ಪುನೀತ್ ಕನಸಿನ “ಗಂಧದಗುಡಿ ” ಸಾಕ್ಷ್ಯಚಿತ್ರದ ಪ್ರಾಜೆಕ್ಟ್ ರಿಲೀಸ್ ಡೇಟ್ ಬಗ್ಗೆ ಹೊಸ ಅಪ್ಡೇಟ್!!

ಪುನೀತ್ ರಾಜ್ ಕುಮಾರ್ ಅವರು ಕರ್ನಾಟಕದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದು, ಕರುನಾಡಿನ ಪ್ರಕೃತಿ ಸೌಂದರ್ಯ, ಮತ್ತು ವನ್ಯ ಜೀವಿಗಳ ಕುರಿತು ಸಾಕ್ಷ್ಯ ಚಿತ್ರದ ನಿರ್ಮಾಣದಲ್ಲಿ ಅಪಾರ ಆಸಕ್ತಿ ತೋರಿದ್ದರು. ಆದರೆ, ಪುನೀತ್ ಕನಸಿನ ‘ಗಂಧದಗುಡಿ’ ಹೆಸರಿನ ಡಾಕ್ಯುಮೆಂಟರಿ ನಿರ್ಮಾಣ ಮಾಡಿ ಅದನ್ನು ಅಭಿಮಾನಿಗಳ ಮುಂದೆ ಇಡುವ ಮೊದಲೇ ಅವರು ಇಹಲೋಕ ಸೇರಿದ್ದು ಬಹಳ ನೋವಿನ ವಿಷಯ.


Ad Widget

Ad Widget

ಸದ್ಯ ಈ ಡಾಕ್ಯುಮೆಂಟ್ಸ್ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆ. ಮೂಲಗಳ ಪ್ರಕಾರ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ರಿಲೀಸ್ ಆಗುತ್ತದೆಯೆಂದು ತಿಳಿದಿದೆ. ಇದರ ನಡುವೆ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದು, ಗಂಧದ ಗುಡಿ ಟಿಯೇಟರ್ ನಲ್ಲಿಯೇ ರಿಲೀಸ್ ಆಗಲಿದೆ ಎಂಬಾ ಘೋಷಣೆ ಪಿಆರ್ ಕೆ ಕಡೆದಿಂದ ಆಗಿದೆ. ಈಗ ಗಂಧದ ಗುಡಿ ರಿಲೀಸ್ ಬಗ್ಗೆ ಹೊಸ ಅಪ್ಡೇಟ್ ಕೇಳಿದ ಅಭಿಮಾನಿಗಳು ತುಂಬಾನೇ ಖುಷಿಯಾಗಿದ್ದಾರೆ.


Ad Widget

ಪಿ ಆರ್ ಕೆ ಸ್ಟುಡಿಯೋಸ್ ನಲ್ಲಿ ನಿರ್ಮಾಣದ ಎಲ್ಲಾ ಸಿನಿಮಾಗಳು ರಿಲೀಸ್ ಆಗೋದು ಗುರವಾರ. ಹಾಗಾಗಿ ಅಕ್ಟೋಬರ್ 27 ರಂದು ಇಲ್ಲವಾದಲ್ಲಿ ನವೆಂಬರ್ 3 ರಂದು ಎಂದು ಹೇಳಿದ್ದಾರೆ. ಕರ್ನಾಟಕದ ದಟ್ಟ ಕಾನನದ ಒಳಗೆ ಗಂಧದಗುಡಿ ಚಿತ್ರೀಕರಣ ಮಾಡಲಾಗಿದೆ. ಪ್ರಕೃತಿ ಸೌಂದರ್ಯವನ್ನು, ವನ್ಯ ಜೀವಿಗಳನ್ನು ಅದ್ಭುತವಾಗಿ ಸೆರೆಹಿಡಿಯಲಾಗಿದೆ. ಇದರ ಟೀಸರ್ ನೋಡಿಯೇ ಜನ ರೋಮಾಂಚನಗೊಂಡಿದ್ದಾರೆ. ಕಣ್ಮನ ತಣಿಸುವಂತಹ ಛಾಯಾಗ್ರಹನ ಎಲ್ಲರಲ್ಲೂ ಬೆರಗು ಮೂಡಿಸಿದ್ದು, ಇದಕ್ಕಾಗಿ ಪುನೀತ್ ಬಹಳ ಶ್ರಮವಹಿಸಿದ್ದಾರೆ.

ಸದ್ಯ ಹರಿದಾಡುತ್ತಿರುವ ಸುದ್ದಿ ಕೇಳಿ ಸ್ಯಾಂಡಲ್ ವುಡ್ ನ ಅನೇಕ ಸೆಲೆಬ್ರಿಟಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಗಂಧದ ಗುಡಿ ಮೂಲಕ ಪುನೀತ್ ಅವರನ್ನು ಮತ್ತೊಮ್ಮೆ ಕಣ್ಣು ತುಂಬಿಕೊಳ್ಳಲು ಇದ್ದು, ಈ ಸಾಕ್ಷ್ಯ ಚಿತ್ರದಲ್ಲಿ ಪುನೀತ್ ಅವರದ್ದೇ ಧ್ವನಿ ಇದೆ ಎಂಬುದು ವಿಶೇಷ.

Ad Widget

Ad Widget

Ad Widget

ನಟ ಪುನೀತ್‌ರಾಜ್‌ಕುಮಾರ್ ಅವರ ಬಹುದೊಡ್ಡ ಕನಸು ‘ಗಂಧದಗುಡಿ’ಸಾಕ್ಷ್ಯ ಚಿತ್ರದ ಟೈಟಲ್ ಟೀಸರ್ ಒಂದೇ ದಿನಕ್ಕೆ 30 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಈ ಮೂಲಕ ಯೂಟ್ಯೂಬ್‌ನಲ್ಲಿ ದಾಖಲೆ ಮಾಡಿದೆ. ಮೂರು ಲಕ್ಷದ ಎಪ್ಪತ್ತೈದು ಸಾವಿರ ಲೈಕ್ಸ್ ಬಂದಿದ್ದು, ಒಂದೇ ಒಂದು ಡಿಸ್ ಲೈಕ್ ಕೂಡ ಬಂದಿಲ್ಲ. ಅಷ್ಟರ ಮಟ್ಟಿಗೆ ಪುನೀತ್‌ರಾಜ್‌ಕುಮಾರ್ ಅವರ ಗಂಧದಗುಡಿ ಕನ್ನಡಿಗರಲ್ಲಿ ಕ್ರೇಜ್ ಹಾಗೂ ಕುತೂಹಲ ಹುಟ್ಟಿಸಿದೆ. ಖ್ಯಾತ ಛಾಯಾಗ್ರಾಹಕ ಅಮೋಘವರ್ಷ ಜತೆ ರೂಪಿಸಿರುವ ಈ ಪ್ರಕೃತಿ ಸೌಂದರ್ಯದ ಟೈಟಲ್ ಟೀಸರ್ ಈ ಮಟ್ಟಕ್ಕೆ ಹಿಟ್ ಆಗಿದ್ದು, ಚಿತ್ರಮಂದಿರದಲ್ಲಿ ದೊಡ್ಡ ಪರದೆ ಮೇಲೆ ಮೂಡಿದಾಗ ಯಾವ ಮಟ್ಟಕ್ಕೆ ಗೆಲ್ಲುತ್ತದೆಂಬ ನಿರೀಕ್ಷೆಯ ಮಾತುಗಳು ಆಗಲೇ ಶುರುವಾಗಿವೆ.

ಕೊರೋನಾ ಲಾಕ್‌ಡೌನ್‌ ಸಮಯಲ್ಲಿ ಪುನೀತ್‌ ರಾಜ್‌ಕುಮಾರ್ ವರ್ಕೌಟ್ ಮಾತ್ರವಲ್ಲದೇ ಕರ್ನಾಟಕದ ಕಾಡುಗಳಿಗೆ ಭೇಟಿ ನೀಡಿ, ಅಲ್ಲಿನ ಸುಂದರ ತುಣುಕನ್ನು ಡಾಕ್ಯುಮೆಂಟರಿ ಮೂಲಕ 2021ರ ಕನ್ನಡ ರಾಜ್ಯೋತ್ಸವಕ್ಕೆ ಜನರ ಮುಂದಿಡಲು ರೆಡಿಯಾಗಿದ್ದರು. ಆದರೆ ಹೃದಯಘಾತದಿಂದ ಅವರೇ ನಮ್ಮನ್ನು ಅಗಲಿದರು. ಪಿಆರ್‌ಕೆ ಸಂಸ್ಥೆ ನಡೆಸುತ್ತಿರುವ ಅವರ ಪತ್ನಿ ಅಶ್ವಿನಿ, ಪುನೀತ್‌ ಕನಸು ನನಸು ಮಾಡಲು ಮುಂದಾಗಿ, ರಾಜ್ಯದ ಮುಖ್ಯಮಂತ್ರಿಗಳ ಸಾಥ್‌ನೊಂದಿಗೆ ಚಿತ್ರದ ಟೈಟಲ್ ಟೀಸರ್ ರಿಲೀಸ್ ಮಾಡಿದ್ದಾರೆ. ಇದೀಗ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ‘ಗಂಧದ ಗುಡಿ’ ಹೇಗೆ ಮೂಡಿ ಬರಲಿದೆ ಎಂಬುದೇ ಕುತೂಹಲವಾಗಿ ಉಳಿದಿದೆ..

error: Content is protected !!
Scroll to Top
%d bloggers like this: