Breaking News | ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಭೀಕರ ಕೊಲೆ!
ಬೆಳ್ಳಂಬೆಳಿಗ್ಗೆಯ ಭೀಕರ ರಕ್ತಪಾತಕ್ಕೆ ಹುಬ್ಬಳ್ಳಿ ಅಕ್ಷರಶ: ಬೆದರಿ ಬೆಚ್ಚಿದೆ. ಅತ್ಯಂತ ಬರ್ಭರವಾಗಿ ಸರಳ ವಾಸ್ತು ಖ್ಯಾತಿಯ ಗುರೂಜಿ ಚಂದ್ರಶೇಖರ್ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಕೊಲೆಯಾಗಿದ್ದಾರೆ. ಭಕ್ತರ ಸೋಗಿನಲ್ಲಿ ಬಂದು, ಚಾಕು ಇರಿದು ಇರಿದು ಕೊಲೆ ಮಾಡಿ, ಇನ್ನು ಬದುಕುವುದು ಅಸಾಧ್ಯ ಅನ್ನುವಷ್ಟು ಮನಸಾರೆ ಚುಚ್ಚಿ ಹಂತಕರು ಪರಾರಿಯಾಗಿದ್ದಾರೆ. ಅವಳಿ ನಗರ ನಡೆದ ರಕ್ತಪಾತಕ್ಕೆ ತಲ್ಲಣ ಅನುಭವಿಸಿದೆ.
ಘಟನೆ ನಡೆದ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಕಮೀಷನರ್ ಲಾಬೂರಾಮ್ ಆಗಮಿಸಿದ್ದು, ಸ್ಥಳದ ಪರಿಶೀಲನೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕಾಗಿ ಇವರ ಹತ್ಯೆ ಮಾಡಲಾಗಿದೆ ಎನ್ನುವುದರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಹೋಟೆಲ್ ನಲ್ಲಿ ರಿಸಪ್ಶನ್‌ನಲ್ಲಿಯೇ ಚಾಕು ಇರಿದು ಹಂತಕರು ಪರಾರಿಯಾಗಿದ್ದಾರೆ. ಇಂದು ಬೆಳಿಗ್ಗೆ ಈ ಘಟನೆ ನಡೆದಿದ್ದು, 12.30 ರ ಸುಮಾರಿಗೆ ಹೊರಜಗತ್ತಿಗೆ ಮಾಹಿತಿ ಲಭ್ಯವಾಗತೊಡಗಿದೆ.
ಘಟನೆಯ ಪೂರ್ತಿ ವಿವರ:
ಇಬ್ಬರು ವ್ಯಕ್ತಿಗಳು ಮೊದಲು ಅಲ್ಲಿಗೆ ಬಂದಿದ್ದು, ಆಶೀರ್ವಾದ ಪಡೆಯುವಂತೆ ಕಾಲು ಹಿಡಿದಿದ್ದರು. ಚಂದ್ರಶೇಖರ್ ಗುರೂಜಿ ಹೋಟೆಲ್ ರೂಮಿನಿಂದ ಬರುವುದನ್ನೇ ಕಾದು ಕುಳಿತಿದ್ದ ದುಷ್ಕರ್ಮಿಗಳಲ್ಲಿ ಓರ್ವ ಅವರ ಆಶೀರ್ವಾದ ಬೇಡುವ ನೆಪದಲ್ಲಿ ಕಾಲಿಗೆ ಬಿದ್ದಿದ್ದ. ಅಷ್ಟರಲ್ಲಿ ಇನ್ನೊಬ್ಬ ಚಾಕು ಪ್ರಹಾರ ಶುರುಮಾಡಿದ್ದ. ಗುರೂಜಿ ಆಶೀರ್ವಾದ ನೀಡುತ್ತಿರುವಂತೆ ಏಕಾಏಕಿ ಅವರ ಮೇಲೆ ಸುಮಾರು ಮುಕ್ಕಾಲು- ಒಂದು ಅಡಿ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಒಬ್ಬಾತ ಅವರನ್ನು ಹಿಡಿದುಕೊಂಡರೆ, ಇನ್ನೊಬ್ಬಾತ ನಿರಂತರವಾಗಿ ಚೂರಿ ಇರಿದಿದ್ದಾನೆ. ಹಲವು ನಿಮಿಷಗಳ ಕಾಲ ಚೂರಿ ಇರಿಯುತ್ತಲೇ ಹೋಗಿದ್ದಾನೆ. ನೆಲಕ್ಕೆ ಬಿದ್ದು ರಕ್ತ ಕೊಡಿಯಂತೆ ಹರಿದರೂ ಚೂರಿ ಇರಿತ ನಿಲ್ಲಿಲ್ಲ. ಮಧ್ಯೆ ಮಧ್ಯೆ ಗುರೂಜಿಮ್ ಪ್ರತಿಭಟಿಸಿದ್ದಾರೆ. ಕಾಲಿನಿಂದ ತಳ್ಳಲು ಪ್ರಯತ್ನಿಸಿದ್ದಾರೆ. ಜೀವ ಉಳಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಹೊರಳಿಸಿ ಹೊರಳಿಸಿ, ಕುತ್ತಿಗೆ, ಎದೆ, ಹೊಟ್ಟೆ, ಬೆನ್ನು, ಹಿಂಭಾಗ ಇತ್ಯಾದಿಯಾಗಿ ಹಲ್ಲೆ ನಡೆದಿದೆ. ಒಟ್ಟು 60 ಬಾರಿ ಇರಿದಿರಿದು ಅವರನ್ನು ಕೊಲೆ ಮಾಡಲಾಗಿದೆ. ದೇಹ ಛಿದ್ರ ಛಿದ್ರ ಆಗುವ ತನಕ ಕಟುಕರು ಕೊಚ್ಚಿ ಹೋಗಿದ್ದಾರೆ.
ಹೋಟೆಲಿನ ಸಿಸಿ ಟಿವಿಯಲ್ಲಿ ಸಂಪೂರ್ಣ ಕೊಲೆ ದಾಖಲಾಗಿದೆ. ಹೋಟೆಲಿನಲ್ಲಿ ಇದ್ದ ಸ್ಟಾಫ್ ನೋಡನೋಡುತ್ತಿದ್ದಂತೆ ಕೊಲೆ ನಡೆದಿದೆ. ಯಾವುದೇ ಭಯ ಇಲ್ಲದೆ ಅಪರಾಧಿಗಳು ಕೊಲೆಯಲ್ಲಿ ತಲ್ಲೀನ ದುರದೃಷ್ಟವಶಾತ್ ಯಾರೊಬ್ಬ ಕೂಡಾ ಕೊಲೆಯನ್ನು ತಡೆಯಲು ಧೈರ್ಯ ತೋರಿಲ್ಲ. ಕೊಲೆ ನಡೆದ ನಂತರ ಚಾಕು ಸಮೇತ ಆರೋಪಿಗಳು ಪರಾರಿ ಆಗಿದ್ದಾರೆ. ತೀವ್ರ ದ್ವೇಷ ಇರುವ ಹಿನ್ನೆಲೆಯಲ್ಲಿ ಈ ಪ್ಲಾನ್ ಮರ್ಡರ್ ನಡೆದದ್ದಂತೂ ಖಚಿತ.
ಜ್ಯೋತಿಷ್ಯ ಕೇಳಿ, ಆಚರಿಸಿ ನೊಂದವರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅವರು ಹುಬ್ಬಳ್ಳಿಯ ವಿದ್ಯಾನಗರದ ಪ್ರೆಸಿಡೆಂಟ್ ಹೋಟೆಲಿನಲ್ಲಿ ತಂಗಿದ್ದರು. ಅಲ್ಲಿಯೇ ರಿಸೆಪ್ಷನ್ ನಲ್ಲಿ ಗ್ರಾಹಕರ ಥರ ಬಂದ ವ್ಯಕ್ತಿ ಕೊಂದು ಪರಾರಿ ಆಗಿದ್ದಾನೆ. ಆ ಸಿಸಿ ಟಿವಿ ದೃಶ್ಯಗಳು ಈಗ ಲಭ್ಯ ಆಗಿವೆ. ಸರಳ ಜ್ಯೋತಿಷ್ಯದ ಮೂಲಕ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದರು ಚಂದ್ರಶೇಖರ ಗುರೂಜಿ. ಇತ್ತೀಚಿಗೆ, ತಾನು ದೇವರೊಂದಿಗೆ ಅನುಸಂಧಾನ ( ಸಂಹವನ ) ಸಾಧಿಸಿ, ಭಕ್ತರ ಕಷ್ಟಗಳನ್ನೆಲ್ಲ ಪರಿಹರಿಸುತ್ತೇನೆ ಎನ್ನುತ್ತಿದ್ದರು ಚಂದ್ರಶೇಖರ್ ಗುರೂಜಿ. ಅದನ್ನು ನಂಬುವುದು ಕಷ್ಟವಾಗುತ್ತಿತ್ತು. ಎಲ್ಲೋ ಆರ್ಥಿಕ ಅಥವಾ ಕಾರಣಗಳಿಗಾಗಿ, ಮುಖ್ಯವಾಗಿ ಖರ್ಚು ಮಾಡಿದ ನಂತರ ಕೂಡಾ ಪರಿಹಾರ ದೊರೆಯದ ಕಾರಣ ಕೊಲೆ ನಡೆದಿರಬಹುದು ಎಂಬ ಬಲವಾದ ಸಂಶಯ ಮೂಡಿದೆ.
ಸರಳ ವಾಸ್ತು ಸಲಹೆ ನೀಡುವ ಮೂಲಕ ಫೇಮಸ್ ಆಗಿದ್ದ ಚಂದ್ರಶೇಖರ್ ಹಲವು ಪುಸ್ತಕಗಳನ್ನೂ ಬರೆದಿದ್ದರು. ಸರಳ ವಾಸ್ತು ಹೆಸರಿನಲ್ಲಿಯೇ ಟಿವಿ ಕಾರ್ಯಕ್ರಮ ನಡೆಸುವ ಮೂಲಕ ಕರ್ನಾಟಕದಲ್ಲಿ ಮನೆಮಾತಾಗಿದ್ದರು.
ಲೇಟೆಸ್ಟ್ ಅಪ್ಡೇಟ್ !
ಚಂದ್ರಶೇಖರ ಗುರೂಜಿ ಅವರು ಬಾಗಲಕೋಟೆ ಮೂಲದವರು. ಇವರ ಮೊದಲ ಹೆಸರು ಚಂದ್ರಶೇಖ ವಿರುಪಾಕ್ಷಪ್ಪ ಅಂಗಡಿ, ಬಾಗಲಕೋಟೆಯಲ್ಲೇ ವಿದ್ಯಾಭ್ಯಾಸ ಮಾಡಿದ್ದ ಇವರು ಬಾಗಲಕೋಟೆ ಸಿವಿಲ್ ವಿಭಾಗದಲ್ಲಿ ಪದವಿ ಪಡೆದರು. ಬಳಿಕ 1998ರಲ್ಲಿ ಮುಂಬೈಗೆ ತೆರಳಿ ಕಾಂಟ್ರಾಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ಐದಾರು ವರ್ಷಗಳ ಬಳಿಕ ಸಿಂಗಾಪುರಕ್ಕೆ ತೆರಳಿದ ಚಂದ್ರಶೇಖರ ಅವರು ವಾಸ್ತು ಶಾಸ್ತ್ರ ಕಲಿತರು. ವಾಪಸ್ ಮುಂಬೈಗೆ ಆಗಮಿಸಿ ‘ಸರಳ ವಾಸ್ತು’ ಹೆಸರಿನಲ್ಲಿ ಕಚೇರಿ ಆರಂಭಿಸಿದ್ದರು.
ಬಸವೇಶ್ವರ ಇಂಜನಿಯರಿಂಗ್ ಕಾಲೇಜಿನಲ್ಲಿ ಬಿಇ ಸಿವಿಲ್ ವಿಭಾಗದಲ್ಲಿ ಪದವಿ ಪಡೆದರು. ಬಳಿಕ 1998ರಲ್ಲಿ ಮುಂಬೈಗೆ ತೆರಳಿ ಕಾಂಟ್ರಾಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ಐದಾರು ವರ್ಷಗಳ ಬಳಿಕ ಸಿಂಗಾಪುರಕ್ಕೆ ತೆರಳಿದ ಚಂದ್ರಶೇಖರ ಅವರು ವಾಸ್ತು ಶಾಸ್ತ್ರ ಕಲಿತರು. ವಾಪಸ್ ಮುಂಬೈಗೆ ಆಗಮಿಸಿ ‘ಸರಳ ವಾಸ್ತು’ ಹೆಸರಿನಲ್ಲಿ ಕಚೇರಿ ಆರಂಭಿಸಿದ್ದರು.
ಇದೀಗ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿದ್ದಾರೆ. ಶ್ವಾನದಳಗಳು ಪೋಲೀಸರ ಹಗ್ಗ ಜಗ್ಗಿಕೊಂಡು ಕಾರ್ಯಾಚರಣೆಗೆ ಇಳಿದಿವೆ. ಜಿಲ್ಲಾ ಪೊಲೀಸ್ ಮುಖ್ಯಸ್ಥರು ತಂಡ ರೆಡಿಮಾಡಿದ್ದಾರೆ. ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಚಂದ್ರಶೇಖರ್ ಗುರೂಜಿ ಹತ್ಯೆ ಮಾಡಿದವರು ಅವರ ಆಪ್ತರೇ ಎಂಬ ಮಾಹಿತಿ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಗುರೂಜಿ ಕೊಲೆ ಬಳಿಕ ಆಪ್ತ ಮಹಂತೇಶ್ ಶಿರೋಳ್ ತಲೆಮರೆಸಿಕೊಂಡಿದ್ದು ಸಧ್ಯ ಹುಬ್ಬಳ್ಳಿಯ ಗೋಕುಲ್ ರೋಡ್ ಠಾಣೆ ಪೊಲೀಸರು ಮಹಂತೇಶ್ ಪತ್ನಿ ವನಜಾಕ್ಷಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವನಜಾಕ್ಷಿ ಕೂಡ 2019 ರವರೆಗೆ ಸರಳ ವಾಸ್ತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಚಂದ್ರಶೇಖರ್ ಗುರೂಜಿ ಹತ್ಯೆ ಮಾಡಿದವರು ಅವರ ಆಪ್ತರೇ ಎಂಬ ಮಾಹಿತಿ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಗುರೂಜಿ ಕೊಲೆ ಬಳಿಕ ಆಪ್ತ ಮಹಂತೇಶ್ ಶಿರೋಳ್ ತಲೆಮರೆಸಿಕೊಂಡಿದ್ದು ಸಧ್ಯ ಹುಬ್ಬಳ್ಳಿಯ ಗೋಕುಲ್ ರೋಡ್ ಠಾಣೆ ಪೊಲೀಸರು ಮಹಂತೇಶ್ ಪತ್ನಿ ವನಜಾಕ್ಷಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವನಜಾಕ್ಷಿ ಕೂಡ 2019 ರವರೆಗೆ ಸರಳ ವಾಸ್ತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕೊಲೆಗಾರರು ಕಳೆದ 2 ವರ್ಷಗಳಿಂದ ಗುರೂಜಿ ಅವರ ಭಕ್ತರಾಗಿದ್ದರು ಎಂಬ ಮಾಹಿತಿ ಇದೆ. ಕೊಲೆ ಆರೋಪಿಗಳಾದ ಮಹಾಂತೇಶ ಶಿರೂರ ಮತ್ತು ಮಂಜುನಾಥ್ ಮರೆವಾಡ ರ ಬೇಟೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಗುರೂಜಿಯಿಂದ ಪರಿಹಾರವನ್ನು ಕೇಳಿ ಅವರಿಂದ ಸೂಕ್ತ ಪರಿಹಾರ ಸಿಗದೇ ಈ ರೀತಿ ಮಾಡಿದ್ದಾರಾ ಎಂಬ ಅನುಮಾನ ಕೂಡಾ ಬಲವಾಗಿ ಮೂಡಿದೆ. ಇಂದು ಬೆಳಗ್ಗೆ ಗುರೂಜಿಗೆ ಕರೆ ಮಾಡಿದ್ದ ದುಷ್ಕರ್ಮಿಗಳು ಅವರು ಹುಬ್ಬಳ್ಳಿ ಹೋಟೆಲ್ ಇರುವುದನ್ನು ಧೃಡಪಡಿಸಿಕೊಂಡು ಅರ್ಧ ಗಂಟೆಗಳ ಕಾಲ ಕಾರಿನಲ್ಲಿಯೇ ಕುಳಿತು ಕಾದು ಬಳಿಕ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.