ನಾಗಚೈತನ್ಯ ಗೆ ಮತ್ತೆ ಸಮಂತಾ ಮೇಲೆ ಲವ್?!!ಸುಳಿವು ಬಿಟ್ಟುಕೊಟ್ಟ ಈ ಫೋಟೋ!!!
ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಡಿವೋರ್ಸ್ ಅನೌನ್ಸ್ ಮಾಡಿದ ದಿನದಿಂದಲೂ ಭಾರೀ ಸುದ್ದಿಯಲ್ಲಿದ್ದಾರೆ. ಆದರೆ ಇಬ್ಬರ ಅಭಿಮಾನಿಗಳಂತು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಅಖಾಡಕ್ಕಿಳಿದು ಒಬ್ಬರಿಗೊಬ್ಬರು ಟಾಂಟ್ ಮಾಡಿದ್ದರು. ಆದರೆ ಇಷ್ಟು ದಿನಗಳ ಬಳಿಕ ಇಬ್ಬರ ಫ್ಯಾನ್ಸ್‌ನಲ್ಲೂ ಹೊಸದೊಂದು ಆಶಾಕಿರಣ ಮೂಡಿದೆ.
ನಾಗಚೈತನ್ಯ ಸದ್ಯ ಈಗ ತಮ್ಮದೇ ‘ಥ್ಯಾಂಕ್ ಯೂ’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಬೇರೆ ಬೇರೆ ನಗರಗಳಲ್ಲಿ ವೇದಿಕೆಗಳಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಸಿನಿಮಾವನ್ನು ಪ್ರಮೋಟ್ ಮಾಡುತ್ತಿದ್ದಾರೆ. ಈ ಮಧ್ಯೆ ಅವರೇ ಹಂಚಿಕೊಂಡ ಒಂದು ಫೋಟೊ ಸಮಂತಾ ಮೇಲೇ ಇನ್ನೂ ಪ್ರೀತಿ ಉಳಿದಿದೆ ಎಂಬ ಸುಳಿವು ನೀಡಿದೆ. ಇದು ನೆಟ್ಟಿಗರೇ ಮಾಡುತ್ತಿರುವ ಕಮೆಂಟ್.
ನಾಗಚೈತನ್ಯ ಸಾಮಾಜಿಕ ಜಾಲತಣದಲ್ಲಿ ಮೂರು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೊಗಳಲ್ಲಿ ಒಂದು ಫೋಟೊ ಸಮಂತಾ ಮೇಲೆ ಇನ್ನೂ ಒಲವು ಉಳಿದಿದೆ ಎಂದು ಹೇಳುತ್ತದೆ. ಅಷ್ಟಕ್ಕೂ ನಾಗಚೈತನ್ಯ ಹಂಚಿಕೊಂಡ ಆ ಫೋಟೋ ಯಾವುದು? ತಿಳಿಯಲು ಮುಂದೆ ಓದಿ.
ನಾಗಚೈತನ್ಯ ತಮ್ಮ ಹೊಸ ಸಿನಿಮಾದ ಹೆಸರು ‘ಥ್ಯಾಂಕ್ ಯೂ’. ಇದೀಗ ರಿಲೀಸ್ ಗೆ ರೆಡಿಯಾಗಿದೆ. ಹೀಗಾಗಿ ತಮ್ಮ ಜೀವನದಲ್ಲಿ ‘ಥ್ಯಾಂಕ್ ಯೂ’ ಎಂದು ಹೇಳಲು ಬಯಸುವ ಮೂವರ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಈ ಮೂರು ಫೋಟೊಗಳಲ್ಲಿ ಒಂದು ಪರೋಕ್ಷವಾಗಿ ಸಮಂತಾ ಕಡೆ ಬೊಟ್ಟು ಮಾಡುತ್ತಿದೆ. ಆ ಫೋಟೋ ನೋಡಿ ನಾಗಚೈತನ್ಯ ಇನ್ನೂ ಸಮಂತಾರನ್ನು ಮರೆತಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಈ ಫೋಟೋದಲ್ಲಿ ನಾಗಚೈತನ್ಯ ಅವರು ಇಬ್ಬರೂ ತಮ್ಮ ಪ್ರೀತಿಯ ಪ್ರತೀಕವಾಗಿ ಇಟ್ಟುಕೊಂಡಿದ್ದ ಹ್ಯಾಶ್ ಫೋಟೊವನ್ನು ಶೇರ್ ಮಾಡಿದ್ದಾರೆ. ಹ್ಯಾಶ್, ಇದು ನಾಗಚೈತನ್ಯ ಹಾಗೂ ಸಮಂತಾ ಪ್ರೀತಿಯ ಸಂಕೇತಕ್ಕೆಂದು ಇದ್ದ ಅವರ ಪ್ರೀತಿಯ ಶ್ವಾನ. ಇದೇ ಫೋಟೊವನ್ನು ನಾಗಚೈತನ್ಯ ಹಂಚಿಕೊಂಡಿದ್ದು, ಪರೋಕ್ಷವಾಗಿ ನಾಗಚೈತನ್ಯಗೆ ಧನ್ಯವಾದಗಳನ್ನು ಹೇಳಿದ್ದಾರೆ. ” ಹ್ಯಾಶ್ ಹೇಗೆ ಪ್ರೀತಿ ಮಾಡಬೇಕು ಅನ್ನುವ ಭಾವ ಮೂಡಿಸಿದ್ದು, ಮನುಷ್ಯನಾಗಿಯೇ ಇರುವಂತೆ ಮಾಡಿದೆ.” ಎಂದು ಬರೆದುಕೊಂಡಿದ್ದಾರೆ.
ಈ ಫೋಟೊ ನೋಡಿ,ಮತ್ತೆ ಇಬ್ಬರೂ ಒಂದಾಗಿ ಎಂದು ಒಬ್ಬರ ಕಮೆಂಟ್ ಮಾಡಿದ್ದರೆ, ಇನ್ನೊಬ್ಬರು ” ಸಮಂತಾ ಬದಲು ಹ್ಯಾಶ್ ಮುಂದಿಟ್ಟುಕೊಂಡು ಪರೋಕ್ಷವಾಗಿ ಅವರ ಪ್ರೀತಿಗೆ ಥ್ಯಾಂಕ್ ಯೂ ಹೇಳಿದ್ದೀರಿ ತಾನೇ?’ ಎಂದು ಮತ್ತೊಬ್ಬರು ಹೇಳಿದ್ದಾರೆ.
ನಾಗಚೈತನ್ಯ ಅವರು ಮೊದಲಿಗೆ ಅಮ್ಮನಿಗೆ ‘ಥ್ಯಾಂಕ್ ಯೂ’ ಹೇಳಿದ್ದಾರೆ. ” ಅಮ್ಮಾ ನನ್ನ ಮೂಲ ಆಗಿದ್ದಕ್ಕಾಗಿ, ಕಾಲ ಕಾಲಕ್ಕೆ ತಕ್ಕಂತೆ ಬೇರೂರುವಂತೆ ಮಾಡಿದ್ದಕ್ಕಾಗಿ ಮತ್ತು ಸಾಧ್ಯವಿರುವ ಎಲ್ಲಾ ಕಡೆ ಜೊತೆಯಾಗಿದ್ದಕ್ಕಾಗಿ ಥ್ಯಾಂಕ್ ಯೂ” ಎಂದಿದ್ದಾರೆ. ಎರಡನೆಯದಾಗಿ ಅಪ್ಪ ” ನನಗೆ ದಾರಿ ತೋರಿಸಿದ್ದಕ್ಕಾಗಿ ಹಾಗೂ ಬೇರೆ ಎಲ್ಲಾ ಸ್ನೇಹಿತರಿಗಿಂತ ಉತ್ತಮ ಸ್ನೇಹಿತರಾಗಿದ್ದಕ್ಕೆ ಥ್ಯಾಂಕ್ ಯೂ” ಎಂದು ಬರೆದಿದ್ದಾರೆ.