ಪ್ರಧಾನಮಂತ್ರಿ ಆರ್ಥಿಕ ಸಲಹಾ ಸಮಿತಿಯಿಂದ ಉದ್ಯೋಗಿಗಳಿಗೆ ಗುಡ್ ನ್ಯೂಸ್!
ನವದೆಹಲಿ : ಸರ್ಕಾರಿ ಉದ್ಯೋಗಿಗಳಿಗೆ ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯು ಗುಡ್ ನ್ಯೂಸ್ ನೀಡಿದ್ದು, ದೇಶದಲ್ಲಿ ಕೆಲಸ ಮಾಡುವವರಿಗೆ ವಯಸ್ಸಿನ ಮಿತಿಯನ್ನ ಹೆಚ್ಚಿಸಬೇಕು ಎಂದಿದೆ. ಇದರೊಂದಿಗೆ ದೇಶದಲ್ಲಿ ನಿವೃತ್ತಿ ವಯಸ್ಸನ್ನು ಹೆಚ್ಚಿಸುವುದರ ಜೊತೆಗೆ ಸಾರ್ವತ್ರಿಕ ಪಿಂಚಣಿ ವ್ಯವಸ್ಥೆಯನ್ನೂ ಆರಂಭಿಸಬೇಕು ಎಂದು ಪ್ರಧಾನಿಯವರ ಆರ್ಥಿಕ ಸಲಹಾ ಸಮಿತಿ ಹೇಳಿದೆ.
ವರದಿಯ ಪ್ರಕಾರ, ಈ ಸಲಹೆಯ ಅಡಿಯಲ್ಲಿ ಪ್ರತಿ ತಿಂಗಳು ನೌಕರರಿಗೆ ಕನಿಷ್ಠ 2,000 ರೂ.ಗಳ ಪಿಂಚಣಿ ನೀಡಬೇಕು. ಇನ್ನು ಆರ್ಥಿಕ ಸಲಹಾ ಸಮಿತಿಯು ದೇಶದ ಹಿರಿಯ ನಾಗರಿಕರ ಸುರಕ್ಷತೆಗಾಗಿ ಉತ್ತಮ ವ್ಯವಸ್ಥೆಗಳನ್ನ ಶಿಫಾರಸು ಮಾಡಿದೆ.
ಈ ವರದಿಯ ಪ್ರಕಾರ ದುಡಿಯುವ ವಯಸ್ಸಿನ ಜನಸಂಖ್ಯೆ ಹೆಚ್ಚಾಗಬೇಕಾದರೆ, ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಅನಿವಾರ್ಯತೆ ಇದೆ. ಸಾಮಾಜಿಕ ಭದ್ರತಾ ವ್ಯವಸ್ಥೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಇದನ್ನು ಮಾಡಬಹುದು. ವರದಿಯು 50 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳ ಕೌಶಲ್ಯ ಅಭಿವೃದ್ಧಿಯ ಬಗ್ಗೆಯೂ ಮಾತನಾಡಿದೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಇಂತಹ ನೀತಿಗಳನ್ನು ರೂಪಿಸಿ ಕೌಶಲ್ಯಾಭಿವೃದ್ಧಿ ಮಾಡುವಂತೆ ವರದಿಯಲ್ಲಿ ತಿಳಿಸಲಾಗಿದೆ. ಈ ಪ್ರಯತ್ನವು ಅಸಂಘಟಿತ ವಲಯದಲ್ಲಿ ವಾಸಿಸುವ, ದೂರದ ಪ್ರದೇಶಗಳಲ್ಲಿ, ನಿರಾಶ್ರಿತರು, ತರಬೇತಿ ಪಡೆಯಲು ದಾರಿಯಿಲ್ಲದ ವಲಸಿಗರನ್ನು ಒಳಗೊಂಡಿರಬೇಕು, ಆದರೆ ಅವರಿಗೆ ತರಬೇತಿ ನೀಡಬೇಕು ಎಂದಿದೆ.