ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಗ್ರಾಹಕರಿಗೆ ಶಾಕಿಂಗ್ ನ್ಯೂಸ್!!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆಯನ್ನು ಹೊಂದಿರುವವರಿಗೆ ಶಾಕಿಂಗ್ ಸುದ್ದಿಯೊಂದಿದ್ದು, ಈ ಬ್ಯಾಂಕ್ ಅನೇಕ ಖಾತೆಗಳನ್ನು ಮುಚ್ಚಿದೆ. ಹೀಗಾಗಿ, ನೀವು ಈ ಕೆಲಸ ಮಾಡದಿದ್ದರೆ ನಿಮ್ಮ ಖಾತೆಯೂ ಕ್ಲೋಸ್ ಆಗಲಿದೆ.
ಬ್ಯಾಂಕ್ ಖಾತೆ ಮುಚ್ಚಿದರೆ, ಗ್ರಾಹಕರು ಯಾವುದೇ ರೀತಿಯ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ. ಬ್ಯಾಂಕ್ನ ಈ ಕ್ರಮಕ್ಕೆ ಕಾರಣವೇ KYC. ಹೌದು. ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದ ಗ್ರಾಹಕರ ಖಾತೆಗಳನ್ನು ಬ್ಯಾಂಕ್ ಕ್ಲೋಸ್ ಮಾಡಿದೆ.
ಈ ಕುರಿತು ಗ್ರಾಹಕರು ಬ್ಯಾಂಕ್ʼಗೆ ದೂರು ನೀಡುತ್ತಿದ್ದು, ಬ್ಯಾಂಕ್ ನವರು ಪೂರ್ವ ಮಾಹಿತಿ ನೀಡದೇ ಬ್ಯಾಂಕ್ ಖಾತೆಯನ್ನು ಮುಚ್ಚಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ನಿಯಮವನ್ನು ಜಾರಿಗೆ ತರಲು ಆಯ್ಕೆ ಮಾಡಿದ ಸಮಯ ಗ್ರಾಹಕರಿಗೆ ಸರಿಹೊಂದುವುದಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನು ಹೆಚ್ಚಿನ ಜನರಿಗೆ ಇದು ಸಂಬಳದ ಸಮಯವಾಗಿದ್ದು, ಅಂತಹ ಪರಿಸ್ಥಿತಿಯಲ್ಲಿ ಜನರು ಖಾತೆಯನ್ನು ಮುಚ್ಚುವುದರಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್ನಿಂದ ಮುಂಚಿತವಾಗಿ ಮಾಹಿತಿ ನೀಡದ ಕಾರಣ ಹೆಚ್ಚಿನ ಗ್ರಾಹಕರು ಇದೇ ಸಮಸ್ಯೆ ಎದುರಿಸುತ್ತಿದ್ದಾರೆ.
ಆದ್ರೆ, ಈ ಬಗ್ಗೆ ಈಗಾಗಲೇ ಗ್ರಾಹಕರಿಗೆ ಮಾಹಿತಿ ನೀಡಲಾಗಿದೆ ಎಂದು ಬ್ಯಾಂಕ್ ನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಹಿಂದೆ ಗ್ರಾಹಕರಿಗೆ ಪತ್ರಗಳನ್ನೂ ಕಳುಹಿಸಲಾಗಿತ್ತು. KYC ಮಾಡುವಂತೆ ಬ್ಯಾಂಕ್ನಿಂದ ಪದೇ ಪದೇ ಮನವಿ ಮಾಡಲಾಗುತ್ತಿದೆ. ಅದಾಗ್ಯೂ, ಕೆಲವು ಮಾಧ್ಯಮ ವರದಿಗಳ ಪ್ರಕಾರ, SBIನ ಲಾಗಿನ್ ಪೋರ್ಟಲ್ KYC ನವೀಕರಣಗಳಲ್ಲಿ ಗ್ರಾಹಕರಿಗೆ ಯಾವುದೇ ಸಾಮಾನ್ಯ ಮಾಹಿತಿ ಅಥವಾ ಎಚ್ಚರಿಕೆಗಳನ್ನು ತೋರಿಸುತ್ತಿಲ್ಲ. ಗ್ರಾಹಕರು ಎಟಿಎಂ ಅಥವಾ ಆನ್ಲೈನ್ ವಹಿವಾಟು ನಡೆಸಲು ಪ್ರಯತ್ನಿಸಿದಾಗ ಮಾತ್ರ ಈ ಮಾಹಿತಿ ಬರುತ್ತದೆ ಎಂದು ಹೇಳಿದೆ.