಯಲ್ಲಿ ಮತ್ತು ಆದಾಯ ತೆರಿಗೆಯ ಸೆಕ್ಷನ್ 234F ಅಡಿಯಲ್ಲಿ ದಂಡದ ಜೊತೆಗೆ ತೆರಿಗೆಯ ಮೇಲಿನ ಬಡ್ಡಿಯನ್ನು ಪಾವತಿಸಬೇಕಾಗಲಿದೆ.
ವೈಯಕ್ತಿಕ HUF ಗಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಕೊನೆಯ ದಿನಾಂಕ ಜುಲೈ 31, 2022 ಆಗಿದೆ.
ಇನ್ನೊಂದೆಡೆ ಮೌಲ್ಯಮಾಪನದ ಅವಶ್ಯಕತೆ ಇರುವವರಿಗೆ ಕೊನೆಯ ದಿನಾಂಕ ಅಕ್ಟೋಬರ್ 31, 2022 ಆಗಿದೆ.
ಟಿಪಿ ರಿಪೋರ್ಟ್ ಅವಶ್ಯಕತೆ ಇರುವ ಬಿಸ್ನೆಸ್ ಗಳಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಕೊನೆಯ ದಿನಾಂಕ ನವೆಂಬರ್ 30, 2022 ಆಗಿದೆ.
ಗಮನಿಸಿ : ಹೀಗಿರುವಾಗ ಒಂದು ವೇಳೆ ನೀವೂ ಕೂಡ ವೈಯಕ್ತಿಕ ರಿಟರ್ನ್ ದಾಖಲಿಸುತ್ತಿದ್ದರೆ, ತಡಮಾಡದೆ ಮೊದಲು ಆ ಕೆಲಸವನ್ನು ಪೂರ್ಣಗೊಳಿಸಿ. ಇಂಕಂ ಟ್ಯಾಕ್ಸ್ ಫೈಲಿಂಗ್ ಅನ್ನು ಸ್ವತಃ ನೀವೇ ಮಾಡಬಹುದು. ಆನ್ ಲೈನ್ ಅಲ್ಲಿ ನಿಮಗೆ ಫಾರ್ಮ್. ಭರ್ತಿ ಮಾಡಲು ಕಷ್ಟ ಆದ್ರೆ, ಆದ್ರಾ ಬಗ್ಗೆ ಗೊತ್ತಿರುವ, ಈಗಾಗಲೇ ಫೈಲ್ ಮಾಡುತ್ತಿರುವವರನ್ನು ಸಂಪರ್ಕಿಸಿ. ಹಾಗೂ ನಿಮಗೆ ಸಹಾಯದ ಅಗತ್ಯ ಇದ್ದರೆ, ಈ ವೃತ್ತಿಪರರನ್ನು ಸಂಪರ್ಕಿಸಿ. ಒಂದು ಅತ್ಯಂತ ಸಣ್ಣ ಮೊತ್ತದ ಕಂಸಲ್ಟೇಶನ್ ಫೀ ನ ಮೇಲೆ ನಿಮ್ಮ ಕೆಲಸ ಸುಲಭದಲ್ಲಿ ಮಾಡಿ ಕೊಡುತ್ತಾರೆ. Ashok Sangram Nandyalkar : Tax consultant – 8660974457 9886051553.