ಬೆಲೆ ಏರಿಕೆ ಬಿಸಿ ಮುಟ್ಟಿಸಿದ ಸರಕಾರ | ಗೃಹಬಳಕೆಯ LPG ಬೆಲೆ ಮತ್ತೊಮ್ಮೆ ಏರಿಕೆ !
ಹಣದುಬ್ಬರವು ಮತ್ತೊಂದು ಬಾರಿ ಸಾಮಾನ್ಯ ಜನರನ್ನು ಬಾಧಿಸಿದೆ. 14.2 ಕೆ.ಜಿ.ಯ ದೇಶೀಯ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಹೆಚ್ಚಾಗಿದೆ. ಅವುಗಳ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ 50 ರೂ.ಗಳಷ್ಟು ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಈಗ 1053 ರೂ.ಗೆ ಲಭ್ಯವಾಗಲಿದೆ.
14.2 ಕೆಜಿ ಸಿಲಿಂಡರ್ ಜೊತೆಗೆ, 5 ಕೆಜಿಯ ಸಣ್ಣ ದೇಶೀಯ ಸಿಲಿಂಡರ್ಗಳ ಬೆಲೆಯೂ ಹೆಚ್ಚಾಗಿದೆ. ಇದರ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ 18ರೂ.ಗಳಷ್ಟು ಹೆಚ್ಚಿಸಲಾಗಿದೆ.
ಮತ್ತೊಂದೆಡೆ, 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಇದರ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ 8.50 ರೂ.ಗಳಷ್ಟು ಕಡಿಮೆ ಮಾಡಲಾಗಿದೆ.
ಕೋಳಿ ಮೊಟ್ಟೆ ಬೆಲೆ ಏರಿಕೆ : ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಇದೀಗ ಮತ್ತೊಂದು ಶಾಕ್, ಕಳೆದ ಒಂದು ವಾರದಿಂದ ಕೋಳಿ ಮೊಟ್ಟೆ ಬೆಲೆಯಲ್ಲ 1.50 ರೂ. ಏರಿಕೆಯಾಗಿದೆ.
ಹೌದು ಕೋಳಿ ಆಹಾರ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಮೊಟ್ಟೆ ಉತ್ಪಾದನೆ ಇಳಿಕೆಯಾಗಿದ್ದು, ಒಂದೇ ವಾರದಲ್ಲಿ ಒಂದು ಮೊಟ್ಟೆ ಬೆಲೆಯಲ್ಲಿ 1.50 ರೂ. ಏರಿಕೆಯಾಗುವ ಮೂಲಕ
6.50 ರೂ. ತಲುಪಿದೆ. ಕೋಳಿ ಸಾಕಾಣೆಗೆ ಅಗತ್ಯವಿರುವ ಸೋಯಾಬಿನ್, ಮೆಕ್ಕೆಜೋಳ ಸೇರಿದಂತೆ ಮತ್ತಿತರ ಆಹಾರ ಪದಾರ್ಥಗಳ ಬೆಲೆಯಲ್ಲಿ ಶೇ. 10 ರಿಂದ 15 ರವರೆಗೆ ಹೆಚ್ಚಳವಾಗಿದೆ. ಪರಿಣಾಮ ಜೂನ್ ಅಂತ್ಯದಲ್ಲಿ 5 ರೂ. ಇದ್ದ ಕೋಳಿ ಮೊಟ್ಟೆ ಬೆಲೆ ಇದೀಗ 6.50 ರೂ.ಗೆ ಏರಿಕೆಯಾಗಿದೆ.