ಗೋವಾ ಅಬ್ದುಲ್ಲಾ ಬೆಳ್ಳಾರೆ ನಿಧನ

Share the Article

ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಜಮಾಅತಿಗೆ ಒಳಪಟ್ಟ ,ಬೆಳ್ಳಾರೆ ಕೆ ಪಿ ಎಸ್ ಶಾಲಾ ಬಳಿ ನಿವಾಸಿ ಉದ್ಯಮಿ ಗೋವಾ ಅಬ್ದುಲ್ಲಾ ,ಗೋವಾ ಅದ್ಲಚ್ಚರೆಂದೆ ಎಲ್ಲರಿಗೂ ಚಿರಪರಿಚಿತರಾದ ಇವರು ಅಲ್ಪಕಾಲದ ಅಸೌಖ್ಯದಿಂದ ಜುಲೈ 8 ಶುಕ್ರವಾರ ದಿನವಾದ ಇಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 64 ವರ್ಷ ಪ್ರಾಯವಾಗಿತ್ತು.ಗೋವಾದಲ್ಲಿ ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದ ಇವರು ಅಸೌಖ್ಯಕ್ಕೆ ಒಳಗಾದ ಬಳಿಕ ,ಉದ್ಯಮವನ್ನು ತನ್ನ ಗಂಡು ಮಕ್ಕಳಲ್ಲಿ ಓರ್ವನಾದ ಸಾಬಿಕ್ ಆ ಬಳಿಕ ಮುನ್ನೆಡೆಸುತ್ತಿದ್ದಾರೆ . ಮೃತರು ಪತ್ನಿ , ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು ,ಅಪಾರ ಬಂಧು ಮಿತ್ರರರನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯ ಜುಮಾ ನಮಾಝಿನ ಮೊದಲು ನಡೆಯಲಿದೆ ಎಂದು ತಿಳಿದು ಬಂದಿದೆ.

Leave A Reply