ನರೇಂದ್ರ ಮೋದಿ ಚಾಲನೆ ಮಾಡಿರುವ ನಾಲ್ಕು ಹೊಸ ಡಿಜಿಟಲ್ ಯೋಜನೆಗಳ ಕುರಿತು ಮಾಹಿತಿ
ಪ್ರಧಾನಿ ಮೋದಿ ಸರ್ಕಾರ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಲೇ ಬಂದಿದ್ದು, ಇದೀಗ ಡಿಜಿಟಲ್ ಇಂಡಿಯಾ ವೀಕ್ 2022 ಯನ್ನು ಗಾಂಧಿನಗರದಲ್ಲಿ ಸೋಮವಾರ ಉದ್ಘಾಟಿಸುವುದರ ಜೊತೆಗೆ ನಾಲ್ಕು ಡಿಜಿಟಲ್ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ಡಿಜಿಟಲ್ ಇಂಡಿಯಾ ಭಾಷಿಣಿ, ಡಿಜಿಟಲ್ ಇಂಡಿಯಾ ಜೆನೆಸಿಸ್,indiastack. Global,ಮತ್ತು my scheme ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿ, ಚಿಪ್ಸ್ 2 ಸ್ಮಾರ್ಟ್ ಒಫ್ ಕಾರ್ಯಕ್ರಮದ ಅಡಿಯಲ್ಲಿ ಬೆಂಬಲಿತವಾಗಿರುವ 30 ಸಂಸ್ಥೆಗಳ ಮೊದಲ ಸಮೂಹವನ್ನು ಪ್ರಧಾನಿ ಘೋಷಿಸಿದರು.
ಪ್ರಧಾನಿಯವರು ಚಾಲನೆ ಮಾಡಿರುವ ಯೋಜನೆಗಳ ವಿವರಣೆ ಹೀಗಿದೆ :
1. ಡಿಜಿಟಲ್ ಇಂಡಿಯಾ ಭಾಷಿಣಿ ಯೋಜನೆ :
ಈ ಯೋಜನೆಯು ಧ್ವನಿ ಆಧಾರಿತ ಸೇವೆ ಸೇರಿದಂತೆ ಇಂಟರ್ನೆಟ್ ಮತ್ತು ಡಿಜಿಟಲ್ ಸೇವೆಗಳನ್ನು ಭಾರತೀಯ ಭಾಷೆಗಳಲ್ಲಿ ಪಡೆಯಲು ಸಹಾಯ ಮಾಡುತ್ತದೆ ಮತ್ತು ಕಂಟೆಂಟ್ ಗಳನ್ನು ಭಾರತೀಯ ಭಾಷೆಯಲ್ಲಿ ಬರೆಯಲು ಸುಲಭವಾಗುತ್ತದೆ. ಈ ಯೋಜನೆಯು ಭಾಷಾದನ್ ಎಂಬ ಕಾರ್ಡ್ ಸೋರ್ಸಿಂಗ್ ಮೂಲಕ ಡೇಟಾ ಸೆಟ್ ಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ಸರ್ಕಾರ ಹೇಳಿದೆ.
2.ಡಿಜಿಟಲ್ ಇಂಡಿಯಾ ಜೆನಿಸಿಸ್ ಯೋಜನೆ :
ಇದು ಜೆನೆಕ್ಸ್ ಸಪೋರ್ಟ್ ಫಾರ್ ಇನೋವೆಟಿವ್ ಸ್ಮಾರ್ಟ್ ಒಫ್. ಇದರ ಉದ್ದೇಶವು ನ್ಯಾಷನಲ್ ಡೀಪ್ ಟೆಕ್ ಸ್ಮಾರ್ಟ್ ಪ್ಲಾಟ್ ಪೊರ್ಮ್ ಯನ್ನು ರಚಿಸುವುದು ಆಗಿದೆ. ಭಾರತದ ಟೈರ್ I and ಟೈರ್ III ನಗರಗಳಲ್ಲಿ ಯಶಸ್ವಿಯಾಗಿ ಸ್ಮಾರ್ಟ್ ಆಫ್ ಗಳನ್ನು ಅನ್ವೇಷಣೆ ಮಾಡಲು , ಬೆಂಬಲಿಸಲು ಮತ್ತು ಬೆಳೆಸಲು ಮಾಡುವ ಪ್ರಯತ್ನ ವಾಗಿದೆ. ಈ ಯೋಜನೆಯು ಒಟ್ಟು 750 ಕೋಟಿ ವೆಚ್ಚವನ್ನು ಹೊಂದಿದೆ.
3.indiastack Global ಯೋಜನೆ :
ಈ ಯೋಜನೆಯು ಆಧಾರ್, UPI ಮತ್ತು ಡಿಜಿಲಾಕಾರ್, ಕೋವಿಡ್ ವ್ಯಾಕ್ಸಿನೇಷನ್ ಪ್ಲಾಟ್ ಪೊರ್ಮ್, ಸರ್ಕಾರಿ ಇ ಮಾರ್ಕೆಟ್ ಪ್ಲಸ್, ದೀಕ್ಷಾ ಪ್ಲಾಟ್ ಪೊರ್ಮ್, ಆಯುಷ್ಮಾನ್ ಭಾರತ್ ಹೆಲ್ತ್ ಡಿಜಿಟಲ್ ಮಿಷನ್ ಗಳು, ಇಂಡಿಯಾ ಸ್ಟಾಕ್ ಅಡಿಯಲ್ಲಿ ಜಾರಿಗೊಳಿಸಲಾದ ಪ್ರಮುಖ ಯೋಜನೆಗಳಾಗಿವೆ. ಜನಸಂಖ್ಯೆಯ ಪ್ರಮಾಣದಲ್ಲಿ ಡಿಜಿಟಲ್ ಪರಿವರ್ತನೆ ಯೋಜನೆಗಳನ್ನು ನಿರ್ಮಿಸುವಲ್ಲಿ ಭಾರತವನ್ನು ನಾಯಕನಾಗಿ ಇರಿಸುವಲ್ಲಿ ಸಹಾಯ ಮಾಡುತ್ತದೆ.
4.my scheme ಯೋಜನೆ :
ಇದೊಂದು ಸರ್ಕಾರಿ ಸೇವೆಗಳನ್ನು ಬಳಸಲು ಒದಗಿಸುವ ಸೇವಾ ಶೋಧನೆಯಾಗಿದೆ. ಇದು ಒನ್ ಸ್ಮಾಟ್ ಸರ್ಚ್ ಮತ್ತು ಅನ್ವೇಷಣೆ ಪೋರ್ಟಲ್ ನ್ನು ಒದಗಿಸುವ ಗುರಿ ಹೊಂದಿದೆ. ಅಲ್ಲಿ ಬಳಕೆದಾರರು ನಾವು ಯಾವ ಸ್ಕೀಮ್ ಅಡಿ ಅರ್ಹ ಎಂಬುದು ತಿಳಿಯಬಹುದು. ಇದು ಬಹು online ಅಪ್ಲಿಕೇಶನ್ ಗಳು ಅಥವಾ ಸೇವೆಗಳು ಒಂದೆ ಸೈಟ್ ನಲ್ಲಿ ಪರಿಚಯಿಸುವ ಗುರಿ ಹೊಂದಿದೆ.
C2S ಪ್ರೋಗ್ರಾಮ್ :
ಕೊನೆಯದಾಗಿ ಕಾರ್ಯಕ್ರಮದ, ಅಡಿಯಲ್ಲಿ ಬೆಂಬಲಿತವಾಗಿರುವ 30 ಸಂಸ್ಥೆ ಗಳ ಮೊದಲ ಸಮೂಹವನ್ನು ಪ್ರಧಾನಿ ಘೋಷಿಸಿದರು. ಗಮನಾರ್ಹವಾಗಿ C2S ಪ್ರೋಗ್ರಾಮ್, ಪದವಿ, ಸ್ನಾತಕೋತ್ತರ, ಸಂಶೋಧನ ಹಂತದಲ್ಲಿ ಸೆಮಿಕಂಡಕ್ಟರ್, ಚಿಪ್ ಗಳ ತಯಾರಿಕ ಕ್ಷೇತ್ರಗಳಲ್ಲಿ, ಮಾನವ ಸಂಪನ್ಮೂಲಗಳನ್ನು ತರಬೇತಿ ಕೊಡುವ ಉದ್ದೇಶ ಹೊಂದಿದೆ.
ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ಇಲೆಕ್ಟ್ರಾನಿಕ್ ತಯಾರಿಕೆಯಲ್ಲಿ 300 ಬಿಲಿಯನ್ ಡಾಲರ್ ಗಿಂತ ಹೆಚ್ಚಿನ ಮಟ್ಟಕ್ಕೆ ಕೊಂಡೋಯ್ಯುವ ಗುರಿಯಲ್ಲಿ ಭಾರತ ಸರ್ಕಾರ ಕಾರ್ಯ ನಿರ್ವಹಿಸುತ್ತಿರುವುದು ಎಂದು ಪ್ರಧಾನಿ ಈ ಸಂದರ್ಭದಲ್ಲಿ ಹೇಳಿದ್ದಾರೆ.