Breaking | ರಾಜ್ಯಸಭೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ .ವೀರೇಂದ್ರ ಹೆಗಡೆ ನಾಮನಿರ್ದೇಶನ : ಪ್ರಧಾನಿ ಮೋದಿ ಘೋಷಣೆ
ಮಾನ್ಯ ವೀರೇಂದ್ರ ಹೆಗ್ಗಡೆಯವರಿಗೆ ಕೇಂದ್ರದ ರಾಜ್ಯಸಭಾ ಸದಸ್ಯರಾಗುವ ಭಾಗ್ಯ ದೊರೆತಿದೆ.
ಈ ಬಗ್ಗೆ ಖುದ್ದು ಟ್ವೀಟ್ ಮಾಡಿದ ಮೋದಿಯವರು, ಮಾನ್ಯ ವೀರೇಂದ್ರ ಹೆಗ್ಗಡೆಯವರು ಮುಂದೆ ನಿಂತು ಸಮಾಜಕ್ಕೆ ಮಾಡುತ್ತಿರುವ ಕೆಲಸವನ್ನು ಶ್ಲಾಘಿಸಿದ್ದಾರೆ. ಮಾನ್ಯ ವೀರೇಂದ್ರ ಹೆಗ್ಗಡೆ ಅವರು ಪಾರ್ಲಿಮೆಂಟಿನ ಘನತೆಯನ್ನು ಹೆಚ್ಚಿಸುತ್ತಾರೆ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಆಮೂಲಕ ರಾಜ್ಯಸಭೆಗೆ ವೀರೇಂದ್ರ ಹೆಗ್ಗಡೆಯವರ ನಾಮಿನೇಷನ್ ಆಗಿದೆ.
ಸಂಗೀತ ನಿರ್ದೇಶಕ ಇಳೆಯರಾಜ, ಓಟದ ರಾಣಿ ಪಿಟಿ ಉಷಾ ಮತ್ತು ವಿಜಯೇಂದ್ರ ಪ್ರಸಾದ್ ಅವರು ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಇತರರು.
ಅಪ್ರತಿಮ ಸಂಗೀತ ಸಂಯೋಜಕ ಇಳಯರಾಜ, ಖ್ಯಾತ ಅಥ್ಲೀಟ್ ಪಿ ಟಿ ಉಷಾ, ಲೋಕೋಪಕಾರಿ ವೀರೇಂದ್ರ ಹೆಗ್ಗಡೆ ಮತ್ತು ಚಿತ್ರಕಥೆಗಾರ-ನಿರ್ದೇಶಕ ವಿ ವಿಜಯೇಂದ್ರ ಪ್ರಸಾದ್ ಅವರನ್ನು ಬುಧವಾರ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿದೆ. ಈ ನಾಲ್ಕು ನಾಮನಿರ್ದೇಶಿತ ಪ್ರತಿನಿಧಿಗಳು ದಕ್ಷಿಣದ ನಾಲ್ಕು ದಕ್ಷಿಣ ಭಾರತದ ರಾಜ್ಯಗಳನ್ನು ಪ್ರತಿನಿಧಿಸುತ್ತಿದ್ದಾರೆ. ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂಧ್ರದ ನಾಲ್ವರಿಗೆ ಈ ಭಾಗ್ಯ ದೊರೆತಿದೆ. ನಾಮ ನಿರ್ದೇಶನಗೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲರಿಗೂ ಅಭಿನಂದನಾ ಸಂದೇಶಗಳನ್ನು ಟ್ವೀಟ್ ಮಾಡಿದ್ದಾರೆ.
ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಇಳಯರಾಜ ಅವರನ್ನು ಶ್ಲಾಘಿಸಿದ ಮೋದಿ ಅವರು ಹೀಗೆ ಹೇಳಿದರು: “@ ilaiyaraaja Ji ಅವರ ಸೃಜನಶೀಲ ಪ್ರತಿಭೆ ತಲೆಮಾರುಗಳಾದ್ಯಂತ ಜನರನ್ನು ಆಕರ್ಷಿಸಿದೆ. ಅವರ ಕೃತಿಗಳು ಅನೇಕ ಭಾವನೆಗಳನ್ನು ಸುಂದರವಾಗಿ ಪ್ರತಿಬಿಂಬಿಸುತ್ತವೆ. ಅವರ ಜೀವನ ಪಯಣ ಅಷ್ಟೇ ಸ್ಪೂರ್ತಿದಾಯಕವಾಗಿದೆ- ಅವರು ವಿನಮ್ರ ಹಿನ್ನೆಲೆಯಿಂದ ಬೆಳೆದು ತುಂಬಾ ಸಾಧಿಸಿದ್ದಾರೆ. ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ಸಂತಸ ತಂದಿದೆ ಎಂದಿದ್ದಾರೆ.
ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತೆ ಪಿಟಿ ಉಷಾ ಅವರು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ ಎಂದು ಪ್ರಧಾನಿ ಪ್ರಶಂಸಿಸಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ ಪ್ರಧಾನಿ ಮೋದಿ ಧರ್ಮಾಧಿಕಾರಿಯನ್ನು ಅಭಿನಂದಿಸಿದ್ದಾರೆ. ಧರ್ಮಸ್ಥಳ ದೇವಳದ ವೀರೇಂದ್ರ ಹೆಗ್ಗಡೆ ಅವರು ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡ ಮೇಲೆ ಸಂಸದೀಯ ಕಲಾಪವನ್ನು ಉತ್ಕೃಷ್ಟಗೊಳಿಸುವುದಾಗಿ ಹೇಳಿದ್ದಾರೆ.